News Kannada
Friday, October 07 2022

ಕರ್ನಾಟಕ

ಸಮುದ್ರ ಗಡಿ ಉಲ್ಲಂಘನೆ: ಇಂಡೋನೇಷ್ಯಾದಲ್ಲಿ ಕಾಸರಗೋಡಿನ ಇಬ್ಬರ ಸಹಿತ 22 ಮಂದಿ ವಶಕ್ಕೆ - 1 min read

Photo Credit :

ಸಮುದ್ರ ಗಡಿ ಉಲ್ಲಂಘನೆ: ಇಂಡೋನೇಷ್ಯಾದಲ್ಲಿ ಕಾಸರಗೋಡಿನ ಇಬ್ಬರ ಸಹಿತ 22 ಮಂದಿ ವಶಕ್ಕೆ

ಕಾಸರಗೋಡು: ಸಮುದ್ರ ಗಡಿ ಉಲ್ಲಂಘಿಸಿದ ಕಾರಣಕ್ಕಾಗಿ ಇಂಡೋನೇಷ್ಯಾದಲ್ಲಿ ಕಾಸರಗೋಡು ನಿವಾಸಿಗಳು ಸೇರಿದಂತೆ ೨೨ ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹಡಗು ನೌಕ ಪಡೆ ವಶದಲ್ಲಿದೆ ಎನ್ನಲಾಗಿದೆ . ಹಡಗಿನಲ್ಲಿ ಉಪ್ಪಳ ಪಾರೆಕಟ್ಟೆಯ ಪಿ. ಕೆ ಮೂಸಾಕು೦ಞ , ಕುಂಬಳೆ ಆರಿಕ್ಕಾಡಿ ಯ ಕಲಂದರ್ ಸೇರಿದಂತೆ ೨೨ ಮಂದಿ ಸಿಲುಕಿಕೊಂಡಿದ್ದಾರೆ .

ಮಾರ್ಚ್ ತಿಂಗಳಳಲ್ಲಿ ಮುಂಬೈ ಯಿಂದ ಸಿಂಗಾಪುರಕ್ಕೆ ಹೊರಟ ಎಂ . ಟಿ ಪೆಗಾಸಸ್ ಎಂಬ ಸರಕು ಹಡಗು ಇಂಡೋನೇಷ್ಯಾ ಸಮುದ್ರ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಅಲ್ಲಿನ ನೌಕಾ ಪಡೆ ಸಿಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ .

ರಾಸಾಯನಿಕ ವಸ್ತು ಹೇರಿಕೊಂಡು ಸಿಂಗಪುರಕ್ಕೆ ಹೊರಟ ಹಡಗಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು . ಬಳಿಕ ಈ ಹಡಗು ವಿರುದ್ಧ ದಿಕ್ಕಿನಲ್ಲಿ ಸಾಗಿ ಇಂಡೋನೇಷ್ಯಾ ಸಮುದ್ರ ತೀರದತ್ತ ಮೂಲಕ, ಈ ಸಂದರ್ಭದಲ್ಲಿ ನೌಕಾ ಪಡೆ ವಶಕ್ಕೆ ತೆಗೆದುಕೊಂಡಿದೆ .

ಹಡಗು ಐದು ತಿಂಗಳಿನಿಂದ ವಶದಲ್ಲಿದ್ದರೂ ತಡವಾಗಿ ಘಟನೆ ಬೆಳಕಿಗೆ ಬಂದಿದೆ.
ಹಡಗಿನಲ್ಲಿ ಆಹಾರ , ನೀರು , ಔಷಧಿಗಳು ಖಾಲಿಯಾಗಿವೆ ಎಂದು ಮೂಸಾ ಕು೦ಞ ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಹಡಗನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಜೊತೆ ಮೂರು ಬಾರಿ ಮಾತು ಕತೆ ನಡೆಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ ಎನ್ನಲಾಗಿದೆ.

ಹಡಗು ನೌಕರರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ದೂರು ನೀಡಿದರೂ ಈ ಬಗ್ಗೆ ಪ್ರಕ್ರಿಯೆ ವಿಳಂಬಗೊಂಡಿದೆ .

ಹಡಗು ಗಡಿ ಉಲ್ಲಂಘನೆ ಮಾಡಿದ ಬಗ್ಗೆ ದಿನಗಳ ಹಿಂದೆಯಷ್ಟೇ ಪ್ರಕರಣ ನ್ಯಾಯಾಲಯದ ಮೆಟ್ಟಲೇರಿದ್ದು , ಪ್ರಕರಣ ಇತ್ಯರ್ಥ ವಿಳಂಬಗೊಂಡಲ್ಲಿ ಹಡಗಿನಲ್ಲಿರುವವರ ಸ್ಥಿತಿ ಏನೆಂಬುದು ಪ್ರಶ್ನೆಯಾಗಿ ಉಳಿದು ಕೊಂಡಿದೆ.

 

See also  ಬಂದ್ ಗೆ ಉತ್ತರ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು