News Kannada
Saturday, October 01 2022

ಕರ್ನಾಟಕ

ಪ್ರವಾಹ ದುರಂತ ಭೂಮಿಯಲ್ಲಿ ಹಿಂದೂ, ಮುಸ್ಲಿಂ ಭಾವೈಕ್ಯತೆ - 1 min read

Photo Credit :

ಪ್ರವಾಹ ದುರಂತ ಭೂಮಿಯಲ್ಲಿ ಹಿಂದೂ, ಮುಸ್ಲಿಂ ಭಾವೈಕ್ಯತೆ

ಮಡಿಕೇರಿ: `ಊರಿಗೊಂದು ಜಾತಿ ಇರಬಹುದು, ಆದರೆ ನೀರಿಗೆಂದೂ ಜಾತಿ, ಧರ್ಮಗಳಿಲ್ಲ’ ಈ ಮಾತಿಗೆ ಮತ್ತಷ್ಟು ಪುಷ್ಠಿ ನೀಡಿದ್ದು ಕಳೆದ ವಾರ ನಾಡಿನೆಲ್ಲೆಡೆ ಕಾಡಿದ ಮಹಾ ಪ್ರವಾಹ. ಊರಿಗೆ ಊರೇ ಕೊಚ್ಚಿಕೊಂಡು ಹೋಗುವಾಗ ಪ್ರವಾಹದ ನೀರು ಯಾರನ್ನೂ ಜಾತಿ ಆಧಾರದಲ್ಲಿ ಸೆಳೆದುಕೊಂಡು ಹೋಗಲಿಲ್ಲ. ಇದೇ ಕಾರಣಕ್ಕೆ ಇಂದು ಪ್ರಕೃತಿ ಕಲಿಸಿದ ಪಾಠಕ್ಕೆ ತಲೆಬಾಗಿ ಭಾವೈಕ್ಯತೆಯ ಪ್ರತಿಧ್ವನಿಗಳು ಬಲಗೊಳ್ಳುತ್ತಿವೆ.

ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಸಮಿತಿಯ ಪ್ರಮುಖರಾದ ಅಬ್ದುಲ್ಲಾ ಫೈಜಿ ಹಾಗೂ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಂಬ ಮಠದ ಮಠಾಧಿಪತಿ ಶ್ರೀಬೋಧ ಸ್ವರೂಪಾನಂದ ಸ್ವಾಮೀಜಿಯವರ ನೇತೃತ್ವದ ತಂಡ ನೆಲ್ಲಿಹುದಿಕೇರಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿತು.

ಶ್ರೀಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನೆರೆ ಸಂತ್ರಸ್ತರಿಗೆ ಪರಸ್ಪರ ಕೈಜೋಡಿಸಿ ಸಹೋದರತೆಯನ್ನು ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಎಸ್‍ಕೆಎಸ್‍ಎಸ್‍ಎಫ್‍ನ ಮಾಧ್ಯಮ ಸಂಚಾಲಕ ಸಿ.ಎಂ.ಹಮೀದ್ ಮೌಲವಿ, ಮಹಾಮಳೆಯ ಪ್ರವಾಹಕ್ಕೆ ತುತ್ತಾಗಿ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಮಹಾಮಳೆಯಿಂದಾಗಿ ತಮ್ಮ ಅತ್ಯವಶ್ಯಕವಾದ ದಾಖಲಾತಿ ಕಳೆದುಕೊಂಡ ಸಂತ್ರಸ್ತರಿಗೆ ಜಿಲ್ಲಾ ಆಡಳಿತ ಮತ್ತು ಸರ್ಕಾರ ಶಾಶ್ವತವಾದ ಪರಿಹಾರವನ್ನು ಒದಗಿಸಿಕೊಡಬೇಕು ಎಂದರು.

ಶಾರದಾಂಬ ಮಠದ ಸ್ವಾಮೀಜಿಗಳೊಂದಿಗೆ ಕೈಜೋಡಿಸಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಅವಕಾಶ ಲಭಿಸಿರುವುದು ಸಂತೋಷದ ವಿಚಾರವಾಗಿದೆ. ಕಳೆದ ವರ್ಷ ಮಹಾಮಳೆಗೆ ತುತ್ತಾಗಿ ಸಂಕಷ್ಟದಲ್ಲಿ ಸಿಲುಕಿದ ಸಂತ್ರಸ್ತರಿಗೆ ಸುಂಟಿಕೊಪ್ಪದ ಖದೀಜಾ ಉಮ್ಮ ಮದರಸ, ರಾಮಮಂದಿರ ಹಾಗೂ ಚರ್ಚ್‍ನಲ್ಲಿ ಆಶ್ರಯವನ್ನು ನೀಡಿ ಸೌಹಾರ್ದತೆಯನ್ನು ಮೆರೆಯಲಾಗಿತ್ತು. ಆ ಮೂಲಕ ಇಡೀ ದೇಶಕ್ಕೆ ಸಾಮರಸ್ಯದ ಸಂದೇಶವನ್ನು ರವಾನಿಸಲಾಗಿತ್ತು. ಈ ಬಾರಿಯೂ ಒಗ್ಗಟ್ಟಿನಿಂದ ಕೈಜೋಡಿಸಿ ಮಾನವೀಯತೆಯನ್ನು ಮೆರೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸಿ.ಎಂ.ಹಮೀದ್ ಮೌಲವಿ ಹರ್ಷ ವ್ಯಕ್ತಪಡಿಸಿದರು.

ಮಠಾಧಿಪತಿ ಶ್ರೀಬೋಧ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಸಾಮರಸ್ಯದ ಸಮಾಜದಿಂದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಳೆಹಾನಿ ಸಂತ್ರಸ್ತರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದರು.

ಎಸ್‍ಕೆಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಆರಿಫ್ ಫೈಜಿ, ಸದಸ್ಯ ಇಕ್ಬಾಲ್ ಮೌಲವಿ, ಎಸ್‍ವೈಎಸ್ ಕಾರ್ಯದರ್ಶಿ ಉಮ್ಮರ್ ಫೈಜಿ, ಸದಸ್ಯರಾದ ಹಸನ್ ಕುನ್ನಿ ಹಾಜಿ, ಸುಂಟಿಕೊಪ್ಪದ ಎಸ್.ಎಂ.ಮೊಹಮ್ಮದ್, ಅಬೂಬಕ್ಕರ್, ರಫೀಕ್, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಗೋಪಾಲ ಜಿ.ಸ್ವಾಮಿ, ಪಂಚವರ್ಷ ಆನಂದ ಜಿ, ಸ್ವಯಂ ಸೇವಕ ಸುಭೋದ ರಾವ್ ಪವನ್ ಮತ್ತಿತರ ಪ್ರಮುಖರು ಹಾಜರಿದ್ದರು.

See also  ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಅನಿಲ್ ಪದಗ್ರಹಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು