News Kannada
Saturday, October 01 2022

ಕರ್ನಾಟಕ

ಕಾಸರಗೋಡಿನಲ್ಲಿ ಮುಂದುವರೆದ ಮಳೆ: ಶಾಲೆಗೆ ರಜೆ ಘೋಷಣೆ - 1 min read

Photo Credit :

ಕಾಸರಗೋಡಿನಲ್ಲಿ ಮುಂದುವರೆದ ಮಳೆ: ಶಾಲೆಗೆ ರಜೆ ಘೋಷಣೆ

ಕಾಸರಗೋಡು: ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದೆ. ಆದಿತ್ಯವಾರ ಮಧ್ಯಾಹ್ನದ ವೇಳೆಗೆ ಅಲ್ಪ ವಿರಾಮ ಕಂಡುಬಂದರೂ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ – ಕಾಲೇಜು ಗಳಿಗೆ ಇಂದು ರಜೆ ನೀಡಲಾಗಿದೆ.

ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ . ನಾಳೆ ರೆಡ್ ಅಲರ್ಟ್ ಘೋಷಿಸಿದ್ದು , ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದೆ.

ಮಳೆಯಿಂದ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ನಾಶ ಉಂಟಾಗಿದೆ .ಜಿಲ್ಲೆಯಲ್ಲಿ ಇದುವರೆಗೆ ಎರಡು ಮನೆಗಳು ಪೂರ್ಣವಾಗಿ , ೯೨ ಮನೆಗಳು ಭಾಗಶಃ ವಾಗಿ ಹಾನಿಗೊಂಡಿದೆ . 

೧೧೫ ಹೆಕ್ಟರ್ ಸ್ಥಳದ ಕೃಷಿ ಹಾನಿ ಯಾಗಿದೆ . ಕಳೆದ ಎರಡು ದಿನಗಳ ಅವಧಿಯಲ್ಲಿ ೫೫. ಹೆಕ್ಟರ್ ಪ್ರದೇಶದ ಇಲ್ಲಿನ ಕೃಷಿ ನಾಶ ಉಂಟಾಗಿದೆ. ಜಿಲ್ಲೆಯ ೨೪ ಗ್ರಾಮ ಗಳು ಪ್ರವಾಹಕ್ಕೆ ಸಿಲುಕಿದೆ . ೧೬೩ ವಿದ್ಯುತ್ ಕಂಬಗಳು , ಎರಡು ಟ್ರಾನ್ಸ್ ಫಾರ್ಮರ್ ಗಳು ನೆಲಕಚ್ಚಿದ್ದು , ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ. ಬಂದ್ಯೋಡು ಕೊಕ್ಕೆಚಾಲ್ ನಲ್ಲಿ ಸಂಶುದ್ದೀನ್ ಎಂಬವರ ಬಾವಿ ಸಂಪೂರ್ಣ ಕುಸಿದು ಬಿದ್ದಿದೆ.

ಜಿಲ್ಲೆಯಲ್ಲಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು , ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಹಲವೆಡೆ ಭೂಕುಸಿತ ಉಂಟಾಗಿ ಸಂಚಾರಕ್ಕೂ ಅಡ್ಡಿಯಾಗಿದೆ.

 

See also  ಕೈಗಾರಿಕಾ ಬಡಾವಣೆಯಲ್ಲಿ ಏಕಮುಖ ಸಂಚಾರ ಬೇಡ: ಸ್ಥಳೀಯ ವರ್ತಕರಿಂದ ಜಿಲ್ಲಾಡಳಿತಕ್ಕೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು