News Kannada
Sunday, September 25 2022

ಕರ್ನಾಟಕ

ಕೊಡಗಿನಲ್ಲಿ ತಗ್ಗದ ಪ್ರವಾಹ: ನೂರಾರು ಮನೆಗಳು ಮುಳುಗಡೆ; ಪತ್ತೆಯಾಗದ ಮೃತದೇಹಗಳು - 1 min read

Photo Credit :

ಕೊಡಗಿನಲ್ಲಿ ತಗ್ಗದ ಪ್ರವಾಹ: ನೂರಾರು ಮನೆಗಳು ಮುಳುಗಡೆ; ಪತ್ತೆಯಾಗದ ಮೃತದೇಹಗಳು

ಮಡಿಕೇರಿ: ಕಾವೇರಿನಾಡು ಕೊಡಗಿನಲ್ಲಿ ಮಳೆ ಶಾಂತವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಜಿಲ್ಲೆಯಲ್ಲಿ ನಿರಂತರವಾಗಿ ಗಾಳಿ ಮಳೆಯಾಗುತ್ತಿದ್ದು, ವೀರಾಜಪೇಟೆ ತಾಲ್ಲೂಕಿನಲ್ಲಿ ಜಲಪ್ರಳಯದ ಆತಂಕ ಮುಂದುವರೆದಿದೆ.

ಅತೀ ಹೆಚ್ಚು ಮಳೆಯಾಗುತ್ತಿರುವ ತಲಕಾವೇರಿ, ಭಾಗಮಂಡಲದಲ್ಲಿ ಶನಿವಾರ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದ್ದು, ಶ್ರೀ ಭಗಂಡೇಶ್ವರ ದೇಗುಲದ ಗರ್ಭಗುಡಿಯನ್ನು ಆವರಿಸಿದ್ದ ಪ್ರವಾಹದ ನೀರು ತಗ್ಗಿದ್ದು, ದೇವಾಲಯದ ಹೊರ ಆವರಣದ ಮೆಟ್ಟಿಲಿನ ಮಟ್ಟದಲ್ಲಿದೆ.

ಮಡಿಕೇರಿ ಮತ್ತು ವೀರಾಜಪೇಟೆ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆಯಾದರು ದೊಡ್ಡ ಅನಾಹುತಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ್ಲ. ಆದರೆ, ವೀರಾಜಪೇಟೆ ತಾಲ್ಲೂಕು ಜಲಾವೃತಗೊಳ್ಳುತ್ತಲೇ ಇದ್ದು, ದಕ್ಷಿಣ ಕೊಡಗಿನ ಬಹುತೇಕ ಭಾಗ ಜಲಮಯವಾಗಿದೆ. ಸಾವಿರಾರು ಕುಟುಂಬಗಳನ್ನು ಪರಿಹಾರ ಕೇಂದ್ರ್ರಗಳಿಗೆ ಸ್ಥಳಾಂತರಿಸಲಾಗಿದೆ.

ಪತ್ತೆಯಾಗದ ಮೃತದೇಹ
ಶುಕ್ರವಾರ ವೀರಾಜಪೇಟೆಯ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ 8 ಮಂದಿ ಇನ್ನೂ ಕೂಡ ಪತ್ತೆಯಾಗಿಲ್ಲ. ಇವರುಗಳು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಬಗ್ಗೆ ಶಂಕೆ ಮೂಡಿದ್ದು, ಸೇನಾಪಡೆ ಮತ್ತು ಎನ್‍ಡಿಆರ್‍ಎಫ್ ತಂಡಕ್ಕೆ ಪ್ರತಿಕೂಲ ಹವಾಮಾನದ ಕಾರಣ ಕಾರ್ಯಾಚರಣೆ ನಡೆಸಲು ಕಷ್ಟಸಾಧ್ಯವಾಗುತ್ತಿದೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮತ್ತೆ ಗುಡ್ಡ ಕುಸಿಯುವ ಪರಿಸ್ಥಿತಿ ಇರುವುದರಿಂದ ಕಾರ್ಯಾಚರಣೆಗೆ ತೊಡಕುಂಟಾಗಿದೆ.
ಉಳಿದಂತೆ ದಕ್ಷಿಣ ಕೊಡಗಿನ ಬಹುತೇಕ ಎಲ್ಲಾ ತೋಟಗಳು ಹಾಗೂ ಗದ್ದೆಗಳು ಮುಳುಗಡೆಯಾಗಿವೆ. ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ ಭಾಗದಲ್ಲಿ ಪ್ರವಾಹದ ನೀರು ಏರಿಕೆಯಾಗುತ್ತಲೆ ಇದ್ದು, ನೂರಾರು ಮನೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಜಾನುವಾರುಗಳು ಕೂಡ ನೀರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿವೆ.

ಜಿಲ್ಲಾಡಳಿತ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಗಳು ಪ್ರವಾಹದ ಮಟ್ಟ ಏರುತ್ತಿರುವಂತೆಯೇ ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ. ಆದರೆ, ಮನೆಯಲ್ಲಿದ್ದ ಯಾವುದೇ ವಸ್ತುಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದು, ದಾಖಲೆಗಳು ಕೂಡ ನೀರು ಪಾಲಾಗಿದೆ.

ಕೊಂಡಂಗೇರಿಯಲ್ಲಿ ಇಲ್ಲಿಯವರೆಗೂ ಮುಳುಗಡೆಯಾಗದ ಸಾಕಷ್ಟು ಪ್ರದೇಶಗಳು ಈ ಬಾರಿ ಜಲಾವೃತವಾಗಿದ್ದು, ನೂರಾರು ಕುಟುಂಬಗಳು ಉಟ್ಟಬಟ್ಟೆಯಲ್ಲಿ ಪರಿಹಾರ ಕೇಂದ್ರಗಳಿಗೆ ತೆರಳಿದ್ದು, ಇಲ್ಲಿನ ಬ್ಯಾಂಕ್‍ವೊಂದು ಮುಳುಗಡೆಯಾಗಿದೆ. ಕಾವೇರಿ ನದಿಗೆ ಅಡ್ಡಲಾಗಿರುವ ಸೇತುವೆ ಮುಳುಗಡೆಗೆ ಕೇವಲ 2 ಅಡಿಗಳಷ್ಟೆ ಬಾಕಿ ಇದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಮಿತಿ ಮೀರಿ ಮಳೆಯಾಗುತ್ತಿದ್ದು, ಕೊಟ್ಟಮುಡಿ ಭಾಗದಲ್ಲಿ ಕೃಷಿ ಭೂಮಿ ಸೇರಿದಂತೆ ಮನೆಗಳು ಜಲಾವೃತವಾಗಿವೆ.

ಜೋಡುಪಾಲದಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದ್ದು, ಜಿಲ್ಲಾಡಳಿತ ಬಿದ್ದ ಮರಗಳಿಂದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಟ್ಟಿದ್ದು, 9 ಕುಟುಂಬಗಳು ಈ ಕಾರಣದಿಂದ ಸುರಕ್ಷಿತವಾಗಿವೆ.

See also  ಗೌರಿ ಗಣೇಶೋತ್ಸವ ಹಬ್ಬ: ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು