News Kannada
Wednesday, October 05 2022

ಕರ್ನಾಟಕ

ನಿರೀಕ್ಷಿತ ಮಳೆಯಾಗದೆ ರೈತರಿಗೆ ಸಂಕಷ್ಟ: ಯದುವೀರ್ ಕೃಷ್ಣದತ್ತ ಒಡೆಯರ್ - 1 min read

Photo Credit :

ನಿರೀಕ್ಷಿತ ಮಳೆಯಾಗದೆ ರೈತರಿಗೆ ಸಂಕಷ್ಟ: ಯದುವೀರ್ ಕೃಷ್ಣದತ್ತ ಒಡೆಯರ್

ಮಂಡ್ಯ: ಪೂರ್ವಜರು ನಿರ್ಮಿಸಿದ ಅಣೆಕಟ್ಟೆಗಳು, ಕಾಲುವೆಗಳು, ಕೆರೆ-ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿವೆ. ನಿರೀಕ್ಷಿತ ಪ್ರಮಾಣದ ಮಳೆಯಾಗದೆ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅರಣ್ಯ ನಾಶ ಹಾಗೂ ಪರಿಸರದ ಮೇಲಿನ ದಾಳಿಯೇ ಪ್ರಮುಖ ಕಾರಣವಾಗಿದೆ. ಈಗಲಾದರೂ ಎಚ್ಚೆತ್ತು ಪರಿಸರ ಉಳಿಸಲು ಎಲ್ಲರೂ ಕೈಂಕರ್ಯ ತೊಡಬೇಕು ಎಂದು ಮೈಸೂರು ಸಂಸ್ಥಾನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಹೇಳಿದರು. 

ಜೀವಧಾರೆ ಟ್ರಸ್ಟ್ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ರಾಜ್ಯದ ವೀರ ಯೋಧರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನದಿಗಳ ನೀರು ಸಂರP್ಷÀಣೆಗೆ ಅಣೆಕಟ್ಟೆಗಳ ಪಾತ್ರ ಮಹತ್ವದ್ದಾಗಿದೆ. ಮಳೆಯ ಕೊರತೆಯಿಂದ ಜಲಾಶಯಗಳು ಜೀವಕಳೆ ಕಳೆದುಕೊಂಡಿದೆ. ಮೂಲ ಪರಿಸರ ಸಂರಕ್ಷಣೆಯೊಂದಿಗೆ ಉತ್ತಮ ಮಳೆಯಾಗುವ ವಾತಾವರಣ ಸೃಷ್ಠಿಸಬೇಕು ಎಂದು ತಿಳಿಸಿದರು. 

ಹಿಮಾಲಯ ಪರ್ವತದಲ್ಲಿರುವ ಹಿಮ ಕರಗಿ ನೀರಾಗುವುದರಿಂದ ಉತ್ತರ ಭಾರತದ ನದಿಗಳು ವರ್ಷಪೂರ್ತಿ ತುಂಬಿ ಹರಿಯುತ್ತವೆ. ಆದರೆ, ದಕ್ಷಿಣ ಭಾರತದ ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರ ಮೈದುಂಬಿಕೊಳ್ಳುತ್ತವೆ. ವಾಡಿಕೆಯಷ್ಟು ಮಳೆಯಾಗದಿದ್ದರೆ ನದಿಗಳು ಸಂಪೂರ್ಣ ಸೊರಗಿಹೋಗುತ್ತವೆ. ನಮ್ಮ ಹಿರಿಯರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೆಆರ್‍ಎಸ್ ಜಲಾಶಯ, ನಾಲ್ವಡಿ ಕೃಷ್ಣರಾಜ ಹಾಗೂ ಚಿಕ್ಕ ಒಡೆಯರ್ ಕಾಲುವೆಗಳು ಸಂಪೂರ್ಣ ಬರಿದಾಗಿವೆ. ಹೀಗಾಗಿ ಮಳೆಯ ಮೂಲವಾದ ಪರಿಸರ ಸಂರP್ಷÀಣೆ ಕಾರ್ಯವನ್ನು ಎಲ್ಲರೂ ಸೇರಿ ತುರ್ತಾಗಿ ಮಾಡಬೇಕು ಎಂದು ಸಲಹೆ ನೀಡಿದರು. 

ದೇಶದಲ್ಲಿ ಪರಿಸರ ಜಾಗೃತಿ ಕಾರ್ಯಗಳು ಹಾಗೂ ಪರಿಸರ ಉಳಿಸಲು ಅನೇಕ ಹೋರಾಟಗಳು ನಡೆಯುತ್ತಾ ಬಂದಿವೆ. ಆದರೂ ಅರಣ್ಯಗಳ ನಾಶ ಮುಂದುವರಿದಿದೆ. ಪರಿಸರ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಸೇರಿದಂತೆ ಎಲ್ಲರೂ ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು. 

ಯೋಧರು ತಮ್ಮ ಕುಟುಂಬ, ಜೀವನ ಹಾಗೂ ಜೀವ ಪಣಕ್ಕಿಟ್ಟು ನಮ್ಮನ್ನು ಉಳಿಸುತ್ತಿದ್ದಾರೆ. ಅವರ ಸೇವೆ ದೇಶಕ್ಕೆ ಅತ್ಯಮೂಲ್ಯವಾಗಿದ್ದು, ಹುತಾತ್ಮ ಯೋಧರ ಸ್ಮರಣೆ ಕಾರ್ಯ ಸೂಕ್ತವಾಗಿದೆ. ನಾವೆಲ್ಲರೂ ಸಮಾಜಕ್ಕೆ ಪೂರಕವಾದ ರಕ್ತದಾನ, ಸಾಮಾಜಿಕ ಸೇವೆ ಮಾಡುವುದು ಅಗತ್ಯವಾಗಿದೆ. ದೇಶದಲ್ಲಿ 4 ಕೋಟಿ ಯೂನಿಟ್ ರಕ್ತದ ಅವಶ್ಯಕತೆಯಿದೆ. ಆದರೆ ಎಲ್ಲಾ ಮೂಲಗಳ ಸಂಗ್ರಹಣೆಯಿಂದ ಕೇವಲ 60 ಲP್ಷÀ ಯೂನಿಟ್ ಸಂಗ್ರಹಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದರು. 

ರಾಜರ ಆಡಳಿತ ಕಾಲದಿಂದಲೂ ಮೈಸೂರು ಅರಮನೆಯೊಂದಿಗೆ ಜಿಲ್ಲೆಯ ಜನರು ಅವಿನಾಭಾವ ಸಂಬಂಧ ಹೊಂದಿದ್ದರು. ಜಿಲ್ಲೆಯ ಕಷ್ಟ ಸುಖ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮ ಪೂರ್ವಜರು ಇಟ್ಟುಕೊಂಡಿರುವ ಒಡನಾಟವನ್ನು ನಾನೂ ಮುಂದುವರೆಸುತ್ತೇನೆ. ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಅರಮನೆಯಿಂದ ಸಹಾಯ ಹಸ್ತ ನೀಡುವುದಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.

See also  ಉ.ಕನ್ನಡ ಜಿಲ್ಲೆಯಲ್ಲಿ 51 ಕೊರೊನಾ ಸೋಂಕು ದೃಢ:67 ಜನ ಗುಣಮುಖ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು