News Kannada
Tuesday, November 29 2022

ಕರ್ನಾಟಕ

ಸರಕಾರದ ಅನುದಾನ ಸದುಪಯೋಗಪಡಿಸಿ: ತಾ.ಪಂ ಅಧ್ಯಕ್ಷೆ ಶೋಭಾಮೋಹನ್ ಸೂಚನೆ - 1 min read

Photo Credit :

ಸರಕಾರದ ಅನುದಾನ ಸದುಪಯೋಗಪಡಿಸಿ: ತಾ.ಪಂ ಅಧ್ಯಕ್ಷೆ ಶೋಭಾಮೋಹನ್ ಸೂಚನೆ

ಮಡಿಕೇರಿ: ಅಭಿವೃದ್ಧಿ ಕಾರ್ಯಗಳಿಗಾಗಿ ರೂಪಿಸಲಾಗಿರುವ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸುವ ಮೂಲಕ ಅಧಿಕಾರಿಗಳು ಸರಕಾರದ ಅನುದಾನವನ್ನು ಸದುಪಯೋಗ ಪಡಿಸಬೇಕೆಂದು ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್ ಸೂಚನೆ ನೀಡಿದ್ದಾರೆ.

ತಾ.ಪಂ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ಜೂನ್ ಅಂತ್ಯದವರೆಗಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ತೆಕ್ಕಡೆ ಶೋಭಾ, ಕುಂಬಳದಾಳು ಅಂಗನವಾಡಿ ಕೇಂದ್ರದಲ್ಲಿ 3 ಮಕ್ಕಳು ಮಾತ್ರ ಇದ್ದಾರೆ. ನಿಯಮಾನುಸಾರ ಅಂಗನವಾಡಿ ಸಹಾಯಕಿಯರೇ ಮಕ್ಕಳನ್ನು ಕೇಂದ್ರಗಳಿಗೆ ಕರೆದುಕೊಂಡು ಹೋಗಿ, ಮರಳಿ ಕರೆತರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಸಹಾಯಕಿ ಪೋಷಕರಿಗೆ ಮಕ್ಕಳನ್ನು ಕೇಂದ್ರಕ್ಕೆ ತಂದು ಬೀಡುವಂತೆ ಸೂಚನೆ ನೀಡುತ್ತಾರೆ. ಮಾತ್ರವಲ್ಲದೇ 4 ಗಂಟೆವರೆಗೆ ಕೇಂದ್ರ ತೆರಯಬೇಕೆಂಬ ಸೂಚನೆ ಇದ್ದರೂ ಕೂಡ 3.30 ವರೆಗೆ ಮಾತ್ರ ಕೇಂದ್ರದಲ್ಲಿರುತ್ತಾರೆ. ಮಕ್ಕಳನ್ನು ಅಂಗಡಿ ಇಲ್ಲವೇ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತೇನೆ. ಅಲ್ಲಿಂದ ನೀವೇ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ಆದೇಶ ಮಾಡುತ್ತಾರೆ. ಇನ್ನು ಶಿಕ್ಷಕರಂತೂ ವಾರದಲ್ಲಿ ಮೂರು ದಿನ ಮಾತ್ರ ಅಂಗನವಾಡಿಗೆ ಆಗಮಿಸುತ್ತಾರೆ. ಏಕೆ ಹೀಗೆ ಆಗುತ್ತಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಅಧಿಕಾರಿ ದಮಯಂತಿ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ನನಗೆ ಹೆಚ್ಚುವರಿ ಜವಾಬ್ದಾರಿಯೂ ಇದೆ. ನಮ್ಮಲ್ಲಿ ಸೂಪರ್ ವೈಸರ್‍ ಗಳ ಕೊರತೆ ಇರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. 2 ಅಂಗನವಾಡಿಯಲ್ಲಿ ಕಾರ್ಯಕರ್ತೆ ಮತ್ತು 8 ಅಂಗನವಾಡಿಯಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ. ಈ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 2,006 ರಿಂದ ಜೂ 2019 ರವರೆಗೆ 3,491 ಬಾಂಡ್‍ಗಳನ್ನು ವಿತರಿಸಲಾಗಿದೆ. ಬಾಂಡ್ ಬರಲು ಬಾಕಿ ಇದ್ದ 372 ರಲ್ಲಿ 130 ಬಾಂಡ್ ಕಚೇರಿಗೆ ಬಂದಿದ್ದು, ವಿತರಣೆ ಮಾಡಲಾಗಿದೆ ಎಂದರು.

ಕೃಷಿ ಇಲಾಖೆಯ ಅಧಿಕಾರಿ ಗಿರೀಶ್ ಮಾತನಾಡಿ, ತಾಲೂಕಿನ ನಾಲ್ಕು ಹೋಬಳಿ ಕಚೇರಿಯಲ್ಲಿ ಭತ್ತದ ಬಿತ್ತನೆ ಬೀಜಗಳಾದ ಇಂಟಾನ್, ತುಂಗ, ಜಯ, ಬಿಆರ್-2655, ಅಥಿರ ವಿತರಣೆಯಾಗುತ್ತಿದೆ. ಮುಂಗಾರು ಮಳೆ ಆಶಾದಾಯಕವಾಗಿದ್ದು, ಬಿತ್ತನೆ ತಯಾರಿ ನಡೆಯುತ್ತಿದೆ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಈಗಾಗಲೇ ತಾಲೂಕಿನಲ್ಲಿ 12,500 ಅರ್ಜಿಗಳು ಬಂದಿದ್ದು, 8,300 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ದಾಖಲಾಗಿರುತ್ತದೆ. 2,000 ರೂ ವಿನಂತೆ ಮೂರು ಕಂತುಗಳಲ್ಲಿ ರೈತರಿಗೆ ನೇರವಾಗಿ 6,000 ರೂ ಖಾತೆಗೆ ಜಮಾಯಿಸಲು ಕೆಲಸ ಕಾರ್ಯ ನಡೆಯುತ್ತಿದೆ ಎಂದರು.

See also  ಬೈಕ್‌ ಟ್ಯಾಕ್ಸಿ ಯೋಜನೆಗೆ ಕಾರು ಚಾಲಕರ ಸಂಘದ ವಿರೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು