News Kannada
Wednesday, September 28 2022

ಕರ್ನಾಟಕ

ಚಾಮುಂಡಿ ಬೆಟ್ಟದಲ್ಲಿ ಪ್ರಾಚೀನ ಕೊಳಗಳ ಶೋಧ - 1 min read

Photo Credit :

ಚಾಮುಂಡಿ ಬೆಟ್ಟದಲ್ಲಿ ಪ್ರಾಚೀನ ಕೊಳಗಳ ಶೋಧ

ಮೈಸೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ ಮೈಸೂರಿನ ರಾಷ್ಷೀಯ ಸೇವಾ ಯೋಜನಾ ಘಟಕದ ವತಿಯಿಂದ ಇತಿಹಾಸ ಪ್ರಸಿದ್ದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಚತಾ ಕಾರ್ಯದ ಸಂದರ್ಭದಲ್ಲಿ ಸ್ಥಳಿಯರ ಮಾಹಿತಿಯ ಮೇರೆಗೆ ಪುರಾತತ್ವ ಮತ್ತು ಇತಿಹಾಸ ಸಂಶೋಧಕರು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ಸ್ವಯಂಸೇವಕರ ಸಹಕಾರದೊಂದಿಗೆ ಕ್ಷೇತ್ರ ಕಾರ್ಯ ಮಾಡಿ ಎರಡು ಪ್ರಾಚೀನ ಕೊಳಗಳನ್ನು ಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮುಂಡಿ ದೇವಾಲಯದಿಂದ ನಂದಿ ವಿಗ್ರಹಕ್ಕೆ ಮೆಟ್ಟಿಲುಗಳ ಮೂಲಕ ಹೋಗುವ ಮಾರ್ಗದಲ್ಲಿ ಮೆಟ್ಟಿಲುಗಳ ಎಡ ಭಾಗದಲ್ಲಿ ಸುಮಾರು 300 ಅಡಿ ದೂರದಲ್ಲಿ ಬೆಳೆದು ನಿಂತ ಮರಗಳ ಮಧ್ಯೆ ಪೂರ್ವ-ಪಶ್ಚಿಮ 15.5 ಅಡಿ, ಉತ್ತರ- ದಕ್ಷಿಣ 12 ಅಡಿ ವಿಸ್ತೀರ್ಣದ ಕೊಳಯಿದೆ. ಕೊಳದ ಮೆಟ್ಟಿಲುಗಳ ವಿಸ್ತೀರ್ಣ 5.6ಅಡಿಯಿವೆ. ಕೊಳ ಮಣ್ಣು, ಗಿಡಗಳಿಂದ ಮುಚ್ಚಿ ಹೋಗಿದೆ. ಇನ್ನೊಂದು ಕೊಳ ಮೆಟ್ಟಿಲುಗಳಿಂದ ಹಾದು ಹೋಗುವಾಗ ಮೆಟ್ಟಿಲುಗಳ ಬಲ ಭಾಗದಲ್ಲಿ ಗಿಡ ಮರಗಳ ಮದ್ಯಭಾಗದಲ್ಲಿ ಪೂರ್ವ-ಪಶ್ಚಿಮ 15.5 ಅಡಿ, ಉತ್ತರ- ದಕ್ಷಿಣ 12 ಅಡಿ ವಿಸ್ತೀರ್ಣದ ಕೊಳಯಿದೆ. ಮೆಟ್ಟಿಲುಗಳ ವಿಸ್ತೀರ್ಣ 5.6 ಅಡಿಯಿದೆ. ಈ ಕೊಳಗಳ ವಿಸ್ತೀರ್ಣ ಒಂದೇ ಆಗಿದ್ದು ಒಂದೇ ಕಾಲಾವಾಧಿಯಲ್ಲಿ ನಿರ್ಮಿಸಿರುವ ಸಾಧ್ಯತೆಯಿದೆ.

ದೊಡ್ಡ ದೇವರಾಜ ಒಡೆಯರು ಕ್ರಿ.ಶ.1664 ರಲ್ಲಿ ಚಾಮುಂಡಿಬೆಟ್ಟಕ್ಕೆ 1000 ಮೆಟ್ಟಿಲು ಹಾಗೂ 700 ನೇ ಮೆಟ್ಟಿಲುಗಳ ಹತ್ತಿರ ಬೃಹದಾಕಾರದ 16 ಅಡಿ ಎತ್ತರದ ಏಕಶಿಲಾಕಲ್ಲಿನ ಬಸವನನ್ನು ನಿರ್ಮಿಸಿದರು. ಇದೇ ಕಾಲಾವಾದಿಯಲ್ಲಿ ಇಲ್ಲಿಯ ಕೊಳಗಳನ್ನು ಸ್ಥಳೀಯವಾಗಿ ಸಿಗುವ ದೊಡ್ಡ, ಚಿಕ್ಕಕಲ್ಲುಗಳನ್ನು ಬಳಸಿ, ಮೆಟ್ಟಿಲುಗಳ ಮುಖಾಂತರ ಬರುವ ಜನರಿಗೆ ಕುಡಿಯುವ ನೀರಿಗಾಗಿ, ಮೆಟ್ಟಿಲುಗಳ ಎಡ ಮತ್ತು ಬಲಭಾಗದಲ್ಲಿ ಕೊಳಗಳನ್ನು ನಿರ್ಮಿಸಿರಬಹುದು. ಹೆಚ್ಚಿನ ಅಧ್ಯಯನ ಮಾಡುತ್ತಿದ್ದೇನೆ.

ಈ ಕೊಳಗಳ ಜೀರ್ಣೋಧ್ಧಾರ ಹಾಗೂ ಸಂರಕ್ಷಣಾ ಕಾರ್ಯವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರಿನ ರಾಷ್ಷೀಯ ಸೇವಾ ಯೋಜನಾ ಘಟಕದ 60 ಸ್ವಯಂಸೇವಕರು ಹಾಗೂ ನಮ್ಮ ಮೈಸೂರು ಫೌಂಡೇಶನ್ ಹಾಗೂ ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಮಾಡಲಾಗುತ್ತಿದೆ ಎಂದು ಡಾ.ಎಸ್.ಜಿ.ರಾಮದಾಸರೆಡ್ಡಿ ಹೇಳಿದ್ದಾರೆ.

See also  ‘ಕೊಡಗ್‍ರ ಸಿಪಾಯಿ’ ಚಿತ್ರೀಕರಣ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು