News Kannada
Monday, September 26 2022

ಕರ್ನಾಟಕ

ಬೆಳ್ತಂಗಡಿ ನೆರೆ ಸಂತ್ರಸ್ತರ ನೆರವಿಗೆ ನಿಂತ ಸೇವಾಭಾರತಿ - 1 min read

Photo Credit :

ಬೆಳ್ತಂಗಡಿ ನೆರೆ ಸಂತ್ರಸ್ತರ ನೆರವಿಗೆ ನಿಂತ ಸೇವಾಭಾರತಿ

ಬೆಳ್ತಂಗಡಿ: ವಿಪತ್ತುಗಳು ಎಲ್ಲಿಯೇ ಬರಲಿ ಅಲ್ಲಿ ಸೇವೆಗೆ ಸದಾ ಸಿದ್ಧ ಎಂಬುದನ್ನು ಸೇವಾ ಭಾರತಿ ತೋರಿಸಿಕೊಟ್ಟಿದೆ. ಕಳೆದ ಬಾರಿ ಕೇರಳದಲ್ಲಿ ಬಂದ ಮಹಾಪ್ರವಾಹದ ಸಂದರ್ಭ ಸೇವಾಭಾರತಿ ಮಾಡಿರುವ ಮಾನವೀಯ ಸೇವೆ ಅಲ್ಲಿನ ಸಂತ್ರಸ್ತರಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ.

ಅದೇ ರೀತಿ ಈ ಬಾರಿ ಬೆಳ್ತಂಗಡಿಯ ಹಲವೆಡೆ ಕಂಡು ಬಂದ ಮಹಾ ನೆರೆಯ ಸಂದರ್ಭ ಸೇವಾ ಭಾರತಿ ತನ್ನ ಸೇವಾ ಯಜ್ಞವನ್ನು ಪ್ರಾರಂಭಿಸಿದೆ. ಸುಮಾರು ನೂರಕ್ಕೂ ಹೆಚ್ಚು ಸ್ವಯಂಸೇವಕರು ತಮ್ಮ ಸ್ವಂತ ಕೆಲಸಗಳನ್ನು ಬದಿಗೊತ್ತಿ ಚಾರ್ಮಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಪಾಲನಾ ಕೇಂದ್ರದಲ್ಲಿ ಮೌನವಾಗಿ ಸೇವಾ ಚಟುವಟಿಕೆಗಳನ್ನು ನೆರೆ ಬಂದ ಆ. 9 ರ ರಾತ್ರಿಯಂದೇ ಆರಂಭಿಸಿದ್ದಾರೆ. ಇಲ್ಲಿ ಸುಮಾರು 110 ರಷ್ಟು ಸಂತ್ರಸ್ಥರಿದ್ದಾರೆ. ಇವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಊಟ, ಸಂಜೆಯ ಊಟೋಪಚಾರದ ಕಾರ್ಯವನ್ನು ನಿರ್ವಂಚನೆಯಿಂದ ಸೇವಾ ಭಾರತಿ ಮಾಡುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಅಲ್ಲಿನ ಗ್ರಾಮ ಪಂಚಾಯತು ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಸ್ವಚ್ಛತೆ, ಭೋಜನ, ಆರೋಗ್ಯ ಇತ್ಯಾದಿ ವಿವಿಧ ವಿಭಾಗಗಳ ಕಾರ್ಯಗಳನ್ನು ಶಿಸ್ತು ಬದ್ಧವಾಗಿ ಕಳೆದ ಒಂದು ವಾರದಿಂದ ನಡೆಸುತ್ತಿದ್ದಾರೆ. ಪಾಲನಾ ಕೇಂದ್ರದಲ್ಲಿ ಹತ್ತು ಮಂದಿ ಸ್ವಯಂಸೇವಕರು ದಿನನಿತ್ಯದ ಸಾಮಾನುಗಳನ್ನು ಜೋಡಿಸಿಟ್ಟು, ಅದರ ಲೆಕ್ಕ ಬರೆದು, ವಿತರಿಸುವ ಕೆಲಸ ಮಾಡುತ್ತಿದ್ದರೆ, ಹತ್ತು ಮಂದಿಯಷ್ಟು ಸ್ವಯಂಸೇವಕರು ಅಡುಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ಕೆಲವರು ಚಾರ್ಮಾಡಿ ಪರಿಸರದಲ್ಲಿ ಬಂದ ಪ್ರವಾಹದಿಂದ ಬದುಕುಳಿದ ದನಕರುಗಳ ದೇಖಿರೇಖಿ ಮಾಡುತ್ತಿದ್ದಾರೆ. ಇನ್ನುಳಿದ ಐವತ್ತಕ್ಕೂ ಹೆಚ್ಚು ಸ್ವಯಂಸೇವಕರು ನೆರಪೀಡಿತ ಸುತ್ತಲಿನ ಗ್ರಾಮಗಳಿಗೆ ತೆರಳಿ ಸೇತುವೆಗಳು ಮುರಿದು ಹೋಗಿರುವಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ, ದಾರಿ ದುರುಸ್ಥಿ, ಮನೆ ರಿಪೇರಿ, ಮನೆ ಸ್ವಚ್ಛತೆ ಮೊದಲಾದ ತುರ್ತು ಸೇವೆಗಳನ್ನು ಕೈಗೊಳ್ಳುತ್ತಿದ್ದಾರೆ. ಚಾರ್ಮಾಡಿ ಪರಿಸರದಲ್ಲಿ ಸುಮಾರು 68 ಮನೆಗಳು ನಿವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ಬಂದಿವೆ. ಅದನ್ನು ಮೊದಲಿನ ಸ್ಥಿತಿಗೆ ತರಲು ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ.

 

See also  ಕಾಸರಗೋಡು ಜಿಲ್ಲೆಯ ಹಲವೆಡೆ ನಿಷೇದಾಜ್ಞೆ ಜಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು