News Kannada
Friday, October 07 2022

ಕರ್ನಾಟಕ

ಭಾರೀ ಮಳೆಗೆ ಉತ್ತರ ಕನ್ನಡದಲ್ಲಿ ಕೋಟ್ಯಂತರ ರೂ. ನಷ್ಟ - 1 min read

Photo Credit :

ಭಾರೀ ಮಳೆಗೆ ಉತ್ತರ ಕನ್ನಡದಲ್ಲಿ ಕೋಟ್ಯಂತರ ರೂ. ನಷ್ಟ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಖಾಸಗಿ ಹಾಗೂ ವಿವಿಧ ಇಲಾಖೆಯ ಕೋಟ್ಯಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು ರಸ್ತೆ, ಸೇತುವೆ, ವಿದ್ಯುತ್,ಮನೆ, ಆಸ್ತಿ-ಪಾಸ್ತಿ ಹಾನಿಯಾಗಿದೆ.

ಬುಧವಾರ ಕರಾವಳಿ ಹಾಗೂ ಮಳೆನಾಡಿನಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಮಳೆಯ ವಾತಾವರಣವಿದ್ದು, ರಾತ್ರಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಕಾಳಿ ಹಿನ್ನಿರಿನಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಕದ್ರಾ ಜಲಾಶಯದ ಒಟ್ಟೂ 10 ಗೇಟುಗಳನ್ನು ತೆರೆದು 1.58 ಲಕ್ಷ ಕ್ಯುಸೆಕ್ಸ್ ನೀರು ಹರಿದು ಬೀಡಲಾಗುತ್ತಿದೆ.

ಮಂಗಳವಾರ ಪೂರ್ತಿ ದಿನ ಬುಧವಾರ ಬೆಳಗ್ಗೆ 8 ಗಂಟೆಯವರೆಗೆ ಒಟ್ಟು 39 ಟಿಎಂಸಿ ನೀರು ಹರಿದು ಬಿಡಲಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿಯ ಕೆಲವು ತಾಲೂಕಿನಲ್ಲಿ ಮಳೆ ತಗ್ಗಿದೆ. ಆದರೆ ಹೊನ್ನಾವರದಲ್ಲಿ ಸತತ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದರಿಂದ ಗುರುವಾರವೂ ಉತ್ತರ ಕನ್ನಡ ಜಿಲ್ಲೆಯ ಶಾಲೆ, ಕಾಲೇಜು ಹಾಗೂ ಅಂಗನವಾಡಿಗೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ರಜೆ ಘೋಷಣೆ ಮುಂದುವರಿಸಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾಗಿದ್ದ ಪುನರ್ವಸತಿ ಕೇಂದ್ರಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳು ಸರಬರಾಜು ಮಾಡಲಾಗುತ್ತಿದ್ದು ನೂರಾರು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಆದರೆ ತಾಲೂಕಿನ ಕೈಗಾದಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರದಲ್ಲಿ ಆಹಾರ ವಸತಿ ಹಾಗೂ ನೀರಿನ ವ್ಯವಸ್ಥೆ ಇಲ್ಲದ ಕಾರಣ ಆಶ್ರಯ ಪಡೆದ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಜಿಲ್ಲಾಧಿಕಾರಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕದ್ರಾ ಜಲಾಶಯದಿಂದ ಮತ್ತೆ ನೀರು ಬಿಟ್ಟ ಪರಿಣಾಮ ಹಣಕೋಣ, ಕಿನ್ನರ, ಹಳಗಾ, ಉಳಗಾ ಸೇರಿದಂತೆ ಇನ್ನಿತರ ಗ್ರಾಮದ ಜನರನ್ನು ಬೆಳಗ್ಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

ಇದರಿಂದಾಗಿ ಕದ್ರಾ ಭಾಗದಲ್ಲಿ ಪ್ರವಾಹ ಹೆಚ್ಚಾಗುವ ಭೀತಿ ಎದುರಾಗಿದ್ದು ಇನ್ನೂ ಹೆಚ್ಚಿನ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಗಗಳಿವೆ. ಈ ಹಿನ್ನಲೆಯಲ್ಲಿ ನದಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆ ಆಗುವ ತನಕ ಗಂಜಿ ಕೇಂದ್ರ ಬಿಟ್ಟು ಮನೆಗೆ ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕುಮಟಾ ಶಿರಸಿಯ ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತಗೊಂಡು ರಾಜ್ಯ ಹೆದ್ದಾರಿ ಬಂದ್ ಆಗಿದ್ದು ಸಂಚಾರ ಸ್ಥಗಿತಗೊಂಡಿದೆ.

See also  ದೆಹಲಿ ರಾಜಪಥದಲ್ಲಿ ಕೊಡಗಿನ ಕಾಫಿ ಪರಿಮಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು