News Kannada
Sunday, September 25 2022

ಕರ್ನಾಟಕ

ದೇಶಾಭಿಮಾನ ಮೂಡಲು ಸೈನಿಕ ಪಾರ್ಕ್ ಸಹಕಾರಿ: ಜಿಲ್ಲಾಧಿಕಾರಿ ಕೆ.ಎ.ದಯಾನಂದ - 1 min read

Photo Credit :

ದೇಶಾಭಿಮಾನ ಮೂಡಲು ಸೈನಿಕ ಪಾರ್ಕ್ ಸಹಕಾರಿ: ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿವಮೊಗ್ಗ: ಸಾರ್ವಜನಿಕರಲ್ಲಿ ಸೈನಿಕರ ಬಗ್ಗೆ ಗೌರವ ಹಾಗೂ ದೇಶಾಭಿಮಾನ ಮೂಡಲು ಸಹಕಾರಿಯಾಗುವಂತೆ ಮತ್ತು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ಗೌರವ ಅರ್ಪಿಸುವ ಸಲುವಾಗಿ ಈ ಸೈನಿಕ ಪಾರ್ಕ್ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ರಾಜ್ಯ ಶಿಲ್ಪಕಲಾ ಅಕಾಡೆಮಿ, ಜಿಲ್ಲಾಡಳಿತ, ಸೈನಿಕ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಿಮೆಂಟ್ ಶಿಲ್ಪ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರ ಕುರಿತು ಇರುವ ಒಂದು ಸಿನಿಮಾ ನೋಡಿದ ನಾವು ಎಷ್ಟೊಂದು ಭಾವುಕರಾಗುತ್ತೇವೆ. ಅದಕ್ಕೆ ಕಾರಣ, ಸೈನಿಕರ ಬಗ್ಗೆ ನಮ್ಮಲ್ಲಿರುವ ಗೌರವ, ಕಾಳಜಿಯ ಭಾವನೆ ಎಂದರು.

ಪೋಷಕರು ತಮ್ಮ ಮಕ್ಕಳನ್ನ ಇಂಜಿನಿಯರ್, ಡಾಕ್ಟರ್ ಗಳನ್ನಾಗಿಸಲು ಮಾತ್ರ ಒತ್ತು ನೀಡುವರು. ಅದೇ ತರಹ ಸೈನಿಕರನ್ನಾಗಿಸಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಈ ಪಾರ್ಕ್ ಬೇರೆ ಎಲ್ಲಾ ಪಾರ್ಕ್‍ಗಳಿಗಿಂತ ಮಾದರಿಯ ಪಾರ್ಕ್ ಆಗುವಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ರಾಜ್ಯ ಶಿಲ್ಪಕಲಾ ಅಕಡೆಮಿಯ ಅಧ್ಯಕ್ಷ ರು.ಕಾಳಾಚಾರ್ ‘ಒಂದು ಹೊಲಕ್ಕೆ ಅದರದ್ದೆ ಆದ ಬೇಲಿ ಎಷ್ಷು ಮುಖ್ಯವೋ ಹಾಗೆ ನಮ್ಮ ದೇಶ ಗಡಿ ರಕ್ಷಣೆಗೆ ಸೈನಿಕರು ಅಷ್ಟೇ ಮುಖ್ಯ’ಎಂದರು.

ಒಂದು ಕಲಾಕೃತಿ ನಿರ್ಮಿಸಲು ನಮ್ಮ ಕಲಾವಿದರು ಒಂದು ವರ್ಷದಿಂದ ಎರಡು ವರ್ಷ ತೆಗೆದುಕೊಳ್ಳುತ್ತಿದರು. ಆದರೇ ಹದಿನೈದು ದಿನಗಳಲ್ಲಿ ಸೈನಿಕರ ಹಲವು ಭಂಗಿಯ ಅಧ್ಬುತ ಕಲಾಕೃತಿಗಳನ್ನು ನಿರ್ಮಿಸಿರುವುದು ಹೆಮ್ಮೆಯ ವಿಚಾರ, ಅವದರಲ್ಲಿ ಸೈನಿಕರ ಬಗ್ಗೆ ಅವರಿಗೆ ಇರುವ ಗೌರವ ಹಾಗೂ ಯೋಧರ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಇದರಲ್ಲಿ ಪ್ರಕಟಗೊಳಿಸಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಶಿಲ್ಪಕಲಾ ಅಕಡೆಮಿ ಸಂಚಾಲಕ ರಘು.ಎಮ್. ಹಾಗೂ ಸಹಾಯಕ ಶಿಲ್ಪಕಲಾವಿದೆ ಹರಿಪ್ರಿಯ ಹದಿನೈದು ದಿನಗಳ ಶಿಬಿರದ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಪರ ಜಿಲ್ಲಾಧಿಕಾರಿ ಅನುರಾಧ, ಸೈನಿಕ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಪಾಪಯ್ಯ, ರಾಜ್ಯ ಶಿಲ್ಪಕಲಾ ಅಕಡೆಮಿ ರಿಜಿಸ್ಟಾರ್ ಶಿವರುದ್ರಪ್ಪ ಮತಿತ್ತರು ಉಪಸ್ಥಿತರಿದ್ದರು.

 

See also  ಕಾವೇರಿಯಲ್ಲಿ ರಿವರ್ ರಾಫ್ಟಿಂಗ್ ತಾತ್ಕಾಲಿಕ ನಿಷೇಧ : ಕೊಡಗು ಜಿಲ್ಲಾ ದಂಡಾಧಿಕಾರಿ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು