ರಾಮನಗರ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಅವರಿಗೆ ತನ್ನ ಸಂಪೂರ್ಣ ಬೆಂಬಲ ನೀಡಿದ್ದ ನಟ ದರ್ಶನ್ ಅಭಿಮಾನಿಯೊಬ್ಬ ಈಗ ಬೆನ್ನ ಮೇಲೆ ದರ್ಶನ್ ಟ್ಯಾಟು ಹಾಕಿಸಿಕೊಂಡಿದ್ದಾನೆ.
ಬಿಡದಿಯ ಕರೇನಹಳ್ಳಿ ನಿವಾಸಿ ಕಾರ್ತಿಕ್ ಎಂಬಾತನ ತನ್ನ ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡ ಯುವಕ. ಈ ಟ್ಯಾಟು 30 ಸೆ.ಮೀ.ಉದ್ದ ಹಾಗೂ 16 ಸೆ.ಮೀ. ಅಗಲವಿದೆ. ಅದರಡಿಯಲ್ಲಿ ಡಿ ಬಾಸ್ ಎಂದು ಬರೆಯಲಾಗಿದೆ. ದರ್ಶನ್ ಬೆಂಬಲದ ನೆನಪು ಸದಾಕಾಲ ಉಳಿಯಲು ಹೀಗೆ ಟ್ಯಾಟು ಹಾಕಲಾಗಿದೆ.
ಸುಮಾರು ಏಳು ಗಂಡೆ ಕಾಲ ಕಲಾವಿದ ಮಧು ಅವರು ಪರಿಶ್ರಮಪಟ್ಟು ಈ ಟ್ಯಾಟು ಹಾಕಿದ್ದಾರೆ.