News Kannada
Thursday, December 08 2022

ಕರ್ನಾಟಕ

ಪುತ್ತೂರಿನ ಕುಟುಂಬ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿ

Photo Credit :

ಪುತ್ತೂರಿನ ಕುಟುಂಬ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿ

ಕಾಸರಗೋಡು : ಆರೋಗ್ಯ ವಲಯದಲ್ಲಿ ಹೊಸ ಬದಲಾವಣೆ ತರುವುದರೊಂದಿಗೆ ಕೇರಳ ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು , ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಲ್ಲಿರುವ ಕುಟುಂಬ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿಯಾಗುತ್ತಿದೆ .

ಇ – ಹೆಲ್ತ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಸುಲಭವಾಗಿ ಚಿಕಿತ್ಸೆ ಲಭ್ಯವಾಗಿಸುವ ಗುರಿಯೊಂದಿಗೆ ಯೋಜನೆ ಆರಂಭಿಸಲಾಗಿದೆ.

ಈ ನೂತನ ಸೌಲಭ್ಯ ಮೂಲಕ ಚಿಕಿತ್ಸೆ ಆನ್ ಲೈನ್ ಮುಖಾಂತರವೂ ಲಭ್ಯವಾಗುತ್ತಿದ್ದು, ಉಳಿದ ವಿಚಾರಗಳನ್ನು ಹೆಲ್ತ್ ಕಾರ್ಡ್ ನೋಡಿಕೊಳ್ಳುತ್ತಿದೆ ಎಂಬುದು ಗಮನಾರ್ಹವಾಗಿದೆ.

ರಾಜ್ಯದ ಆರೋಗ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಒಟ್ಟು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜಾರಿಗೊಳಿಸುವ-ಆರೋಗ್ಯ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳುತ್ತಿದೆ.

ಈ ಮೂಲಕ ಆರೋಗ್ಯ ಕೇಂದ್ರವನ್ನು ಆಶ್ರಯಿಸುವ ಮಂದಿಗೆ ಚಿಕಿತ್ಸೆ ದಾಖಲೆಗಳು ಯಾವುದೂ ಇಲ್ಲದೆ , ಹೆಲ್ತ್ ಕಾರ್ಡ್ ಮಾತ್ರ ಬಳಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ. ಆಧಾರ್ ಕಾರ್ಡನ್ನು ಇ-ಹೆಲ್ತ್ ಕಾರ್ಡ್ ನೊಂದಿಗೆ ಲಿಂಕ್ ನಡೆಸಿ ಯುನೀಕ್ ಹೆಲ್ತ್ ಐಡಿ(ಯು.ಎಚ್.ಡಿ.) ಕಾರ್ಡ್ ನೀಡಲಾಗುತ್ತದೆ. ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳು ಆಧಾರ್ ನಂಬ್ರವನ್ನು ಸ್ವಾಗತ ಕೊಠಡಿ(ರಿಸೆಪ್ಶನ್ ಕೌಂಟರ್)ಯಲ್ಲಿ ನೀಡಿದರೆ ಅಲ್ಲಿಂದ ಐಡಿ ಕಾರ್ಡ್ ಲಭಿಸುತ್ತದೆ. ಇದರ ಜೊತೆಗೆ ಆಧಾರ್ ಲಿಂಕ್ ನಡೆಸುವ ವ್ಯಕ್ತಿಯ ಆರೋಗ್ಯ ಸಂಬಂಧ ವಿಚಾರಗಳು ದಾಖಲಾಗುತ್ತವೆ. ಧೂಮಪಾನ, ಕುಡಿತ ಇತ್ಯಾದಿ ದುಶ್ಚಟಗಳು,ಬದುಕಿನ ರೀತಿ, ವಾಸಿಸುತ್ತಿರುವ ಪ್ರದೇಶದ ಪರಿಸ್ಥಿತಿ ಇತ್ಯಾದಿ ಸಮಗ್ರ ವಿಚಾರಗಳೂ ಅಲ್ಲಿ ನಮೂದನೆಗೊಳ್ಳುತ್ತವೆ. ಚಿಕಿತ್ಸೆ ಸಂಬಂಧ ತಪಾಸಣೆಯ ವರದಿಗಳೆಲ್ಲವೂ ಕಾರ್ಡಿಗೆ ಆನ್ ಲೈನ್ ಮೂಲಕ ಅಪ್ ಲೋಡ್ ಆಗುತ್ತವೆ. ಈ ಕಾರ್ಡ್ ಬಳಸಿ ವೈದ್ಯರು ರೋಗಿಯ ಎಲ್ಲ ವಿಚಾರಗಳನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಮನೆಯಲ್ಲಿದ್ದುಕೊಂಡೇ ರೋಗಿಗಳು ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿರುವುದು ಇದರ ಇನ್ನೊಂದು ಪ್ರಯೋಜನೆ, ಜೊತೆಗೆ ಪ್ರಯೋಗಾಲಯ, ಔಷಧದ ಅಂಗಡಿ ಇತ್ಯಾದಿಗಳ ಟೋಕನ್ ಪಡೆಯಲೂ ಸಾಧ್ಯವಾಗುತ್ತದೆ. ಯಾವ ಸರಕಾರಿ ಮೆಡಿಕಲ್ ಕಾಲೇಜಿನ ವೈದ್ಯರ ಟೋಕನ್ ಬೇಕಿದ್ದರೂ ಈ ಕಾರ್ಡ್ ನ ಸಹಾಯದಿಂದ ಪಡೆದುಕೊಳ್ಳಬಹುದು. ರೆಫರ್ ನಡೆಸುವ ರೋಗಿಗಳು ಎಲ್ಲ ದಾಖಲೆ ಪತ್ರಗಳನ್ನೂ ಒಯ್ಯಬೇಕಿಲ್ಲ.

ಒಂದು ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ವಿಚಾರಗಳೂ ಆಧಾರ್ ಮೂಲಕ ಲಭಿಸುವ ಹಿನ್ನೆಲೆಯಲ್ಲಿ ಅಂಟು ರೋಗಗಳು ಇತ್ಯಾದಿಗಳನ್ನು ಶೀಘ್ರದಲ್ಲೇ ಪತ್ತೆ ಮಾಡಿ ಅಗತ್ಯದ ಪ್ರತಿರೋಧ ಚಟುವಟಿಕೆಗಳನ್ನು ನಡೆಸಲು ಇ-ಹೆಲ್ತ್ ಯೋಜನೆ ಮೂಲಕ ಸುಲಭ ಸಾಧ್ಯವಾಗುತ್ತದೆ. ಜೊತೆಗೆ ಕೇಂದ್ರ-ರಾಜ್ಯ ಸರಕಾರಗಳ ಆರೋಗ್ಯ ವಿಮೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಲ್ತ್ ಕಾರ್ಡ್ ಸೌಲಭ್ಯ ಪೂರಕವಾಗಿದೆ.

ಇದರ ಅಂಗವಾಗಿ ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್ ಯೋಜನೆ ಜಾರಿಯಲ್ಲಿದೆ. ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ನಲ್ಲಿ ಸೇ 70 ಮನೆಗಳು ಈಗ ಇ-ಹೆಲ್ತ್ ಯೋಜನೆಯಲ್ಲಿ ಅಳವಡಿಗೊಂಡಿವೆ. ಇದನ್ನು ಶೇ 100 ಆಗಿಸುವ ಯತ್ನ ನಡೆದುಬರುತ್ತಿದೆ. ರಾಜ್ಯದಲ್ಲಿ ಐ.ಎಸ್.ಒ. ಸರ್ಟಿಫಿಕೆಟ್ ಪಡೆದ ಪ್ರಥಮ ಎಫ್ .ಎಚ್.ಸಿ. ಎಂಬ ಹೆಗ್ಗಳಿಕೆಗೆ ಮೊಗ್ರಾಲ್ ಪುತ್ತೂರಿನ ಕುಟುಂಬ ಆರೋಗ್ಯ ಕೇಂದ್ರ ಭಾಜನವಾಗಿದೆ. ಇ-ಹೆಲ್ತ್ ಯೋಜನೆ ಜಾರಿಗೊಳ್ಳುವ ಜಿಲ್ಲೆಯ ಎರಡನೇ ಕೇಂದ್ರವೂ ಇದಾಗಿದೆ. ಈ ಹಿಂದೆ ಕಯ್ಯೂರು-ಚೀಮೇನಿ ಕುಟುಂಬ ಆರೋಗ್ಯ ಕೇಂದ್ರ ದಲ್ಲಿ ಯೋಜನೆ ಆರಂಭಿಸಲಾಗಿತ್ತುಠಿh

See also  ಡ್ರಗ್ಸ್ ಮಾಫಿಯಾ ಬೇರು ಸಹಿತ ಕಿತ್ತೊಗೆಯಲು ಸರ್ಕಾರ ಬದ್ಧ: ಡಿಸಿಎಂ ಅಶ್ವಥನಾರಾಯಾಣ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು