News Kannada
Thursday, October 06 2022

ಕರ್ನಾಟಕ

25 ವರ್ಷದ ಓದು75 ವರ್ಷದ ಭವಿಷ್ಯ ಬರೆಯುತ್ತದೆ: ಬನ್ನೂರು ರಾಜು - 1 min read

Photo Credit :

25 ವರ್ಷದ ಓದು75 ವರ್ಷದ ಭವಿಷ್ಯ ಬರೆಯುತ್ತದೆ: ಬನ್ನೂರು ರಾಜು

ಮೈಸೂರು: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು, ಇಲ್ಲಿ ಕಲಿತ ಇಪ್ಪತ್ತು ಇಪ್ಪತೈದು ವರ್ಷದ ಓದು ಎಪ್ಪತ್ತೈದು ವರ್ಷಗಳ ಭವಿಷ್ಯವನ್ನು ಬರೆಯುತ್ತದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಹಡಜನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಲೇಖನ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಭಾಗವಹಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರ್ಥಾತ್ ಜ್ಞಾನವನ್ನು ಬೇಡುವವನು, ಗಳಿಸುವವನು ಎಂದರ್ಥ. ಜ್ಞಾನಗಳಿಸುವಿಕೆಯಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಹಿಡಿದ ಗುರಿಯನ್ನು ಬಿಡದೆ ಸಾಧಿಸುವ ಛಲವಿರಬೇಕು. ಯಾವುದೇ ಪರೀಕ್ಷೆಯಾದರೂ ಸರಿಯೆ ನಾನು ಪಾಸಾಗೇ ಆಗುತ್ತೇನೆಂಬ ಆತ್ಮವಿಶ್ವಾಸ, ಆತ್ಮಸ್ಥೈರ್ಯವಿರಬೇಕು. ಇದಕ್ಕೆ ತಕ್ಕ ಹಾಗೆ ಪ್ರಾಥಮಿಕ ಹಂತದಿಂದಲೂ ಓದನ್ನು ಗಂಭೀರವಾಗಿ ತೆಗೆದುಕೊಂಡು ಏಕಾಗ್ರತೆಯಿಂದ, ಏಕಚಿತ್ತದಿಂದ ವಿದ್ಯೆಯತ್ತ, ಧ್ಯಾನಸ್ಥರಾಗಿ ಕಲಿಯಬೇಕು. ವಿದ್ಯಾರ್ಥಿ ಜೀವನದಲ್ಲಿ ಕಲಿತದ್ದೇ ಇಡೀ ಬದುಕನ್ನು ರೂಪಿಸುವಲ್ಲಿ ಬಹುಮುಖ್ಯ ಪಾಠವಾಗುತ್ತದೆ. ಸಾಮಾನ್ಯವಾಗಿ ಮುನುಷ್ಯನ ಆಯುಷ್ಯ ನೂರು ವರ್ಷಗಳೆಂದು ಹೇಳಲಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಇದರ ಕಾಲು ಭಾಗ ಆಯುಷ್ಯ ವಿದ್ಯಾರ್ಥಿ ಜೀವನದಲ್ಲೇ ಮುಗಿದು ಹೋಗುತ್ತದೆ. ಮುಂದಿನ ಮೂಕ್ಕಾಲುಭಾಗ ಬದುಕಿನ ಆಯುಷ್ಯಕ್ಕೆ ಕಾಲುಭಾಗದ ವಿದ್ಯಾರ್ಥಿ ಜೀವನದಲ್ಲಿ ಕಲಿತ ಜ್ಞಾನವೇ ಆಧಾರವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿ ಜೀವನದ ಕಾಲವನ್ನು ಸುಖಾಸುಮ್ಮನೆ ವ್ಯರ್ಥವಾಗಿ ಕಳೆಯದೆ ಮುಂದಿನ ಬದುಕನ್ನು ಉತ್ತಮವಾಗಿಕಟ್ಟಿಕೊಳ್ಳಲು ವಿದ್ಯಾರ್ಥಿಯಾಗಿದ್ದಾಗಲೇ ಜವಬ್ದಾರಿಯುತವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದಾನಿಗಳಾದ ಆರ್.ಎಸ್. ಪುಟ್ಟಬಸಪ್ಪ ಮತ್ತು ಕೆ.ಎ. ಬಾಲರಾಜು ಹಾಗೂ ಜಯಶ್ರೀ ಅವರು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಚಿತ್ರ ಕಲಾವಿದೆ ಡಾ. ಜಮುನಾರಾಣಿ ಮಿರ್ಲೆ ಅವರು ಮಾತನಾಡಿ, ಪ್ರತಿಯೊಂದಕ್ಕೂ ಜ್ಞಾನಬೇಕು ಅದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪ್ರತಿನಿತ್ಯ ಪ್ರತಿಕೆಗಳನ್ನು ಓದಬೇಕು. ಕಲಿಕೆಯೇ ಸಾಧನೆಗೆ ದಾರಿ, ಜ್ಞಾನವಿಲ್ಲದಿದ್ದರೆ ಬದುಕುವುದು ಕಷ್ಟ. ಜ್ಞಾನಬಲದಿಂದ ಏನನ್ನಾದರೂ ಸಾಧಿಸಬಹುದು. ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳನ್ನು ವಿದ್ಯಾರ್ಥಿಗಳು ಕಲಿತು ಜ್ಞಾನವಂತರಾಗಬೇಕು. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತರಾಗಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ, ಶಾಲೆಯ ಮುಖ್ಯ ಶಿಕ್ಷಕಿ ಶಕೀಲಾ ಕುಮಾರಿ, ಸಹಶಿಕ್ಷಕಿಯರಾದ ರೇಣುಕಾ, ಮಂಗಳ, ಸೌಮ್ಯ, ಯೋಗ ಶಿಕ್ಷಕಿ ಆರ್ಪಿತಾ, ವಿಶ್ರಾಂತ ಶಿಕ್ಷಕ ವೆಂಟನಾರಾಯಣ ಮುಂತಾದವರು ಇದ್ದರು.

 

See also  ಡ್ರಾಪ್ ಕೊಟ್ಟಿದ್ದಕ್ಕೆ ಯುವತಿಯ ಮನೆಯವರಿಂದ ಥಳಿತ: ನೊಂದ ಯುವಕ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು