News Kannada
Monday, September 26 2022

ಕರ್ನಾಟಕ

ಕೊಡಗಿಗೆ ಭೇಟಿ ನೀಡಿದ ಗಿನ್ನಿಸ್ ದಾಖಲೆ ಸಾಧಕನಿಗೆ ಸನ್ಮಾನ - 1 min read

Photo Credit :

ಕೊಡಗಿಗೆ ಭೇಟಿ ನೀಡಿದ ಗಿನ್ನಿಸ್ ದಾಖಲೆ ಸಾಧಕನಿಗೆ ಸನ್ಮಾನ

ಮಡಿಕೇರಿ: ಕ್ಯಾನ್ಸರ್ ಕುರಿತು ಆರೋಗ್ಯ ಜಾಗೖತಿ ಸಂದೇಶ ಸಾರುತ್ತಾ ಭಾರತದಾದ್ಯಂತ ಸಾವಿರಾರು ಕಿ.ಮೀ.ಗಳನ್ನು ಬ್ಯಾಟರಿ ಚಾಲಿತ ವಾಹನದಲ್ಲಿ ಸಂಚರಿಸಿ ಗಿನ್ನಿಸ್ ವಿಶ್ವದಾಖಲೆ ಮಾಡಿರುವ ತೆಲಂಗಾಣ ಮೂಲದ ಕೖಷ್ಣರೆಡ್ಡಿ ಅವರನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದೇಶಪರ್ಯಟನೆ ಮಾಡತ್ತಾ ಕೊಡಗಿಗೆ ಭೇಟಿ ನೀಡಿದ್ದ ತೆಲಂಗಾಣದ ಸರ್ಕಾರಿ ಆಸ್ಪತ್ರೆಯ ಅಧಿಕಾರಿ ಎಂ.ವಿ.ಕೖಷ್ಣರೆಡ್ಡಿ ಈಗಾಗಲೇ ಗಿನ್ನಿಸ್ ದಾಖಲೆಯನ್ನು ಬ್ಯಾಟರಿ ಕಾರ್ ನಲ್ಲಿ ಕಡಿಮೆ ದಿನಗಳಲ್ಲಿ ಅತ್ಯಧಿಕ ಕಿ.ಮೀ. ಕ್ರಮಿಸಿದಕ್ಕಾಗಿ ದಾಖಲಿಸಿದ್ದು, ಮಡಿಕೇರಿಯ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಈ ಸಾಧಕನನ್ನು ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ.ಮತ್ತು ವಲಯ ಟೀಚ್ ಯೋಜನಾ ಸಮಿತಿ ಅಧ್ಯಕ್ಷ ಅಂಬೆಕಲ್ ವಿನೋದ್ ಕುಶಾಲಪ್ಪ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೖಷ್ಣರೆಡ್ಡಿ, ದೇಶದಾದ್ಯಂತ ನಗರ ಪ್ರದೇಶಗಳು ಬೆಳೆಯುತ್ತಿರುವಂತೆಯೇ ಕ್ಯಾನ್ಸರ್ ನಂಥ ಮಾರಕ ರೋಗ ಪ್ರಕರಣಗಳೂ ಹೆಚ್ಚುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದ ಅಗತ್ಯವಿದ್ದು ಇಲ್ಲದೇ ಹೋದಲ್ಲಿ ಮಾರಕ ರೋಗಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾದೀತು ಎಂದು ಎಚ್ಚರಿಸಿದರು.

ಮಾಲಿನ್ಯದಿಂದ ಉಂಟಾಗುತ್ತಿರುವ ರೋಗರುಜಿನದ ಬಗ್ಗೆ ತಾನು ಮನೆಯಲ್ಲಿ ಸಾಕಷ್ಟು ಚರ್ಚೆ ನಡೆಸುತ್ತಿದ್ದ ಸಂದರ್ಭ ತನ್ನ ತಾಯಿ ಸರೋಜಮ್ಮ, ಇದನ್ನೆಲ್ಲಾ ಮನೆಯಲ್ಲಿ ಹೇಳಿದರೆ ಸಾಲದು. ಊರೂರು ತಿರುಗಿ ಜನರಲ್ಲಿ ಜಾಗೖತಿ ಉಂಟು ಮಾಡು ಎಂದು ಪ್ರೇರೇಪಿಸಿದರು. ಹೀಗಾಗಿಯೇ ತನ್ನ ಮಗನೊಂದಿಗೆ ಸೇರಿ ತಾನು ತಯಾರಿಸಿದ ಬ್ಯಾಟರಿ ಚಾಲಿತ ಕಾರ್ ನಲ್ಲಿ ದೇಶಪರ್ಯಟನೆಗೆ ಮುಂದಾದೆ ಎಂದು ಹೇಳಿದ ಕೖಷ್ಣರೆಡ್ಡಿ, ಈವರೆಗೆ ಲಂಡನ್ ನ ವ್ಯಕ್ತಿಯೋರ್ವರು 23 ದಿನಗಳಲ್ಲಿ 1333 ಕಿ.ಮೀ. ಕ್ರಮಿಸಿ ಗಿನ್ನಿಸ್ ದಾಖಲೆ ಮಾಡಿದ್ದರು. ಆದರೆ ತಾನು ಕೇವಲ 9 ದಿನಗಳಲ್ಲಿ 1665 ಕಿ.ಮೀ.ಯನ್ನು ಕ್ರಮಿಸಿ ಹಳೇ ದಾಖಲೆ ಮುರಿದಿದ್ದಾಗಿ ಕೖಷ್ಣರೆಡ್ಡಿ ವಿಶ್ವ ದಾಖಲೆ ಬಗ್ಗೆ ಮಾಹಿತಿ ನೀಡಿದರು.

ಬ್ಯಾಟರಿ ಚಾಲಿತ ಕಾರ್ ನಲ್ಲಿ ಸಂಚರಿಸುತ್ತಾ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿರುವುದಕ್ಕಾಗಿ ಗಿನ್ನಿಸ್ ದಾಖಲೆ ನೀಡಲಾಗಿದೆ ಎಂದೂ ಹೇಳಿದ ಕೖಷ್ಣರೆಡ್ಡಿ, ಕಾವೇರಿ ತವರು ಜಿಲ್ಲೆಯಾದ ಕೊಡಗಿಗೆ ಭೇಟಿ ನೀಡಿರುವುದು ಸಂತೋಷ ತಂದಿದೆ. ಈ ಜಿಲ್ಲೆಯಲ್ಲಿ ಶುದ್ದಗಾಳಿಯ ಸೇವನೆಯಿಂದಾಗಿ ಜಿಲ್ಲೆಯ ಜನತೆಯ ಆರೋಗ್ಯ ಸುಸ್ಥಿತಿಯಿಂದ ಕೂಡಿದೆ ಎಂಬುದು ಮನದಟ್ಟಾಯಿತು ಎಂದೂ ಅಭಿಪ್ರಾಯಪಟ್ಟರು.

ಬ್ಯಾಟರಿ ಕಾರ್ ನಲ್ಲಿ ಪ್ರಪಂಚ ಪರ್ಯಟನೆಯ ಚಿಂತನೆಯೂ ತನಗಿದೆ ಎಂದೂ ಕೖಷ್ಣರೆಡ್ಡಿ ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್.ಜಗದೀಶ್ ಮಾತನಾಡಿ, ಪರಿಸರಕ್ಕೆ ಮಾಲಿನ್ಯವಾಗುವಂತಹ ವಾಹನಗಳ ಬಳಕೆ ಬಗ್ಗೆ ಸಂದೇಶವನ್ನೂ ಕೖಷ್ಣರೆಡ್ಡಿ ಬ್ಯಾಟರಿ ಕಾರ್ ಮೂಲಕ ಸಾರಿದ್ದು, ಮುಂದಿನ ದಿನಗಳಲ್ಲಿ ಇಂತಹ ವಾಹನಗಳೇ ಸಂಚಾರಕ್ಕೆ ಅನಿವಾರ್ಯವಾಗುವ ದಿನಗಳೂ ಬಂದೀತು ಎಂದು ಮಾರ್ಮಿಕವಾಗಿ ನುಡಿದರು.

See also  ಲೋಕಸಭೆ ಉಪಚುನಾವಣೆಯಿಂದ ಹಂಪಿ ಉತ್ಸವಕ್ಕೆ ಅಡ್ಡಿ

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಖಚಾಂಜಿ ಪ್ರಸಾದ್ ಗೌಡ, ಕ್ಲಬ್ ಸರ್ವೀಸ್ ನಿರ್ದೇಶಕಿ ಲೀನಾ ಪೂವಯ್ಯ, ಪ್ರಿಯ ಕೖಷ್ಣರೆಡ್ಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು