News Kannada
Monday, November 28 2022

ಕರ್ನಾಟಕ

ಸಿಂಗಾಪುರ, ಮಲೇಷ್ಯಾಕ್ಕೆ ರಫ್ತಾಗುತ್ತಿದೆ ಕಾಸರಗೋಡಿನ ಏಡಿಗಳು… - 1 min read

Photo Credit :

ಸಿಂಗಾಪುರ, ಮಲೇಷ್ಯಾಕ್ಕೆ ರಫ್ತಾಗುತ್ತಿದೆ ಕಾಸರಗೋಡಿನ ಏಡಿಗಳು...

ಕಾಸರಗೋಡು: ಮಳೆಗಾಲದಲ್ಲಿ ಆಳಸಮುದ್ರ ಮೀನುಗಾರಿಕೆ ನಿಷೇಧ ಇರುವುದರಿಂದ ಮೀನುಗಾರರು ಜೀವನೋಪಾಯಕ್ಕಾಗಿ ನದಿಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದು, ಇವುಗಳಲ್ಲಿ ಏಡಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ.

ಜಿಲ್ಲೆಯ ನದಿಗಳಿಂದ ಲಭಿಸುವ ಏಡಿಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಇದರಿಂದ ಕಾಸರಗೋಡಿನಿಂದ ಭಾರೀ ಪ್ರಮಾಣದ ಏಡಿಗಳು ವಿದೇಶಕ್ಕೆ ರಫ್ತಾಗುತ್ತದೆ. ಸಿಂಗಾಪುರ, ಮಲೇಷ್ಯಾದಲ್ಲಿ ಭಾರೀ ಬೇಡಿಕೆ ಇದೆ. ಅಲ್ಲಿನ ಏಡಿಪ್ರಿಯರ ಬೇಡಿಕೆಯನ್ನು ಮನಗಂಡಿರುವ ಇಲ್ಲಿನ ಬೆಸ್ತರು ಪ್ರತಿ ವರ್ಷ ಸಿಂಗಾಪುರ, ಮಲೇಷ್ಯಾಗಳ ದೇಶಗಳ ಅಡುಗೆ ಮನೆಗಳಿಗೆ ಸ್ವಾದಿಷ್ಟ ಖಾದ್ಯವಾಗಿ ಏಡಿಯನ್ನು ರಫ್ತು ಮಾಡುತ್ತಿದ್ದಾರೆ.

‘ಸೆಲ್ಲೋ ಸೆರಾಟ್ಟೋ’ ಅಥವಾ ‘ಮಡ್ಡ್‌ಕ್ರ್ಯಾಬ್’ ಎಂದು ಗುರುತಿಸುವ ಜೀವಂತ ಭೀಮಾಕಾರದ ಏಡಿಗಳನ್ನು ಜಿಲ್ಲೆಯ ನದಿಯ ಅಳಿವೆಗಳಿಂದ ಹಿಡಿದು ಸಿಂಗಾಪುರಕ್ಕೆ ರಪ್ತು ಮಾಡಲಾಗುತ್ತಿದೆ. ಭಾರಿ ಗಾತ್ರದ ಒಂದು ಏಡಿಗೆ ಕಡಿಮೆ ಎಂದರೂ ಸಾವಿರ ರೂ.ಇದೆ. ಸಾಮಾನ್ಯವಾಗಿ ಕಿಲೋವೊಂದಕ್ಕೆ 960 ರೂ. ಏಜೆಂಟರು ನೀಡುತ್ತಾರೆ. ಈ ಭಾರಿ ಗಾತ್ರದ ಏಡಿಗಳು ಮಳೆಗಾಲದ ಆರಂಭದಲ್ಲಿ ಕಾಣ ಸಿಗುತ್ತವೆ. ಇದರಿಂದ ಬೆಸ್ತರಿಗಂತೂ ಸುಗ್ಗಿ ಕಾಲ.

ಜಿಲ್ಲೆಯ ಕಸಬಾ, ಕಿಯೂರು, ಕುಂಬಳೆ ಭಾಗಗಳಿಂದ ಏಜೆಂಟರ್‌ಗಳು ನದಿಯಿಂದ ಹಿಡಿದ ಜೀವಂತ ಏಡಿಗಳನ್ನು ಸಂಗ್ರಹಿಸುತ್ತಾರೆ. ಹೀಗೆ ಪಡೆಯುವ ಏಡಿಗಳನ್ನು ಅವುಗಳ ಗಾತ್ರಗಳನ್ನು ಅನುಸರಿಸಿ ಐದು ವಿಭಾಗಗಳನ್ನಾಗಿ ಮಾಡುತ್ತಾರೆ. ಹೀಗೆ ವಿಂಗಡಿಸಿ ನಿರ್ದಿಷ್ಟ ಬೆಲೆ ನಿರ್ಣಯಿಸಲಾಗುತ್ತಿದೆ.

ಈ ರೀತಿಯ ಏಡಿಗಳು ಹೊಳೆಯ ಅಳಿವೆಗಳಿಂದ ಲಭಿಸುತ್ತವೆ. ಇದನ್ನು ಬೆಸ್ತರು ಸಂಗ್ರಹಿಸಿ ಕಾಸರಗೋಡು ಕಡಲ ಕಿನಾರೆಯಲ್ಲಿ ಏಜೆಂಟರುಗಳಿಗೆ ಮಾರಾಟ ಮಾಡುತ್ತಾರೆ. ಇಂತಹ ಏಡಿಗಳನ್ನು ಖರೀದಿಸಲು ಭಾರೀ ಪೈಪೋಟಿ ನಡೆಯುತ್ತದೆ.

ಏಜೆಂಟರುಗಳು ಪ್ರತ್ಯೇಕ ತಯಾರಿಸಿದ ಪೆಟ್ಟಿಗೆಯಲ್ಲಿ ಗೋಣಿ ಚೀಲವನ್ನು ಹೊದಿಸಿ ರೈಲು ಮುಖಾಂತರ ಚೆನ್ನೈ, ನೆಡುಂಬಾಶ್ಯೇರಿ, ತಿರುವನಂತಪುರ ವಿಮಾನ ನಿಲ್ದಾಣಗಳಿಗೆ ತಲುಪಿಸಲಾಗುತ್ತದೆ. ಆರು ದಿನಗಳ ಕಾಲ ಹೊಳೆಯ ಏಡಿಗಳು ಜೀವಂತವಾಗಿರುತ್ತವೆ. ಬೆಳಗ್ಗೆ ವಿಮಾನದ ಮೂಲಕ ರಫ್ತು ಮಾಡಿದರೆ, ರಾತ್ರಿ 8 ಗಂಟೆಗೆ ಸಿಂಗಾಪುರದಲ್ಲಿ ತಾಜಾ ಏಡಿಗಳು ಲಭಿಸುತ್ತವೆ.

ಹೊಳೆಯಲ್ಲಿ ದೋಣಿಯ ಮೂಲಕ ನೈಲನ್ ಬಲೆಗಳನ್ನು ಉಪಯೋಗಿಸಿ ಏಡಿಗಳನ್ನು ಹಿಡಿಯುತ್ತಾರೆ. ಮಳೆಗಾಲ ಆರಂಭಗೊಂಡಂತೆ ಭಾರೀ ಸಂಖ್ಯೆಯಲ್ಲಿ ಇಂತಹ ಅಪೂರ್ವ ಏಡಿಗಳು ಲಭಿಸುತ್ತದೆ. ಇಂತಹ ಏಡಿಗಳನ್ನು ಔಷಧಗಳಿಗೂ ಬಳಸಲಾಗುತ್ತದೆ. ಏಡಿಗಳು ತಾರಾ ಹೋಟೆಲ್‌ಗಳಲ್ಲೂ ಭಾರಿ ಬೇಡಿಕೆಯಾದ ಖಾದ್ಯವಾಗಿದೆ.

See also  ಲೆ.ಜನರಲ್ ಪಟ್ಟಚೆರುವಂಡ ಚಂಗಪ್ಪ ತಿಮ್ಮಯ್ಯಗೆ ಹುಟ್ಟೂರಿನಲ್ಲಿ ಹೃದಯಸ್ಪರ್ಶಿ ಸನ್ಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು