ಕಾಸರಗೋಡು: ಒಬ್ಬಂಟ್ಟಿಯಾಗಿ ವಾಸವಾಗಿದ್ದ ವೃದ್ಧ ಮಹಿಳೆಯ ಮೃತದೇಹ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆ ಬೀಚ್ ರಸ್ತೆಯಲ್ಲಿ ನಡೆದಿದೆ.
ನೆಲ್ಲಿಕುಂಜೆ ಬೀಚ್ ರಸ್ತೆಯ ದಿವಂಗತ ಎಂ. ಎಸ್. ಬಳ್ಳುಳ್ಳಾಯ ಅವರ ಪತ್ನಿ ಸರೋಜಿನಿ ಬಾಯಿ(75) ಮೃತಪಟ್ಟವರು. ಮನೆಯಿಂದ ದುರ್ವಾಸನೆ ಬರುತ್ತಿರುವುದರಿಂದ ಪರಿಸರವಾಸಿಗಳು ಪೊಲೀಸರಿಗೆ ಮಾಹಿತಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಐದು ದಿನ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪತಿ ಬಳ್ಳುಳ್ಳಾಯ ಮೃತಪಟ್ಟ ಬಳಿಕ ಸರೋಜಿನಿ ಏಕಾಂಗಿಯಾಗಿ ವಾಸವಾಗಿದ್ದರು. ದಂಪತಿಗೆ ಮಕ್ಕಳಿಲ್ಲ. ಪರಿಸರವಾಸಿಗಳು ಕೆಲ ದಿನಗಳಿಂದ ಈ ಮನೆಗೆ ತೆರಳದಿರುವುದರಿಂದ ಗಮನಕ್ಕೆ ಬಂದಿರಲಿಲ್ಲ. ಐದು ದಿನಗಳ ದಿನಪತ್ರಿಕೆ ಮನೆಯ ಮೆಟ್ಟಿಲು ಬಳಿ ಎಸೆದ ಸ್ಥಿತಿಯಲ್ಲಿದೆ. ಇದರಿಂದ ಐದು ದಿನದ ಹಿಂದೆಯೇ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ.
ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.