News Kannada
Monday, October 03 2022

ಕರ್ನಾಟಕ

ಹಳದಿ ಕಾಮಾಲೆ ನಿಯಂತ್ರಣಕ್ಕೆ ಕಾಸರಗೋಡು ನಗರಸಭಾ ಅಧಿಕಾರಿಗಳ ಕ್ರಮ - 1 min read

Photo Credit :

ಹಳದಿ ಕಾಮಾಲೆ ನಿಯಂತ್ರಣಕ್ಕೆ ಕಾಸರಗೋಡು ನಗರಸಭಾ ಅಧಿಕಾರಿಗಳ ಕ್ರಮ

ಕಾಸರಗೋಡು: ಕಾಸರಗೋಡು ನಗರ ಸಭಾ ವ್ಯಾಪ್ತಿಯಲ್ಲಿ ಹಳದಿ ಕಾಮಾಲೆ ಪತ್ತೆಯಾದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ನಗರಸಭಾ ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.

ನಗರಸಭೆ ವ್ಯಾಪ್ತಿಯ ಬೆದಿರ, ಚಾಲ, ಕಡವತ್,ಚಾಲಕುನ್ನು ಪ್ರದೇಶಗಳಲ್ಲಿ ಹಳದಿ ಕಾಮಾಲೆ ವರದಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳಿಗಾಗಿ ವಿಶೇಷ ವೈದ್ಯಕೀಯ ತಂಡವನ್ನು ನೇಮಿಸಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ತಿಳಿಸಿದರು.

ಹೆಲ್ತ್ ಇನ್ಸ್ ಪೆಕ್ಟರ್ ಬಿ.ಅಶ್ರಫ್ ಅವರ ನೇತೃತ್ವದಲ್ಲಿ ಹತ್ತು ಮಂದಿ ಜೂನಿಯರ್ ಹೆಲ್ತ್ ಇನ್ಸ್ ಪೆಕ್ಟರರು ಈ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜನಪ್ರತಿನಿಧಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾಸಂಘಟನೆ ಪ್ರತಿನಿಧಿಗಳು ಮೊದಲಾದವರ ಸಹಕಾರದೊಂದಿಗೆ ಈ ಕಾರ್ಯ ನಡೆಯುತ್ತಿದೆ.

ತಲಾ ಹತ್ತು ಮಂದಿಯ ತಂಡ ರೋಗಬಾಧಿತ ಪ್ರದೇಶಗಳ ಎಲ್ಲ ಮನೆಗಳಲ್ಲೂ ಚಟುವಟಿಕೆ ನಡೆಸುತ್ತಿವೆ. ಕುಡಿಯುವ ನೀರಿನ ಜಲಶಯಗಳ ಪರಿಶೀಲನೆ, ಕ್ಲೋರಿನೇಷನ್, ಮೆಡಿಕಲ್ ಕ್ಯಾಂಪ್, ಶಾಲೆ-ಅಂಗನವಾಡಿಗಳಲ್ಲಿ ಪರಿಶೀಲನೆ, ಧ್ವನಿವರ್ಧಕ ಮೂಲಕ ಜಾಗೃತಿ ಘೋಷಣೆ, ಜಾಗೃತಿ ತರಗತಿಗಳು, ವಲಯಗಳ ಹೊಟೆಲ್, ಬೇಕರಿ, ಹಾದಿ ಬದಿಯ ವಾಪಾರ ಸಂಸ್ಥೇಗಳ ಪರಿಶೀಲನೆ ಇತ್ಯಾದಿ ಸಮಗ್ರ ಕಾರ್ಯಕ್ರಮಗಳು ನಡೆದುಬರುತ್ತಿವೆ. ಈ ಪ್ರದೇಶಗಳ ಎಲ್ಲ ಬಾವಿಗಳ ಕ್ಲೋರಿನೈಸೇಷನ್ ಪೂರ್ಣಗೊಳ್ಳುತ್ತಿದೆ. ಜೊತೆಗೆ ಮನೆಗಳಲ್ಲಿ ಕ್ಲೋರಿನ್ ಗುಳಿಗೆಗಳ ವಿತರಣೆಯೂ ನಡೆಯುತ್ತಿದೆ. 20 ಲೀಟರ್ ನೀರಿಗೆ ಒಂದು ಟ್ಯಾಬ್ಲೆಟ್ ನಂತೆ ಬಳಸಬೇಕು. ಈಗಾಗಲೇ 155 ಮನೆಗಳ ಸಂದರ್ಶನ ಪೂರ್ಣಗೊಂಡಿದೆ.

ಚಾಲ ಮದ್ರಸಾದಲ್ಲಿ ಈ ಸಂಬಂಧ ನಡೆಸಲಾದ ಮೆಡಿಕಲ್ ಕ್ಯಾಂಪ್ ನಲ್ಲಿ 324 ಮಂದಿ ಭಾಗವಹಿಸಿದರು. 47 ಮಂದಿಯ ರಕ್ತ ಸ್ಯಾಂಪಲ್ ತಪಾಸಣೆಗೆ ಒಳಪಡಿಸಲಾಗಿದೆ. ಚಾಲ ಶಾಲೆಗೆ ಪರಿಣತ ವೈದ್ಯರ ತಂಡ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ನಡೆಸಿದೆ. ಡಾ.ಬಿಮಲ್ ರಾಜ್, ಡಾ.ರಸೀನಾ ಅವರು ತಂಡಕ್ಕೆ ನೇತೃತ್ವ ವಹಿಸಿದ್ದರು.

ನಾಳೆ (ಜು.26) ಮಧ್ಯಾಹ್ನ 2 ಗಂಟೆಗೆ ಬೆದಿರ ಜುಮಾ ಮಸೀದಿ ಆವರಣದಲ್ಲಿ ಹಳದಿ ಜ್ವರ ವಿರುದ್ಧ ಜನಜಾಗೃತಿ ನಡೆಯಲಿದೆ. ಜು.27ರಂದು ಬೆದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಆರೋಗ್ಯ ತರಗತಿ ನಡೆಯಲಿದೆ.

See also  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಲಕತ್ವದ ಫ್ಯಾಕ್ಟರಿಗೆ ಬೆಂಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು