News Kannada
Friday, October 07 2022

ಕರ್ನಾಟಕ

ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನ ಅದ್ಧೂರಿ ಉತ್ಸವ - 1 min read

Photo Credit :

ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನ ಅದ್ಧೂರಿ ಉತ್ಸವ

ಕೃಷ್ಣರಾಜಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಸಾಂಸ್ಕೃತಿಕ ಗ್ರಾಮವಾದ ಕೊರಟಿಕೆರೆಯಲ್ಲಿ 4ನೇ ವರ್ಷದ ಭೀಮನ ಅಮಾವಾಸ್ಯೆ ಅಂಗವಾಗಿ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಅಂಬಾರಿಯೊಳಗೆ ಪ್ರತಿಷ್ಠಾಪಿಸಿ ದಸರಾ ಮೆರವಣಿಗೆ ಮಾದರಿಯಲ್ಲಿ ಅದ್ಧೂರಿಯಾಗಿ ದೇವಿಯ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು.

ಉದ್ಯಮಿ ಬಿ.ರಾಜಶೇಖರ್ ದಂಪತಿ ವಿಶೇಷ ಪೂಜೆಯನ್ನು ಸಲ್ಲಿಸಿ ಆನೆಯ ಅಂಬಾರಿಯ ದಸರಾ ದರ್ಬಾರ್ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಹೊರಭಾಗದ ಕೊಳದಿಂದ ಬಾಲಕಿಯರ ಕೈಯ್ಯಲ್ಲಿ ಮಡಿ ಬಿಂದಿಗೆಗಳನ್ನು ಹೊರಿಸಿ ನಡೆಮುಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ವೇದಬ್ರಹ್ಮ ಶ್ರೀಧರಶರ್ಮಾ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡುಸಿದ್ಧೇಶ್ವರ ಮಠದಿಂದ ಆಗಮಿಸಿದ್ದ ಆನೆ ಗೌರಿಯ ಭುಜದ ಮೇಲೆ ದಸರಾ ದರ್ಬಾರ್ ಮಾದರಿಯಲ್ಲಿ ಮಂಟಪವನ್ನು ಇರಿಸಿ ತಾಯಿಯ ಉತ್ಸವಮೂರ್ತಿಯನ್ನು ಮಂಟಪದೊಳಗೆ ಕೂರಿಸಿ ಭಕ್ತಿಪೂರ್ವಕ ಮೆರವಣಿಗೆ ನಡೆಸಲಾಯಿತು.

ಉಘೇ ಉಘೇ ಚೌಡೇಶ್ವರಿ ಉಘೇ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು. ಶ್ರೀ ಚೌಡೇಶ್ವರಿ ಮಡೆಯ ಕರಗವನ್ನು ಹೊತ್ತಿದ್ದ ಬಾಲಕಿಯರು ಕುಣಿಯುತ್ತಾ ಹೆಜ್ಜೆಯನ್ನು ಹಾಕುತ್ತಿದ್ದ ದೃಶ್ಯ ಭಕ್ತಿಯ ಪರಾಕಾಷ್ಠೆಯನ್ನು ಇಮ್ಮಡಿಗೊಳಿಸಿತ್ತು. ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರಣೀತ್ ಮತ್ತು ಎಂಡಿ ವೈದ್ಯ ಪದವಿ ಸಂಪೂರ್ಣಗೊಳಿಸಿದ ಗ್ರಾಮದ ಮೊಮ್ಮಗಳು ಭುವನೇಶ್ವರಿ ಅವರನ್ನು ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದ ಮುಖ್ಯ ಬೀದಿಗಳಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಗಜರಾಜನು ಮೆರವಣಿಗೆಗೆ ಶೋಭೆಯನ್ನು ತಂದುಕೊಟ್ಟನು. ಕಾರ್ಯಕ್ರಮದ ನಂತರ ನಡೆದ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಐದು ಸಾವಿರಕ್ಕೂ ಹೆಚ್ಚಿನ ಭಕ್ತರು ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು.

 

See also  ಬಂಡೀಪುರ: 600 ಎಕರೆ ಭೂಮಿ ಬೆಂಕಿಗೆ ಆಹುತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು