News Kannada
Saturday, October 08 2022

ಕರ್ನಾಟಕ

ರಾಜ್ಯಮಟ್ಟದ ಸಬ್ ಜೂನಿಯರ್ ಟೆಕ್ವಾಂಡೋ: ಮರ್ಕರ ಟೆಕ್ವಾಂಡೋ ಕ್ಲಬ್‍ಗೆ 3 ಪದಕ - 1 min read

Photo Credit :

ರಾಜ್ಯಮಟ್ಟದ ಸಬ್ ಜೂನಿಯರ್ ಟೆಕ್ವಾಂಡೋ: ಮರ್ಕರ ಟೆಕ್ವಾಂಡೋ ಕ್ಲಬ್‍ಗೆ 3 ಪದಕ

ಮಡಿಕೇರಿ: ಕರ್ನಾಟಕ ಟೆಕ್ವಾಂಡೊ ಅಸೋಸಿಯೇಷನ್ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ಆ.7ರಿಂದ 11ರವರೆಗೆ ನಡೆದ 37ನೇ ರಾಜ್ಯಮಟ್ಟದ ಸಬ್ ಜೂನಿಯರ್ ಟೆಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಮರ್ಕರ ಟೆಕ್ವಾಂಡೋ ಕ್ಲಬ್‍ನ ಕ್ರೀಡಾ ಪಟುಗಳು ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಪಡೆದಿದ್ದಾರೆ.

ಮಡಿಕೇರಿಯ ರೆಸ್‍ಕೋರ್ಸ್ ರಸ್ತೆಯ ನಿವಾಸಿ ಅಮೀನ್ ಮೊಹಿಸಿನ್ ಹಾಗೂ ಹಜ್ಮಿಲ ದಂಪತಿಗಳ ಪುತ್ರ ಮಿಶಾಲ್ ಚಿನ್ನದ ಪದಕವನ್ನು, ಕುಶಾಲನಗರದ ಕಾವೇರಿ ಬಡಾವಣೆಯ ನಿವಾಸಿ ಬೈರಪ್ಪ ಹಾಗೂ ಶೋಭಾ ದಂಪತಿಗಳ ಪುತ್ರಿ ಚಾರ್ವಿಸುಬ್ಬಯ್ಯ ಬೆಳ್ಳಿ ಪದಕ ಹಾಗೂ ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ದಿನಕರ್ ಹಾಗೂ ರಾಶಿ ದಂಪತಿಗಳ ಪುತ್ರ ಯು.ಡಿ.ಮೋನಿಶ್ ಕಂಚಿನ ಪದಕ ಗೆದ್ದಿದ್ದಾರೆ.

ವಿದ್ಯಾರ್ಥಿಗಳು ಮರ್ಕರ ಟೆಕ್ವಾಂಡೋ ಕ್ಲಬ್‍ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

See also  ಮಲೆಮಹದೇಶ್ವರಬೆಟ್ಟ: ಸೌಲಭ್ಯಕ್ಕೆ ಬಸ್ ನೌಕರರ ಆಗ್ರಹ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು