News Kannada
Wednesday, October 05 2022

ಕರ್ನಾಟಕ

ಕಾಸರಗೋಡು: ಬೈಕ್-ಕಾರು ಅಪಘಾತದಲ್ಲಿ ಕೃಷಿ ಸಹಾಯಕ ದುರ್ಮರಣ - 1 min read

Photo Credit :

ಕಾಸರಗೋಡು: ಬೈಕ್-ಕಾರು ಅಪಘಾತದಲ್ಲಿ ಕೃಷಿ ಸಹಾಯಕ ದುರ್ಮರಣ

ಕಾಸರಗೋಡು : ಬೈಕ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಕೃಷಿ ಸಹಾಯಕ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮೃತಪಟ್ಟವರನ್ನು ಬದಿಯಡ್ಕ ಕೃಷಿ ಭವನದ ಕೃಷಿ ಸಹಾಯಕ ರಾಧಾಕೃಷ್ಣ ( ೩೦) ಮೃತಪಟ್ಟವರು.

ಕೃಷಿ ಭವನದ ಇನ್ನೋರ್ವ ನೌಕರ , ಕಾಡಗದ ಉಣ್ಣಿ ಕೃಷ್ಣ ಗಂಭೀರ ಗಾಯಗೊಂಡಿದ್ದು , ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಕಾರು ಚಾಲಕ ಮಾವಿನಕಟ್ಟೆಯ ಅಬ್ದುಲ್ಲಾ ಕೂಡಾ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಬದಿಯಡ್ಕ ಸಮೀಪದ ಬಾರಡ್ಕದಲ್ಲಿ ಅಪಘಾತ ನಡೆದಿತ್ತು.

ಮುಳಿಯಾರು ಕೋಟೂರು ನಿವಾಸಿಯಾದ ರಾಧಾಕೃಷ್ಣ ರವರು ಕಚೇರಿಗೆ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು , ಗಂಭೀರ ಗಾಯಗೊಂಡ ರಾಧಾಕೃಷ್ಣ ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯಾಹ್ನ ಮೃತಪಟ್ಟರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

See also  ಕಾಸರಗೋಡು: ಒಂದೇ ಮನೆಯ ನಾಲ್ವರ ಬರ್ಬರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು