News Kannada
Sunday, September 25 2022

ಕರ್ನಾಟಕ

ಉದ್ಯಮಿಗಳಿಗೆ ಬೆದರಿಕೆ ಒಡ್ಡಿದ್ದ ಆರೋಪಿಗಳ ಸೆರೆ - 1 min read

Photo Credit :

ಉದ್ಯಮಿಗಳಿಗೆ ಬೆದರಿಕೆ ಒಡ್ಡಿದ್ದ ಆರೋಪಿಗಳ ಸೆರೆ

ಶಿವಮೊಗ್ಗ: ಇಲ್ಲಿನ ಚಾಲುಕ್ಯ ನಗರದ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ, ಗಾಂಧಿ ಬಜಾರ್ ನ ಚಿನ್ನಬೆಳ್ಳಿ ವ್ಯಾಪಾರಿಯೊಬ್ಬರನ್ನು ಬೆದರಿಸಿ ಅವರ ಬಳಿ ಇದ್ದ ನಗದು ದೋಚಿರುವ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.

ಇಂದು ಮದ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಂ.ಅಶ್ವಿನಿ ಅವರು, ಕಳೆದ 2 ದಿನಗಳಿಂದ ನಗರದಲ್ಲಿ ನಡೆದಿರುವ ಎರಡು ಪ್ರಕರಣಗಳ ಬಗ್ಗೆ ಹಾಗೂ ಆರೋಪಿಗಳನ್ನು ಬಂಧಿಸಿ ರಿವಾಲ್ವಾರ್ ವಶಪಡಿಸಿಕೊಂಡಿರುವ ಬಗ್ಗೆ ವಿವರಣೆ ನೀಡಿದ್ದಾರೆ.

ಕಳೆದ ಜು.16ರ ರಾತ್ರಿ 10 ಗಂಟೆಗೆ ಚಾಲುಕ್ಯ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಬೀಬ್ ಖಾನ್ ಕಾರಿನಲ್ಲಿ ಬರುತ್ತಿರುವಾಗ ಅವರನ್ನು ಅಡ್ಡಗಟ್ಟಿ ರಿವಾಲ್ವಾರ್ ತೋರಿಸಿ ಕೊಲೆ ಬೆದರಿಕೆಗೆ ಮುಂದಾಗಿದ್ದ ಘಟನೆ ವರದಿಯಾಗಿತ್ತು. ಈ ಸಂದರ್ಭದಲ್ಲಿ ಹಬೀಬ್ ಅವರ ಮಗ ಮತ್ತು ಆತನ ಸ್ನೇಹಿತ ಅಲ್ಲಿಗೆ ಬಂದ ಕಾರಣ ಕಾರೊಂದರಲ್ಲಿ ಬಂದಿದ್ದ ಈ ಐವರು ನಾಪತ್ತೆಯಾಗಿದ್ದರು. ಹಬೀಬ್ ಖಾನ್ ಕೊಲೆ ಯತ್ನಕ್ಕೆ ಸಂಬಂಧಪಟ್ಟಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಲ್ಲಿ ಹಿಂದೆ ರಿಯಲ್ಎಸ್ಟೇಟ್ ಉದ್ಯಮದಲ್ಲಿ ಪಾಲುದಾರನಾಗಿದ್ದ ಕಲೀಂವುಲ್ಲಾ ಅಲಿಯಾಸ್ ಕಲೀಂಪಾಷ ನಡುವೆ ಜಗಳವಾಗಿದ್ದನ್ನು ವಿವರಿಸಿದ್ದಾರೆ. ಹೀಗೆ 2 ವರ್ಷದ ಹಿಂದೆ ಹಣದ ವಿಷಯಕ್ಕೆ ಸಂಬಂಧಪಟ್ಟಂತೆ ಕಲೀಂ ಪಾಷ ಹಬೀಬ್ ಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.

ಹಬೀಬ್ ಖಾನ್ ನ್ನು ಕೊಲೆ ಮಾಡಲು ಯತ್ನಿಸಿ ಸುಪಾರಿ ನೀಡಿ ಘಟನೆಗೆ ಕಾರಣನಾಗಿದ್ದ ಕಲೀಂವುಲ್ಲಾನನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಂ.ಅಶ್ವಿನಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಶೇಖರ್ ಮಾರ್ಗದರ್ಶನದಲ್ಲಿ ಡಿಸಿಬಿ, ಡಿಎಸ್ಬಿ, ಐಎಸ್ಡಿ ಹಾಗೂ ತುಂಗಾ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಐವರು ಸುಪಾರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತೊಂದು ಪತ್ಯೇಕ ಪ್ರಕಣದಲ್ಲಿ ಜು.16ರ ಬೆಳಗ್ಗೆ 11.30ಕ್ಕೆ ಗಾಂಧಿ ಬಜಾರ್ ನ ಚಿನ್ನ-ಬೆಳ್ಳಿ ವ್ಯಾಪಾರಿ ಅನಿಸುರ್ ಇಸ್ಲಾಂ ಎಂಬುವವರಿಗೆ ಅತಿಕ್ ಎಂಬುವವನು ರೌಡಿ ಸಾತು ಅಲಿಯಾಸ್ ಸಾಧಿಕ್ ನಿಮ್ಮನ್ನು ಕರೆಯುತ್ತಿದ್ದಾನೆ ಎಂದು ತನ್ನ ಬೈಕ್ ನಲ್ಲಿ ರೈಲ್ವೆ ನಿಲ್ದಾಣದ ಗೂಡ್ಸ್ ಶೆಡ್ ಬಳಿ ಕೆರೆದೊಯ್ದು ಅಲ್ಲಿಂದ ಸಾದಿಕ್ ದಾದಾಪೀರ್, ಅತಿಕ್ ಹಾಗೂ ಇತರರು ಬಲವಂತವಾಗಿ ಕಾರಿನಲ್ಲಿ ಹೊಳಲೂರು ಸಮೀಪ ಕರೆದುಕೊಂಡು ಹೋಗಿ ಅವರಿಗೆ ಬೇದರಿಸಿ ಹಲ್ಲೆ ಮಾಡಿ ಅವರ ಬಳಿ ಇದ್ದ 3 ಸಾವಿರ ನಗದನ್ನು ದೋಚಿದ್ದರು. ಈ ಸಂಬಂಧ ದರೋಡೆ ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿತ್ತು.

ಇಂದು ಬೆಳಗ್ಗೆ 8ಗಂಟೆಗೆ ಈ ಆರೋಪಿಗಳಾದ ಕುಖ್ಯಾತ ರೌಡಿ ಶಿವಮೊಗ್ಗ ಸಾದಿಕ್ ಅಲಿಯಾಸ್ ಸಾತು, ಅತಿಕ್, ಬಳ್ಳಾರಿಯ ದಾದಾಪೀರ್ ಹಾಗೂ ಮುಂಬೈನ ಅಂಜೋಲಾ ಫರ್ನಾಂಡಿಸ್, ಕಾರು ಚಾಲಕ ಬಳ್ಳಾರಿಯ ಕುಮಾರ್ ಗೌಡ ಎಂಬುವವರನ್ನು ಈ ಪೊಲೀಸ್ ತಂಡಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ಆರೋಪಿಗಳ ಜೊತೆ ಒಂದು ರಿವಾಲ್ವಾರ್, ಒಂದು ರೌಂಡ್ಸ್ ಮತ್ತು ಬಿಳಿ ಬಣ್ಣದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಹಾಗೂ ಕ್ರಮವನ್ನು ಪ್ರಶಂಸಿಸಿರುವ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಂ.ಅಶ್ವಿನಿ ಹಾಗೂ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಟಿ.ಹೆಚ್.ಶೇಖರ್ ಅವರು ಯಾವುದೇ ರೌಡಿ, ದೊಂಬಿ, ದರೋಡೆ ಪ್ರಕರಣಗಳನ್ನು ಬೆಳೆಯಲು ಬಿಡುವುದೇ ಇಲ್ಲ. ಅಂತಹವರನ್ನು ಮಟ್ಟ ಹಾಕಲಾಗುವುದು ಎಂದು ತಿಳಿಸಿದ್ದಾರೆ.

See also  ಸಮುದ್ರ ದುರಂತ ಪ್ರಕರಣದಲ್ಲಿ ಇಬ್ಬರ ಬಂಧನ : ಜಿಲ್ಲಾಧಿಕಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು