News Kannada
Thursday, September 29 2022

ಕರ್ನಾಟಕ

ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದು ಹೋಮ-ಹವನ - 1 min read

Photo Credit :

ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದು ಹೋಮ-ಹವನ

ಶಿವಮೊಗ್ಗ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ನಿವಾರಣೆಗೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಅರ್ಚಕರ ಸಂಘ ಹಾಗೂ ಬಿಜೆಪಿ ವತಿಯಿಂದ ಪೂಜೆ-ಹವನ-ಜಯಾದಿ ಹೋಮ ನಡೆಸಲಾಯಿತು.

ಇಂದು ಬೆಳಗ್ಗೆಯಿಂದ ರಾಜ್ಯದ ಇತರೆಡೆಗಳಾದ ಮಂಡ್ಯ, ಬೆಂಗಳೂರಿನ ಗವಿಗಂಗಾಧರ ದೇವಾಲಯ ಹಾಗೂ ಶಿಕಾರಿಪುರ ಸೇರಿದಂತೆ ಶಿವಮೊಗ್ಗದಲ್ಲಿಯೂ ಸಹ ಯಡ್ಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿ ಎಂದು ಹೋಮ-ಹವನ ಪೂಜೆಗಳು ನಡೆಯುತ್ತಿವೆ.

ಈ ಪೂಜೆಯಲ್ಲಿ ಯಡ್ಡಿಯೂರಪ್ಪ ಅವರ ಪುತ್ರಿ ಅರುಣಾ ದೇವಿ, ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ, ಅವರ ಧರ್ಮಪತ್ನಿ ತೇಜಸ್ವಿನಿ, ಪುತ್ರ ಸುಭಾಷ್ ಸಹ ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪೂಜೆಯಲ್ಲಿ ಬಿಜೆಪಿಯ ಜಿಲ್ಲಾ ನಾಯಕರಾದ ಸುಭಾಷ್, ಜ್ಯೋತಿ ಪ್ರಕಾಶ್, ಪಾಲಿಕೆ ಸದಸ್ಯರಾದ ಧೀರಾಜ್ ಹೊನ್ನವಿಲೆ, ವಿಹೆಚ್ ಪಿ ಮುಖಂಡ ಧೀನ್ ದಯಾಳು, ಬಳ್ಳಕೆರೆ ಸಂತೋಷ್, ಪತ್ನಿ ಅಂಜಲಿ, ಬಸವರಾಜ್, ಪ್ರಶಾಂತ ಮೊದಲಾದವರು ಪಾಲ್ಗೊಂಡಿದ್ದರು.

ಜಯಾದಿ ಹೋಮ ನಡೆಸಿಕೊಟ್ಟ ರಾಜ್ಯ ಅರ್ಚಕರ ಸಂಘದ ಅಧ್ಯಕ್ಷ ಹೆಚ್.ಜಿ.ನಾಗರಾಜ್ ಶಾಸ್ತ್ರಿ ಮಾತನಾಡಿ, ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ನಿವಾರಣೆಗೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪನವರು ಮುಖ್ಯಮಂತ್ರಿ ಆಗಲಿ ಎಂದು ಇಂದು ಬೆಳಗ್ಗೆಯಿಂದ ಹೋಮ ಹವನ ಹಾಗೂ ಜಯಾದಿ ಪೂಜೆಗಳನ್ನು ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ 25 ಜನ ಅರ್ಚಕರು ಪಾಲ್ಗೊಂಡಿದ್ದಾರೆ ಎಂದರು.

See also  ಟಾಟಾ ಕಾಫಿ ತೋಟದಲ್ಲಿದ್ದ ಸರ್ಕಾರಿ ಜಾಗ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು