ಬೆಂಗಳೂರು: ಇಂದು ರಾಜ್ಯ ರಾಜಕೀಯದಲ್ಲಿ ಭಾರೀ ದೊಡ್ಡ ಬೆಳವಣಿಗೆಯಾಗಿದ್ದು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್- -ಜೆಡಿಎಸ್ ನಾಯಕರಿಂದ ಕೊನೆಯ ಪ್ರಯತ್ನ ನಡೆಸುತ್ತಿದೆ.
ಮೈತ್ರಿ ಸರ್ಕಾರದ ಮೇಲಿರುವ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನ 8 ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿದ್ದು ಇವರೆಲ್ಲ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ವಿಚಾರ ಸಚಿವ ಡಿ.ಕೆ.ಶಿವಕುಮಾರ್ ಗೆ ತಿಳಿಯುತ್ತಿದ್ದಂತ್ತೆ ತಾವು ಪಾಲ್ಗೊಳ್ಳಬೇಕಾಗಿದ್ದ ಜನ ಸಂಪರ್ಕ ಸಭೆಯನ್ನು ರದ್ದು ಗೊಳಿಸಿ ಬೆಂಗಳೂರಿಗೆ ಆಗಮಿಸಿ ಅತೃಪ್ತರ ಸಮಾಧಾನ ಪಡಿಸಲು ಮುಂದಾಗಿದ್ದಾರೆ.
ಇತ್ತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕಾ ಪ್ರವಾಸದಲ್ಲಿದ್ದು, ಈ ಅನಿರೀಕ್ಷಿತ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲವನ್ನು ಕೆರಳಿಸಿದೆ.
ವಿಧಾನಸೌಧಕ್ಕೆ ರಾಜೀನಾಮೆ ನೀಡಲು ಬಂದ ಕಾಂಗ್ರೆಸ್ ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಮಾತನಾಡಿ, ನಾನು ರಾಜಿನಾಮೆ ನೀಡುತ್ತಿದ್ದೇನೆ,. ಆದರೆ ಪಕ್ಷ ಬಿಡಲು ನನಗೆ ನೋವಾಗುತ್ತಿದೆ . ಕೆಲವು ವಿಚಾರಗಳಲ್ಲಿ ನನ್ನನ್ನು ಪಕ್ಷ ನಿರ್ಲಕ್ಷ್ಯಿಸುತ್ತಿದೆ. ಯಾರನ್ನು ನಿಂದಿಸಲು ಹಾಗೂ ಹೈಕಮಾಂಡ್ ನ್ನು ದೂರಲು ನಾನು ಬಯಸುವುದಿಲ್ಲ. ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ ಎಂದಿದ್ದಾರೆ.