News Kannada
Tuesday, October 04 2022

ಕರ್ನಾಟಕ

ಕರಾವಳಿಯಲ್ಲಿ ಭಾರೀ ಮಳೆ-ಗಾಳಿ: ರೆಡ್ ಅಲರ್ಟ್ ಘೋಷಣೆ - 1 min read

Photo Credit :

ಕರಾವಳಿಯಲ್ಲಿ ಭಾರೀ ಮಳೆ-ಗಾಳಿ: ರೆಡ್ ಅಲರ್ಟ್ ಘೋಷಣೆ

ಕಾರವಾರ:ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆ-ಗಾಳಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ. ರವಿವಾರದಿಂದಎಡಬಿಡದೆ ಭಾರೀ ಮಳೆಯಾಗುತ್ತಿದ್ದು ಸೋಮವಾರವೂ ಮಳೆಯ ಆರ್ಭಟ ಹೆಚ್ಚಿದೆ.

ಮುಂಜಾಗೃತೆಯ ದೃಷ್ಟಿಯಿಂದ ಹವಾಮಾನ ಇಲಾಖೆಯು ಕರ್ನಾಟಕದ ಕರಾವಳಿ ಭಾಗದಲ್ಲಿ ಜುಲೈ ೨೪ರ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ ಸಮುದ್ರದಲ್ಲಿ ೩.೫ರಿಂದ ೪.೫ ಮೀಟರ್ ನಷ್ಟು ಭಾರೀ ಗಾತ್ರದ ಅಲೆಗಳು ಉಂಟಾಗುತ್ತಿದ್ದು ಸಮುದ್ರದಲ್ಲಿಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಪಶ್ಚಿಮ ದಿಕ್ಕಿನಿಂದ ಸುಮಾರು ತಾಸಿಗೆ ೪೦ ರಿಂದ ೫೦ ರಷ್ಟು ವೇಗದಲ್ಲಿ ಭಾರೀ ಬಿಸುತ್ತಿದ್ದು ಸಮುದ್ರದ ವಾತಾವರಣದ ತೀರಾ ಕಠಿಣವಾಗಿದ್ದು ಯಾವುದೇ ಕಾರಣಕ್ಕೆ ಮೀನುಗಾರರು ಸಮುದ್ರಕ್ಕಿಳಿಯದಂತೆ ತಿಳಿಸಲಾಗಿದೆ. ತೀರಕ್ಕೆ ಭಾರೀ ಅಲೆಗಳು ಅಪ್ಪಳಿಸುತ್ತಿದ್ದು ಜಿಲ್ಲೆಯ ಕರಾವಳಿಯಲ್ಲಿ ಕಡಲು ಕೊರತೆ ಸೇರಿದಂತೆ ಹಾನಿಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ, ತಗ್ಗು ಪ್ರದೇಶ, ಜನವಸತಿ ಪ್ರದೇಶಗಳು ಜಲಾವೃತಗೊಂಡಿದ್ದುಜನರು ತೊಂದರೆ ಅನುಭವಿಸುವಂತಾಯಿತು. ರವಿವಾರ ರಾತ್ರಿಯಿಂದ ಸೋಮವಾರ ದಿನ ಪೂರ್ತಿ ರಭಸದ ಮಳೆಯಾಗಿದ್ದು ಮಳೆ ಮುಂದುವರಿಯುವ ಸಾಧ್ಯತೆಗಳಿದೆ ಎಂದು ತಿಳಿಸಿದೆ.

See also  ಜಯಕುಮಾರ ಆತ್ಮಹತ್ಯೆ ಪ್ರಕರಣ: ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು