News Kannada
Saturday, October 08 2022

ಕರ್ನಾಟಕ

ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ: ಈಶ್ವರಪ್ಪ - 1 min read

Photo Credit :

ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ: ಈಶ್ವರಪ್ಪ

ಶಿವಮೊಗ್ಗ: ಪಕ್ಷ ಏನು ಜವಾಬ್ದಾರಿ ವಹಿಸುತ್ತದೆಯೋ ಆ ಜವಾಬ್ದಾರಿಯನ್ನು ನಾನು ಹೋರಲು ಸಿದ್ದ. ನನಗೆ ಇದೇ ಬೇಕು ಎಂಬ ಆಸೆ ಇಲ್ಲವೆಂದು ಶಾಸಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಅವರು ಸ್ಮಾರ್ಟ್ ಸಿಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಪಕ್ಷದ ಸಾರಥ್ಯ ವಹಿಸುವಿರೋ ಅಥವಾ ಕ್ಯಾಬಿನೇಟ್ ನಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನಿಸುವಿರೋ ಎಂಬ ಮಾದ್ಯಮದ ಪ್ರಶ್ನೆಗೆ ಈ ಉತ್ತರ ನೀಡಿದರು.

ರಮೇಶ್ ಕುಮಾರ್ ಸಂವಿಧಾನಕ್ಕೆ ದ್ರೋಹ ಬಗೆದಿದ್ದಾರೆ. ಹಿಂದಿನ ವಿಧಾನ ಸಭಾಪತಿ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನ ಅನರ್ಹಗೊಳಿಸುವ ಮೂಲಕ ಸಂವಿಧಾನಕ್ಕೆ ದ್ರೋಹ ಮಾಡಿದ್ದಾರೆ. ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋದಾಗ ಸುಪ್ರೀಂ ಸ್ಪಷ್ಟವಾಗಿ ತಿಳಿಸಿದೆ. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸಿ ಅಥವಾ ತಿರಸ್ಕರಿಸಿ ಎಂದು ಹೇಳಿದೆ. ಅದನ್ನ ಸ್ಪಷ್ಟವಾಗಿ ಸ್ಪೀಕರ್ ಅನುಸರಿಬೇಕೆಂದು ಕಾನೂನು ತಜ್ಞರಾದ ಬಿ.ವಿ.ಆಚಾರ್ಯ, ಹಾರ್ನಳ್ಳಿ ಅಶೋಕ್ ಪುನರುಚ್ಚಿಸಿದ್ದರು. ಅದನ್ನು ಮಾಡದೆ ರಮೇಶ್ ಕುಮಾರ್ ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ವಿಷಯ ತೆಗೆದುಕೊಂಡು ಒಂದು ದಿನ ಸಂಪೂರ್ಣ ಸದನದ ಸಮಯ ಹಾಳು ಮಾಡಿದರು. ಈಗ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಮತ್ತೆ ರಮೇಶ್ ಕುಮಾರ್ ಕಾಂಗ್ರೆಸ್ ಪರ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.

ಟಿಪ್ಪು ಜಯಂತಿ ದ್ವೇಷದ ರಾಜಕಾರಣವಲ್ಲ
ಟಿಪ್ಪು ಜಯಂತಿ ರದ್ದು ಮಾಡುವ ಮೂಲಕ ರಾಜ್ಯ ಬಿಜೆಪಿ ದ್ವೇಷದ ರಾಜಕಾರಣಿ ಮಾಡುತ್ತಿದೆ ಎಂದು ಅನಿಸುತ್ತಿಲ್ಲವಾ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅಧಿಕಾರ ಹಿಡಿದ ತಕ್ಷಣವೇ ಸದನದಲ್ಲಿ ಬಿಎಸ್ ವೈ ಸ್ಪಷ್ಟ ಪಡಿಸಿದ್ದಾರೆ. ನಾನು ಯಾವುದೇ ದ್ವೇಷದ ರಾಜಕಾರಣ ಮಾಡೊಲ್ಲವೆಂದು. ಅದರಂತೆ ಅವರು ನಡೆದುಕೊಂಡಿದ್ದಾರೆ. ಟಿಪ್ಪು ಜಯಂತಿ ರದ್ದು ಮಾಡಿರುವುದು ದ್ವೇಷದ ರಾಜಕಾರಣದಿಂದ ಅಲ್ಲ, ರಾಜ್ಯದ ಕಾನೂನು ವ್ಯವಸ್ಥೆಯಿಂದ ಎಂದು ಸ್ಪಷ್ಟಪಡಿಸಿದರು.

See also  ಕೇರಳದಲ್ಲಿ ನಿಫಾ ವೈರಸ್– ರಾಜ್ಯದಲ್ಲಿ ಬಿಗಿ ಕ್ರಮ: ಮುಖ್ಯಮಂತ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು