News Kannada
Saturday, October 01 2022

ಕರ್ನಾಟಕ

ರಾಜ್ಯದಲ್ಲಿ ನೂತನ ವಸತಿ ನೀತಿ ಜಾರಿಗೊಳಿಸುವಂತೆ ಡಾ.ಎಚ್.ಸಿ.ಮಹದೇವಪ್ಪ ಸಲಹೆ - 1 min read

Photo Credit :

ರಾಜ್ಯದಲ್ಲಿ ನೂತನ ವಸತಿ ನೀತಿ ಜಾರಿಗೊಳಿಸುವಂತೆ ಡಾ.ಎಚ್.ಸಿ.ಮಹದೇವಪ್ಪ ಸಲಹೆ

ಮಡಿಕೇರಿ:ರಾಜ್ಯದಲ್ಲಿನ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸಕಾ9ರಗಳಲ್ಲಿನ ವಸತಿ ಯೋಜನೆಗಳನ್ನು ಒಗ್ಗೂಡಿಸಿ ಹೊಸ ವಸತಿ ನೀತಿ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದ್ದಾರೆ.

ಕೊಡಗು ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರ ತಂಡದ ನೇತ?ತ್ವ ವಹಿಸಿದ್ದ ಮಹದೇವಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಈ ಸಂದರ್ಭ ಮುಂದಿನ ದಿನಗಳಲ್ಲಿ ಮತ್ತೆ ಇಂಥ ಪ್ರಾಕೃತ್ತಿಕ ದುರಂತ ಮರುಕಳಿಸದಂತೆ ಹೊಸ ವಸತಿ ನೀತಿ ರೂಪಿಸುವ ಅನಿವಾರ್ಯತೆಯಿದೆ. ಕೇಂದ್ರ ಮತ್ತು ರಾಜ್ಯ ಸಕಾ9ರಗಳಲ್ಲಿ ಈಗಾಗಲೇ ಹಲವಾರು ವಸತಿ ಯೋಜನೆಗಳಿವೆ. ಈ ಯೋಜನೆಗಳನ್ನು ಒಗ್ಗೂಡಿಸಿ ವಸತಿ ನಿಮಾ9ಣ ಸಂಬಂಧ ನೀತಿ ಜಾರಿಗೊಳಿಸಬೇಕು. ನದಿ ತೀರದಲ್ಲಿ, ಭೂಕುಸಿತ ಪ್ರದೇಶಗಳಲ್ಲಿ, ಗಿರಿಶ್ರೇಣಿಗಳಲ್ಲಿ ಹೊಸದ್ದಾಗಿ ಕಟ್ಟಡ ನಿರ್ಮಾಣಕ್ಕೆ ಕೆಲವೊಂದು ಕಟ್ಟುನಿಟ್ಟಿನ ನಿಯಮ ಜಾರಿಯಾಗಲೇಬೇಕು. ಹೀಗಾದಾಗ ಮಾತ್ರ ಪ್ರಾಕೃತ್ತಿಕ ದುರಂತ ಸಂಭವಿಸಿದಾಗ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದೂ ಡಾ.ಮಹದೇವಪ್ಪ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ಪರಿಸರದ ಮಧ್ಯೆ ಸಮತೋಲನ ಅಗತ್ಯವಾಗಿದ್ದು ಪರಿಸರಕ್ಕೆ ಧಕ್ಕೆಯಾಗದಂತೆ ಈ ಜಿಲ್ಲೆಯಲ್ಲಿ ಅಭಿವೃದ್ದಿ ಯೋಜನೆ ಕೈಗೊಳ್ಳಬೇಕಾಗಿದೆ. ರಾಜ್ಯ ಸಕಾ9ರ ಕೂಡಲೇ ಕೊಡಗಿನಲ್ಲಿ ಪರಿಹಾರ ಕಾರ್ಯಗಳಿಗಾಗಿ 1 ಸಾವಿರ ಕೋಟಿ ರು. ಅನುದಾನ ನೀಡಬೇಕೆಂದೂ ಅವರು ಆಗ್ರಹಿಸಿದರು.

ರಾಜಕೀಯರಹಿತವಾಗಿ ಪ್ರಕೃತ್ತಿ ವಿಕೋಪ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಂತ್ರಸ್ಥರಿಗೆ ನೆರವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಮಹದೇವಪ್ಪ, ರಾಜ್ಯ ಸರ್ಕಾರದಲ್ಲಿ ಸಚಿವರು ಇದ್ದಿದ್ದರೆ ಮತ್ತಷ್ಟು ಶೀಘ್ರಗತಿಯಲ್ಲಿ ಸಚಿವರ ಮಾರ್ಗದರ್ಶನದೊಂದಿಗೆ ಪರಿಹಾರ ಕಾಯ9ಗಳ ಜಾರಿ ಸಾಧ್ಯವಾಗುತ್ತಿತ್ತು ಎಂದೂ ಹೇಳಿದರು.

ಕೇಂದ್ರದ ಇಬ್ಬರು ಪ್ರಮುಖ ಸಚಿವರು ಕನಾ9ಟಕಕ್ಕೆ ಭೇಟಿ ನೀಡಿ ಪ್ರವಾಹ ಸ್ಥಿತಿ ಅವಲೋಕಿಸಿದ್ದರೂ ಈವರೆಗೆ ರಾಜ್ಯಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಲಿಲ್ಲ. ಕೇಂದ್ರ ಸಕಾ9ರ ಕೂಡಲೇ ಕರ್ನಾಟಕದ ಪ್ರಾಕೃತ್ತಿಕ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ರಾಜ್ಯಕ್ಕೆ 10 ಸಾವಿರ ಕೋಟಿ ರು. ಪರಿಹಾರಧನ ಬಿಡುಗಡೆಗೊಳಿಸುವಂತೆಯೂ ಡಾ.ಮಹದೇವಪ್ಪ ಒತ್ತಾಯಿಸಿದರು.

ರಾಜ್ಯ ಸಕಾ9ರ ಈ ವಿಪತ್ತಿನ ದಿನಗಳಲ್ಲಿಯೂ ಕೇಂದ್ರ ಸಕಾ9ರದತ್ತ ಬೆಟ್ಟು ಮಾಡುವುದು ಸರಿಯಲ್ಲ ಎಂದು ಹೇಳಿದ ಡಾ.ಮಹದೇವಪ್ಪ, ರಾಜ್ಯದಲ್ಲಿ 60 ಸಾವಿರದಷ್ಟು ಮನೆಗಳು ಸಂಪೂಣ9 ನಾಶವಾಗಿದೆ. ಇವರಿಗೆ ಮನೆ ನಿಮಾ9ಣಕ್ಕೆ ಸರ್ಕಾರ ವಿಳಂಭರಹಿತವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದೂ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಕಾರ್ಯದರ್ಶಿ ಮಿಟ್ಟು ಚಂಗಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ.ಚಂದ್ರಕಲಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹಾಜರಿದ್ದರು.

See also  ಚುನಾವಣೆ ಗುಂಗಿನಿಂದ ಹೊರಬಂದ ರೈತರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು