News Kannada
Friday, December 09 2022

ಕರ್ನಾಟಕ

ಬಂಡೀಪುರದಲ್ಲಿ ಮೂವರು ಶ್ರೀಗಂಧ ಮರಗಳ್ಳರ ಬಂಧನ

Photo Credit :

ಬಂಡೀಪುರದಲ್ಲಿ ಮೂವರು ಶ್ರೀಗಂಧ ಮರಗಳ್ಳರ ಬಂಧನ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಬರುವ ಲಕ್ಕಿಪುರ ಕಾಲೋನಿಯ ಮೂವರು ಮರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಡರಾತ್ರಿ ಸುಮಾರು 11.30ರ ಸಮಯದಲ್ಲಿ ರಾತ್ರಿಪಾಳಿಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ವಡಗಟ್ಟೆಯ ಹುಣಸೆಮರದ ಹಳ್ಳದ ಸಮೀಪ ಮರ ಕಟಾವು ಮಾಡುತ್ತಿರುವ ಶಬ್ದವನ್ನು ಕೇಳಿದ ಕೂಡಲೇ ಕಾರ್ಯೋನ್ಮುಖರಾದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಗಾರ್ಡ್ ನವೀನ್, ಚಿಕ್ಕರಾಜು, ಚಿಕ್ಕಣ್ಣ, ದೇವಯ್ಯ, ಪ್ರಶಾಂತ್, ಹನುಮಂತು ಎಂಬುವವರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾದ ಸಮಯದಲ್ಲಿ ಆರೋಪಿಗಳಾದ ಚೆಲುವ, ಕ್ರಷ್ಣ, ಗಣೇಶ, ಸುರೇಶ, ಬೆಳ್ಳಿ, ಅಜಿತ್ ಎಂಬುವವರು ಪರಾರಿಯಾಗಲು ಯತ್ನಿಸಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದಾಗ ಗಾರ್ಡ್ ನವೀನ್ ಅವರು ಆತ್ಮ ರಕ್ಷಣೆಗೋಸ್ಕರ ಹಾರಿಸಿದ ಗುಂಡು ಆರೋಪಿ ಅಜಿತ್ ಬಲಗಾಲಿಗೆ ತಗುಲಿದಾಗ ಆರೋಪಿಯು ಅಲ್ಲಿಯೇ ಕುಸಿದು ಬಿದ್ದ ನಂತರ ಆರೋಪಿಗಳಾದ ಕೃಷ್ಣ, ಚೆಲುವ, ಗಣೇಶ ಎಂಬ ಮೂವರು ಪರಾರಿಯಾಗಿದ್ದಾರೆ.

ಆರೋಪಿ ಅಜಿತ್ ಗೆ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭವಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂಬ ವಿಸ್ವಾಸವನ್ನು ಎ.ಸಿ.ಎಫ್. ನಟರಾಜು ವ್ಯಕ್ತಪಡಿಸಿದ್ದಾರೆ.

ಮದ್ದೂರು ವಲಯದ ಅರಣ್ಯಾಧಿಕಾರಿ ಹಾಗೂ ಸಿಬ್ಬಂಖಈಔ ನವೀನಕುಮಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

See also  ಪುರಾತನ ವಸ್ತೆಂದು ನಂಬಿಸಿ ಮಾರಾಟ ಯತ್ನ : ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು