News Kannada
Friday, December 02 2022

ಕರ್ನಾಟಕ

ಬತ್ತಿ ಹೋದ ಹೇಮಾವತಿ ನದಿ: ಕೆ.ಆರ್.ಪೇಟೆಯಲ್ಲಿ ನೀರಿಗೆ ಬರ?

Photo Credit :

ಬತ್ತಿ ಹೋದ ಹೇಮಾವತಿ ನದಿ: ಕೆ.ಆರ್.ಪೇಟೆಯಲ್ಲಿ ನೀರಿಗೆ ಬರ?

ಕೃಷ್ಣರಾಜಪೇಟೆ: ಹೇಮಾವತಿ ನದಿಯ ಒಡಲು ಬರಿದಾಗಿದ್ದು, ಮಳೆ ಬಾರದೆ ಹೋದರೆ ಕೆ.ಆರ್.ಪೇಟೆ ಪಟ್ಟಣದ ಜನ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುವ ಆತಂಕ ಶುರುವಾಗಿದೆ.

ಈಗಾಗಲೇ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹೇಮಗಿರಿಯ ಬಳಿ ಪಶ್ಚಿಮಾಭಿಮುಖವಾಗಿ ಹರಿಯುವ ಹೇಮಾವತಿ ನದಿಯಲ್ಲಿ ಸದ್ಯಕ್ಕೆ ಕೇವಲ ಒಂದು ವಾರಕ್ಕೆ ಸಾಕಾಗುವಷ್ಟು ಪ್ರಮಾಣದಲ್ಲಿ ಮಾತ್ರ ನೀರಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ.

ಈಗಾಗಲೇ ಹಾಸನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರಬೇಕಿತ್ತು. ಆದರೆ ಈ ಬಾರಿ ಮಳೆಯಾಗದ ಕಾರಣದಿಂದ ನೀರಿನ ಪ್ರಮಾಣ ಕಡಿಮೆಯಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದೀಗ ಜಲಾಶಯದ ಮೂಲಕ ನದಿಗೆ ನೀರನ್ನು ಹರಿಸಿದರೆ ಮಾತ್ರ ಕುಡಿಯುವ ನೀರಿನ ಬವಣೆ ನೀಗಲು ಸಾಧ್ಯವಿದೆ.

ಈ ನಡುವೆ ಹೇಮಗಿರಿಯಲ್ಲಿ ಹೇಮಾವತಿ ನದಿಯಿಂದ ನೀರೆತ್ತುವ ಪಂಪ್‍ಹೌಸ್‍ನಲ್ಲಿರುವ ಮೂರು ಮೋಟಾರುಗಳ ಪೈಕಿ ಎರಡು ಮೋಟಾರುಗಳು ಕೆಟ್ಟು ಹೋಗಿದ್ದು 180 ಹೆಚ್.ಪಿ. ಸಾಮರ್ಥ್ಯದ ಒಂದು ಮೋಟಾರಿನಲ್ಲಿ ನೀರೆತ್ತುತ್ತಿದ್ದು ಇದರಿಂದ ಕುಡಿಯುವ ನೀರನ್ನು ದಿನಬಿಟ್ಟು ದಿನ ಪಟ್ಟಣದ ಜನರಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಆ ಮೋಟಾರ್ ಯಂತ್ರವೂ ಕೆಟ್ಟಿದ್ದರಿಂದ ಇದೀಗ ಎರಡು ದಿನಗಳಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ತುರ್ತಾಗಿ ಮೋಟಾರ್‍ನ್ನು ದುರಸ್ತಿಗೊಳಿಸುವ ಕೆಲಸವನ್ನು ಮೈಸೂರಿನ ಮೋಟಾರ್ ರಿವೈಂಡಿಂಗ್ ತಜ್ಞರ ಮೂಲಕ ಮಾಡಿಸಲು ಕುಡಿಯುವ ನೀರು ನಿರ್ವಹಣೆ ವಿಭಾಗದ ಸಹಾಯಕ ಇಂಜಿನಿಯರ್ ಸೌಮ್ಯ ಮತ್ತು ಮುಖ್ಯಾಧಿಕಾರಿ ಸತೀಶ್‍ಕುಮಾರ್ ಮುಂದಾಗಿರುವುದು ಕಂಡುಬಂದಿದೆ.

ಹೇಮಗಿರಿ ಅಣೆಕಟ್ಟೆಯ ಹಿನ್ನೀರಿಗೆ ಹೊಂದಿಕೊಂಡಂತೆ ಹೇಮಾವತಿ ನದಿಯ ಒಡಲಿನಲ್ಲಿ ಜಾಕ್‍ವೆಲ್ ನಿರ್ಮಿಸಿ ಪಂಪ್‍ಹೌಸಿನಲ್ಲಿ 180 ಹೆಚ್.ಪಿ ಸಾಮಥ್ರ್ಯದ 2 ಮೋಟಾರುಗಳನ್ನು ಅಳವಡಿಸಿ ನೀರೆತ್ತಿ ಹೇಮಗಿರಿಯಿಂದ 10ಕಿ.ಮೀ ದೂರದಲ್ಲಿರುವ ಕೃಷ್ಣರಾಜಪೇಟೆ ಪಟ್ಟಣಕ್ಕೆ ಕಳೆದ 20ವರ್ಷಗಳಿಂದಲೂ ಕುಡಿಯಲು ನೀರನ್ನು ಪುರಸಭೆಯು ಸರಬರಾಜು ಮಾಡುತ್ತಾ ಬಂದಿದೆ. ಆದರೆ ಕಳೆದ 6ತಿಂಗಳ ಹಿಂದೆ ಒಂದು 180ಹೆಚ್.ಪಿ ಸಾಮರ್ಥ್ಯದ ಮೋಟಾರ್ ಕೆಟ್ಟಾಗ ಅದನ್ನು ದುರಸ್ಥಿಪಡಿಸುವ ಕೆಲಸ ಮಾಡದೇ ಕೈಚೆಲ್ಲಿ ಕುಳಿತ ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ನಿನ್ನೆ ಜುಲೈ 8ರ ಸೋಮವಾರ ಬೆಳಗ್ಗೆ ಕೆ.ಆರ್.ಪೇಟೆ ಪಟ್ಟಣಕ್ಕೆ ನೀರೆತ್ತುವ ಕೆಲಸವನ್ನು ಮಾಡುತ್ತಿದ್ದ ಮತ್ತೊಂದು ಮೋಟಾರ್ ಕೂಡ ಕೆಟ್ಟಿದ್ದರಿಂದ ಮುಖ್ಯಾಧಿಕಾರಿಗಳು ಹಾಗೂ ಕುಡಿಯುವ ನೀರು ನಿರ್ವಹಣೆ ವಿಭಾಗದ ಸಹಾಯಕ ಎಂಜಿನಿಯರ್ ಸೌಮ್ಯ ಅವರು ವಿದ್ಯುತ್ ವ್ಯತ್ಯಯದಿಂದಾಗಿ ಕೆಟ್ಟಿರುವ ಏಕೈಕ ಮೋಟಾರ್ ದುರಸ್ಥಿಯ ಕೆಲಸಕ್ಕೆ ಮುಂದಾಗಿದ್ದು, ಮೋಟಾರು ಪಂಪ್ ಕೆಟ್ಟಿರುವುದರಿಂದ ಜುಲೈ-9 ಮತ್ತು 10ರಂದು ಎರಡು ದಿನಗಳ ಕಾಲ ಕುಡಿಯುವ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಸಾರ್ವಜನಿಕರಿಗೆ ಆಗುವ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಅನಾನುಕೂಲಕ್ಕಾಗಿ ಕ್ಷಮೆ ಕೋರಿದ್ದಾರೆ. ವಿಪರ್ಯಾಸವೆಂದರೆ ಇನ್ನು ಮೂರು-ನಾಲ್ಕು ದಿನಗಳಲ್ಲಿ ಹೇಮಾವತಿ ನದಿಯು ಸಂಪೂರ್ಣವಾಗಿ ಬತ್ತಿಹೋಗಲಿದ್ದು ಹೇಮೆಯ ಒಡಲು ಸಂಪೂರ್ಣವಾಗಿ ಖಾಲಿಯಾಗಲಿದೆ. ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಪುರಸಭೆಯ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿರುವ ಪುರಸಭೆಯ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಇಂದು ಹೇಮಗಿರಿಗೆ ಭೇಟಿ ನೀಡಿ ಮೋಟಾರ್ ದುರಸ್ಥಿ ಕಾರ್ಯವನ್ನು ವೀಕ್ಷಿಸಿ ಆದಷ್ಟು ಜಾಗ್ರತೆ ಮೋಟಾರ್ ಸರಿಪಡಿಸಿ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಕುಡಿಯುವ ನೀರು ನಿರ್ವಹಣೆ ವಿಭಾಗದ ಸಹಾಯಕ ಎಂಜಿನಿಯರ್ ಸೌಮ್ಯ ಅವರಿಗೆ ನಿರ್ದೇಶನ ನೀಡಿದ್ದಾರೆ.

See also  ದೇವೇಗೌಡ ಸಂಬಂಧಿ ಲಾಕರ್ ನಲ್ಲಿತ್ತು 6.5 ಕೋಟಿ ರೂ.!

ಮಂಡ್ಯ ಜಿಲ್ಲಾಧಿಕಾರಿಗಳು ಹೇಮಾವತಿ ನದಿಯ ಸ್ನಾನಘಟ್ಟದ ಬಳಿ ಹೇಮಾವತಿಯ ನೀರು ನಿಲ್ಲುವಂತೆ ನದಿಯ ಮಧ್ಯದಲ್ಲಿ ಅಲ್ಲಲ್ಲಿ ತಡೆಗೋಡೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಡುವಂತೆ ನೀರಾವರಿ ನಿಗಮ ಹಾಗೂ ಹೇಮಾವತಿ ಜಲಾಶಯ ಯೋಜನೆಯ ಇಂಜಿನಿಯರುಗಳಿಗೆ ನಿರ್ದೇಶನ ನೀಡಬೇಕು. ಕೃಷ್ಣರಾಜಪೇಟೆ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್‍ವೆಲ್ ಬಳಿ ನೀರು ನಿಲ್ಲುವಂತೆ ಕ್ರಮಕೈಗೊಳ್ಳುವಂತೆ ಇಂಜಿನಿಯರುಗಳಿಗೆ ಸೂಚನೆ ನೀಡಬೇಕು ಎಂದು ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು