ಕಾರವಾರ: ಇಲ್ಲಿನ ಸಮುದ್ರದಲ್ಲಿ ಈಜಲು ಇಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ನಗರದ ಸಾಗರ ದರ್ಶನ ಹಾಲ್ ಬಳಿ ರವಿವಾರ ಸಂಭವಿಸಿದೆ. ಒಬ್ಬವ ಮೃತ ದೇಹ ಪತ್ತೆಯಾಗಿದ್ದು ಇನ್ನೊಬ್ಬನಾಪತ್ತೆಯಾಗಿದ್ದಾನೆ.
ಧಾರವಾಡದ ಸೈದಾಪುರ ಮೂಲದ ಮೊದಮ್ಮದ್ ನವೀದ್ ಖಾಜಿ(೧೭) ಹಾಗೂ ಮೆಹಬೂಬ್ ನಗರದ ನಹಿಮ್ ಹೆಬ್ಬಾಲಿ(೨೨) ಮೃತಪಟ್ಟವರು. ಕಾರವಾರ ತಾಲೂಕಿನ ತೋಡುರಿನ ಯುವಕ ಹಾಗೂ ಧಾರವಾಡದ ಯುವತಿಯೊಂದಿಗೆ ರವಿವಾರ ಇಲ್ಲಿನ ಸಾಗದ ದರ್ಶನ ಹಾಲ್ನಲ್ಲಿ ಮದುವೆ ಸಂಭ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಈ ಮದುವೆಗೆ ಧಾರವಾಡದಿಂದ ಬಂದಿದ್ದ ಏಳೆಂಟು ಯುವಕರು ಊಟದ ಬಳಿಕ ಅಲ್ಲೇ ಹಿಂಭಾಗ ಸಮುದ್ರದಲ್ಲಿ ತೀರದ ವೀಕ್ಷಣೆಗೆ ತೆರಳಿದ್ದರು. ಬಳಿಕ ನೀರಿಗಿಳಿದ ಯುವಕರು ಅದರಲ್ಲಿ ಇಬ್ಬರು ಯುವಕರು ಸಮುದ್ರ ಪಾಲಾಗಿದ್ದರು. ಸ್ಥಳೀಯ ಮೀನುಗಾರರು ಹಾಗೂ ಮದುವೆಗೆ ಬಂದ ಜನರು ಸಮುದ್ರದಲ್ಲಿ ಅಲೆಯ ಆರ್ಭಟ ಹೆಚ್ಚಿದೆ. ಈಜಲು ತೆರಳದಂತೆ ಸೂಚಿಸಿದ್ದರೂ ಸಹ ಈಜಲು ಹೋಗಿದ್ದಾರೆ. ಸಮುದ್ರಅಲೆಯ ಆರ್ಭಟಕ್ಕೆ ಇಬ್ಬರು ಸಮುದ್ರ ಪಾಲಾಗಿದ್ದಾರೆ.
ಆದರೆ, ಅಲೆಗೆ ತೇಲಿ ಹೋದವರ ಪೈಕಿ ನವೀದ್ ಮೃತದೇಹ ಪತ್ತೆಯಾಗಿದ್ದು, ನಹೀಮ್ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಮುದ್ರದಲ್ಲಿ ಅಲೆ ಆರ್ಭಟಹೆಚ್ಚಿದ್ದು ನಾಪತ್ತೆಯಾದ ಯುವಕನ ಮೃತದೇಹ ಪತ್ತೆಗೆ ಅಡ್ಡಿಯಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.