News Kannada
Wednesday, October 05 2022

ಕರ್ನಾಟಕ

ಕಾಸರಗೋಡಿನಲ್ಲಿ ಭಾರೀ ಮಳೆ: ಮನೆಗೆ ನುಗ್ಗಿದ ನೀರು - 1 min read

Photo Credit :

ಕಾಸರಗೋಡಿನಲ್ಲಿ ಭಾರೀ ಮಳೆ: ಮನೆಗೆ ನುಗ್ಗಿದ ನೀರು

ಕಾಸರಗೋಡು: ಗುರುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಷ್ಟಗೊಡಿದೆ. ಹಲವೆಡೆ ನೆರೆ ನೀರು ನುಗ್ಗಿದ್ದು , ಅಪಾರ ಹಾನಿ ಉಂಟಾಗಿದೆ.

ಮುಂದಿನ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಾಳೆ (೨೦) ರೆಡ್ ಅಲರ್ಟ್ ಘೋಷಿಸಲಾಗಿದೆ.

ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ .

ಕಿನಾನೂರಿನಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ.ನೀಲೇಶ್ವರ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನೊಳಗೆ ನೀರು ನುಗ್ಗಿದ ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಮುಳುಗಿವೆ .ಮಧುವಾಹಿನಿ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ತೀರದ ಮನೆಯವರು ಆತಂಕದಲ್ಲಿದ್ದಾರೆ .
ಕಾಸರಗೋಡು ಚೇರಂಗೈ ಯಲ್ಲಿ ಕಡಲ್ಕೊರೆತ ಉಂಟಾಗಿದ್ದು, ತೀರದ ರಸ್ತೆ ಕೊಚ್ಚಿ ಹೋಗಿದೆ .

ಕುಂಬಳೆ ರೈಲ್ವೆ ನಿಲ್ದಾಣದೊಳಗೆ ನೀರು ನುಗ್ಗಿದ್ದು , ಮಳೆ ಬಿರುಸುಗೊಂಡಲ್ಲಿ ರೈಲ್ವೆ ಹಳಿ ಮುಳುಗಡೆ ಗೊಳ್ಳುವ ಸಾಧ್ಯತೆ ಇದೆ

ಮುಂದಿನ ದಿನಗಳಲ್ಲೂ ಬಿರುಸಿನ ಮಳೆಯ ಸಾಧ್ಯತೆಗಳಿದ್ದು, ನೆರೆ ಸಹಿತ ಪ್ರಕೃತಿ ವಿಕೋಪಗಳು ತಲೆದೋರುವ ಬೀತಯಿದೆ. ಸಂಬಂಧಪಟ್ಟ ಇಲಾಖೆಗಳು, ಸಿಬ್ಬಂದಿಬೇಕಾದ ಸಿದ್ಧತೆ ನಡೆಸುವಂತೆ, ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಆರಂಭಿಸುವಂತೆ ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಆದೇಶ ನೀಡಿದೆ.

ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡ ನಂತರ ಈ ವರೆಗೆ 996.4625 ಮಿಮೀ ಮಳೆ ಲಭಿಸಿದೆ. ಕಳೆದ 24 ತಾಸುಗಳಲ್ಲಿ 46.4625 ಮಿಮೀ ಮಳೆ ಸುರಿದಿದೆ. ಈ ವರೆಗೆ ಒಂದು ಮನೆ ಪೂರ್ಣ ರೂಪದಲ್ಲಿ, 70 ಮನೆಗಳು ಭಾಗಶಃ ಹಾನಿಗೀಡಾಗಿವೆ. 60 ಹೆಕ್ಟೇರ್ ಕೃಷಿ ಹಾನಿಗೊಂಡಿದೆ.

 

 

See also  ಅಕ್ರಮವಾಗಿ ಸಾಗಾಟವಾಗುತ್ತಿದ್ದ ಗೋವಾ ಮದ್ಯ ವಶಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು