News Kannada
Sunday, September 25 2022

ಕರ್ನಾಟಕ

ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಭಾಗಶಃ ವಾಹನ ಸಂಚಾರಕ್ಕೆ ಅನುವು - 1 min read

Photo Credit :

ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಭಾಗಶಃ ವಾಹನ ಸಂಚಾರಕ್ಕೆ ಅನುವು

ಕಾಸರಗೋಡು: ಭೂಕುಸಿತದಿಂದ ಸಂಚಾರ ನಿಷೇಧಿಸಲಾಗಿದ್ದ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಭಾಗಶಃ ವಾಹನ ಸಂಚಾರ ಆರಂಭಿಸಲು ಅನುಮತಿ ನೀಡಲಾಗಿದೆ. ಬದಿಯಡ್ಕ-ಪೆರ್ಲ ನಡುವಿನ ಕರಿಂಬಿಲದಲ್ಲಿ ಭೂಕುಸಿತದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.

ಘನ ವಾಹನ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ಸರಕು ವಾಹನಗಳಿಗೆ ನಿಷೇಧ ಮುಂದುವರಿಯಲಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ರೋಗಿಗಳು ಕುಳಿತು ಸಂಚಾರ ನಡೆಸಬಹುದು. ಆದರೆ ಇತರ ಪ್ರಯಾಣಿಕರು ಭೂಕುಸಿತ ಒಂದು ಭಾಗದಲ್ಲಿ ಇಳಿದು ಇನ್ನೊಂದು ಭಾಗಕ್ಕೆ ನಡೆದುಕೊಂಡು ಬಂದು ಮತ್ತೆ ಬಸ್ ಹತ್ತಬೇಕು.

ಸಂಚಾರ ನಿಯಂತ್ರಣದ ಹೊಣೆಯನ್ನು ಪೊಲೀಸ್ ಮತ್ತು ರಸ್ತೆ ಸಾರಿಗೆ ಅಧಿಕಾರಿಗೆ ನೀಡಲಾಗಿದೆ. ಲಘು ವಾಹನಗಳ ಸಹಿತ ವಾಹನಗಳು ವೇಗ ಕಡಿತಗೊಳಿಸಿ ಸಂಚಾರ ನಡೆಸಬೇಕು.

ಗುಡ್ಡದಿಂದ ಮಣ್ಣು ಕುಸಿತದ ಭೀತಿ ಹಾಗಯೇ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅಧ್ಯಯನ ನಡೆಸುವ ನಿಟ್ಟಿನಲ್ಲಿ ನ್ಯಾಷನಲ್ ಸೆಂಟರ್ ಫಾರ್ ಅರ್ಥ್ ಸಯನ್ಸ್ ನ ಪರಿಣತರ ಸೇವೆ ಲಭ್ಯತೆ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.ಮಳೆ ಮತ್ತೆ ಬಿರುಸುಗೊಂಡಲ್ಲಿ ಸಂಚಾರ ಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು .

ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು,ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಲೋಕೋಪಯೋಗಿ ರಸ್ತೆ ಕಾರ್ಯಕಾರಿ ಇಂಜಿನಿಯರ್ ವಿನೋದ್ ಕುಮಾರ್, ಸೀನಿಯರ್ ಜಿಯಾಲಜಿಸ್ಟ್ ವಿ.ದಿವಾಕರನ್, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

See also  ಕೇಂದ್ರ ತಂಡದಿಂದ ಮಳೆಹಾನಿ ಮಾಹಿತಿ ಸಂಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು