News Kannada
Friday, December 09 2022

ಕರ್ನಾಟಕ

ಫಲಿತಾಂಶಕ್ಕೂ ಮುನ್ನವೇ ಸಂಸದರಾದ್ರು ನಿಖಿಲ್..!

Photo Credit :

ಫಲಿತಾಂಶಕ್ಕೂ ಮುನ್ನವೇ ಸಂಸದರಾದ್ರು ನಿಖಿಲ್..!

ಮಂಡ್ಯ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ನಿಖಿಲ್ ಸಂಸದರಾಗಿದ್ದಾರೆ ಇದು ಹೇಗಪ್ಪಾ ಎಂದು ಅಚ್ಚರಿ ಪಡುತ್ತಿದ್ದಿರಾ? ಅದು ಹೇಗೆಂಬುದು ಇಲ್ಲಿದೆ.

ಜೆಡಿಎಸ್ ಅಭಿಮಾನಿಯೊಬ್ಬರು ವಿವಾಹದ ಆಹ್ವಾನ ಪತ್ರಿಕೆ ಪ್ರಕಟಿಸಿದ್ದು, ಅದರ ಒಂದು ಪುಟದಲ್ಲಿ ನಿಖಿಲ್ ಅವರ ಫೋಟೋ ಹಾಕಿ ಸಂಸದ ಎಂದು ಅಚ್ಚು ಹಾಕಿಸಲಾಗಿದೆ. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ಪತ್ರಿಕೆ ಹರಿದಾಡುತ್ತಿದೆ.

ಜೂ.6ರಂದು ಶ್ರೀರಂಗಪಟ್ಟಣದ ಟಿಎಪಿಎಸಿಎಂ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಮೇಳಾಪುರದ ನಾಗರತ್ನ ಹಾಗೂ ನಾಗರಾಜು ಎಂಬುವರ ಪುತ್ರ ಎಂ.ಎನ್.ಅಶೋಕ್‍ ಕುಮಾರ್ ಹಾಗೂ ಅದೇ ಗ್ರಾಮದ ಹೇಮಾವತಿ ಮತ್ತು ಬಾಲಚಂದ್ರ ಎಂಬುವರ ಪುತ್ರಿ ಅಭಿಲಾಷಾರ ವಿವಾಹ ನಿಶ್ಚಯವಾಗಿದೆ.

ವಿವಾಹ ಆಹ್ವಾನ ಪತ್ರಿಕೆಯ ಒಂದು ಪುಟದಲ್ಲಿ ನಿಖಿಲ್ ಫೋಟೋ ಹಾಕಿ ವಿಶೇಷ ಆಹ್ವಾನಿತರು ಜೆಡಿಎಸ್ ಯುವ ಸಾರಥಿ, ನಿಖಿಲ್ ಕುಮಾರಸ್ವಾಮಿ ಸಂಸದರು ಮಂಡ್ಯ ಜಿಲ್ಲೆ ಎಂದು ಪ್ರಕಟ ಮಾಡಿಸಿದ್ದಾರೆ. ನಿಖಿಲ್ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿ ಜೆಡಿಎಸ್ ಮುಖಂಡರು ಆಹ್ವಾನ ಪತ್ರಿಕೆಯನ್ನ ಸಿದ್ಧ ಮಾಡಿಸಿಕೊಂಡಿದ್ದಾರೆ.

ಚುನಾವಣೆ ಮುಗಿದ ಬೆನ್ನಲ್ಲೇ ಅಭಿಮಾನಿಯೊಬ್ಬ ನಿಖಿಲ್ ಸಂಸದರು ಎಂದು ನಾಮಫಲಕ ಗಿಫ್ಟ್ ಕೊಟ್ಟಿದ್ದರು.

ಹಾಸನದಲ್ಲಿನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೆಸರನ್ನು ಕೂಡ ಒಬ್ಬರು ತಮ್ಮ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಸಂಸದರು ಎಂದು ಹಾಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

See also  ರಾಮನಗರದಲ್ಲಿ ಸರಣಿ ಅಪಘಾತ: ಇಬ್ಬರು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು