News Kannada
Tuesday, December 06 2022

ಕರ್ನಾಟಕ

ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿ ಕೇಂದ್ರದ ಗಮನ ಸೆಳೆದ ಸಚಿವ ದೇಶಪಾಂಡೆ

Photo Credit :

ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿ ಕೇಂದ್ರದ ಗಮನ ಸೆಳೆದ ಸಚಿವ ದೇಶಪಾಂಡೆ

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದಕ್ಕೆ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯ ಕಂದಾಯ ಖಾತೆ ಸಚಿವ ಆರ್. ವಿ. ದೇಶಪಾಂಡೆ ಅವರು ಕೇಂದ್ರದಲ್ಲಿ ಬರುವ ನೂತನ ಸರ್ಕಾರ ಕೈಗೊಳ್ಳಬೇಕಾದ ಕೆಲವು ಆದ್ಯತಾ ಕೆಲಸಗಳ ಬಗ್ಗೆ ಅವರ ಗಮನ ಸೆಳೆದಿದ್ದಾರೆ.

ಈ ಬಗ್ಗೆ ಮೋದಿಯವರಿಗೆ ಪತ್ರ ಬರೆದ ಸಚಿವರು ಕೈಗಾರಿಕಾ ಉತ್ಪಾದನ ದೇಶದ ಜಿಡಿಪಿಯು ಶೇ.೩೦ರಷ್ಟು ಪಾಲು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ತಯಾರಿಕಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರ ಫಲವಾಗಿ ದೇಶದಲ್ಲಿ ಯುವ ಜನರಿಗೆ ಉದ್ಯೋಗವಿಲ್ಲದಂತಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದಿದೆ. ಜಿಡಿಪಿ ನಿರೀಕ್ಷಿತ ಬೆಳವಣಿಗೆ ತಲುಪಿರುವುದಿಲ್ಲ.

ದೇಶದ ನಿರುದ್ಯೋಗ ದರ ಶೇ.೧೬ ಇದ್ದು ಇದು ಕಳೆದ ೪ ವಶಕಗಳಲ್ಲೇ ಅತ್ಯಧಿಕವಾಗಿದೆ , ಇಂತಹ ಪರಿಸ್ಥಿತಿಯಲ್ಲಿ ತಯಾರಿಕಾ ವಲಯದ ಜಪಳಿ, ಆಟಿಕೆಗಳು, ಸೇವಾ ವಲಯ, ಇತ್ಯಾದಿ ಕೈಗಾರಿಕೆಗಳನ್ನುಸ್ಥಾಪಿಸುವುದಕ್ಕೆ ಆದ್ಯತೆ ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿ ಮಾಡುವುದು ಅವಶ್ಯವಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ವಿಶ್ವದಲ್ಲೇ ಭಾರತವು ಅತ್ಯಧಿಕ ಯುವಕರನ್ನು ಹೊಂದಿರುವ ದೇಶವಾಗಿದ್ದು, ಜಾಗತಿಕರಣ ಹಾಗೂ ಅಸ್ಥಿರ ತಾಂತ್ರಿಕತೆಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಕೌಶಲ್ಯವು ಅಗತ್ಯವಿದೆ. ಯುವಕರಲ್ಲಿ ಕೌಶಲ್ಯವನ್ನುಹೆಚ್ಚಿಸುವುದರಿಂದ ಅವರಲ್ಲಿ ಉದ್ಯೋಗ ಸಾಮರ್ಥ್ಯ , ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಸಾಮಾಜಿಕ ಸ್ವೀಕಾರವನ್ನೂ ಸಾಧ್ಯವಾಗಿಸುತ್ತದೆ. ಮಾನವ ಶ್ರಮವನ್ನು ಪ್ರತ್ಯಾಯೋಜಿಸುವ ತಾಂತ್ರಿಕತೆಯ ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣವಾದರೂ ಹಳೆಯ ಪ್ರಮಿಕ ಕೌಶಲ್ಯ ಬಲಕ್ಕೆ ಆಧುನಿಕ ಕೌಶಲವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯ. ಅಲ್ಲದೇ, ಹೊಸ ತಾಂತ್ರಿಕ ಕೌಶಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಅವಶ್ಯಕತೆ ಇದೆ.

ಕೃಷಿ ಕ್ಷೇತ್ರ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು , ಜಿಡಿಪಿಯಲ್ಲಿ ಶೇ. ೧೮ರಷ್ಟು ಪಾಲು ಹೊಂದಿದೆ. ಅಲ್ಲದೇ, ದೇಶದ ಶ್ರಮಿಕ ಕ್ಷೇತ್ರಕ್ಕೆ ಶೇ.೪೪ ಔದ್ಯಮಿಕ ಕೊಡುಗೆ ನೀಡಿದೆ. ಆದುದರಿಂದ ಕೃಷಿಕ್ಷೇತ್ರವನ್ನು ನವೀಕರಿಸಿದಲ್ಲಿ , ಸಮಗ್ರ ಅಭಿವೃದ್ಧಿ ಕಾಣಬಹುದಾಗಿದೆ. ಆದರೆ ಇಲ್ಲಿ ಸಮಸ್ಯೆಗಳು ಅನೇಕ ಅಂತರ್ಜಲ ಹಾಗೂ ಮಣ್ಣಿನ ಫಲವತ್ತತೆ ಕ್ಷೀಣಿಸುವಿಕೆ , ಭೂ ಸವಕಳಿ , ಜಲ ನಿರ್ವಹಣೆ , ಬೆಳೆಗಳವಲಯವಾರು ಅಸಮತೋಲನ, ಬೆಲೆಯ ಏರಿಳಿತ ಮುಂತಾದ ಸಮಸ್ಯೆಗಳು ಆಧಿಕವಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಿದೆ.

See also  ರಾಜ್ಯದಲ್ಲಿ ಇಂದು, ನಾಳೆ ಭಾರೀ ಮಳೆ ಸಾಧ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು