News Kannada
Tuesday, October 04 2022

ಕರ್ನಾಟಕ

ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟ ಕಾಡಾನೆಗಳು - 1 min read

Photo Credit :

ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟ ಕಾಡಾನೆಗಳು

ಹಲಗೂರು: ಧನಗೂರು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳ ಹಿಂಡು ಡಿ.ಹಲಸಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿವೆ.

ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಕಾಡಾನೆಗಳನ್ನು ನೋಡಲು ಅಪಾರ ಸಾರ್ವಜನಿಕರು ಬರುತ್ತಿದ್ದು, ಅವರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮತ್ತು ಪೊಲೀಸರು ಕ್ರಮ ವಹಿಸಿದ್ದಾರೆ. ಧನಗೂರು ಅರಣ್ಯ ಪ್ರದೇಶದಿಂದ ಕುರಿ ಫಾರಂ ಮಾರ್ಗವಾಗಿ ಡಿ.ಹಲಸಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯನ್ನು ದಾಟಿಕೊಂಡು ಮಹಾದೇವಮ್ಮ, ಪುಟ್ಟಮ್ಮ, ನಾಗರಾಜು, ಶಿವಮಾದು ಎಂಬುವವರಿಗೆ ಸೇರಿದ ನೀಲಗಿರಿ ಮರಗಳ ತೋಪಿನಲ್ಲಿರುವ ಹಲವಾರು ಜಾತಿಯ ಮರಗಳನ್ನು ಮುರಿದು ಸಾರ್ವಜನಿಕರನ್ನು ನೋಡಿ ಸ್ಥಳದಲ್ಲೇ ಬೀಡು ಬಿಟ್ಟಿವೆ.

ಮುತ್ತತ್ತಿ, ಬಸವನಬೆಟ್ಟ, ಧನಗೂರು ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ಆಹಾರವನ್ನು ಆರಸಿ ಬರುವುದು ಸಾಮಾನ್ಯವಾಗಿವೆ. ಕೆಲವು ದಿನಗಳ ಹಿಂದೆ ಮಳವಳ್ಳಿ ಸಮೀಪ ನಾಲ್ಕು ಕಾಡಾನೆಗಳು ಕಾಡಿನಿಂದ ಬಂದು ಹಲವಾರು ಫಸಲುಗಳನ್ನು ತಿಂದು ತುಳಿದು ಬೆಳೆ ನಾಶ ಪಡಿಸಿವೆ. ಆದರೆ ಇದೀಗ ಮತ್ತೆ ಏಳು ಕಾಡಾನೆಗಳು ಬಂದು ನೀಲಗಿರಿ ತೋಪಿನಲ್ಲಿರುವ ಮರಗಳನ್ನು ಮುರಿದು ನಾಶ ಪಡಿಸಿರುವುದರಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳು ನಾಡಿನತ್ತ ಬರದಂತೆ ತಡೆಯಲು ಮುಂದಾಗಬೇಕಿದೆ.

See also  ಚಾ.ನಗರದಲ್ಲಿ ಕಾಡಾನೆ.. ಕೊಡಗಿನಲ್ಲಿ ಹುಲಿ ಬಲಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು