News Kannada
Thursday, December 01 2022

ಕರ್ನಾಟಕ

ನದಿತೊರೆಗಳ ಬಳಿ ಮನೆಗಳನ್ನು ನಿರ್ಮಿಸಬೇಡಿ: ಭೂ ವೈಜ್ಞಾನಿಕ ನಿರ್ದೇಶಕ ಕೆ.ವಿ.ಮಾರುತಿ ಸಲಹೆ - 1 min read

Photo Credit :

ನದಿತೊರೆಗಳ ಬಳಿ ಮನೆಗಳನ್ನು ನಿರ್ಮಿಸಬೇಡಿ: ಭೂ ವೈಜ್ಞಾನಿಕ ನಿರ್ದೇಶಕ ಕೆ.ವಿ.ಮಾರುತಿ ಸಲಹೆ

ಮಡಿಕೇರಿ: ಭೂ ಕುಸಿತವನ್ನು ತಪ್ಪಿಸಲು ತಡೆಗೋಡೆ, ಚರಂಡಿ ನಿರ್ಮಾಣ ಮತ್ತು ನದಿ, ತೊರೆ, ಹಳ್ಳಕೊಳ್ಳದ ಬಳಿ ಮನೆ ನಿರ್ಮಿಸದಿರುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ವಿಭಾಗದ ರಾಜ್ಯ ನಿರ್ದೇಶಕ ಕೆ.ವಿ.ಮಾರುತಿ ಅವರು ಸಲಹೆ ನೀಡಿದ್ದಾರೆ.

ಪ್ರಕೃತಿ ವಿಕೋಪದ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಧಿಕಾರಿಗಳಿಗಾಗಿ ನಗರದ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಸ್ತೆ ಬದಿಯ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಇತರ ವಸ್ತುಗಳು ಚರಂಡಿಯಲ್ಲಿ ಇರಬಾರದು. ಬೆಂಚ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ, ದೂರವಾಣಿ ಸಂಪರ್ಕ ಮೂಲಕ ಮಾಹಿತಿ ತಲುಪಿಸುವುದು. ವದಂತಿಗೆ ಕಿವಿಗೊಡದಿರುವುದು ಮತ್ತಿತರ ಬಗ್ಗೆ ಗಮನಹರಿಸಬೇಕಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಪ್ರದೇಶಗಳಲ್ಲಿ ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ವರದಿಯನ್ನು ಸಿದ್ಧಪಡಿಸಲಾಗಿದ್ದು, ಪ್ರಾಥಮಿಕ ವರದಿಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಅಂತಿಮ ವರದಿ ನೀಡಬೇಕಿದೆ ಎಂದು ಮಾರುತಿ ಅವರು ಮಾಹಿತಿ ನೀಡಿದರು.

ಅತೀವೃಷ್ಟಿಯಿಂದ ಉಂಟಾದ ಹಾನಿ ಸಂಬಂಧ ನಡೆಸುತ್ತಿರುವ ಶಾಶ್ವತ ಕಾಮಗಾರಿಗಳಲ್ಲಿ ಹೆಚ್ಚಿನ ನಿಗಾವಹಿಸಿ ತಾಂತ್ರಿಕ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಇದರಿಂದ ಭೂ ಕುಸಿತ ಪ್ರಮಾಣವು ಕಡಿಮೆಯಾಗಲಿದೆ. ಇಳಿಜಾರು ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿರುವ ಲಾವಂಛ(ವೆಟ್ಟಿವರ್) ಹುಲ್ಲನ್ನು ಬೆಳೆಸಬೇಕು. ಇದನ್ನು ಬೆಳೆಸುವುದರಿಂದ ನೈಸರ್ಗಿಕವಾಗಿ ಬರೆಕುಸಿತ ಹಾಗೂ ಭೂ ಕುಸಿತವನ್ನು ತಗ್ಗಿಸಬಹುದು ಎಂದರು.

See also  ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು