News Kannada
Monday, September 26 2022

ಕರ್ನಾಟಕ

ಕದ್ರಾ ಜಲಾಶಯದ ನೀರು ಬಿಡುಗಡೆ ಕೋಟ್ಯಾಂತರ ರೂ. ನಷ್ಟ: ಆನಂದ ಅಸ್ನೋಟಿಕರ್ - 1 min read

Photo Credit :

ಕದ್ರಾ ಜಲಾಶಯದ ನೀರು ಬಿಡುಗಡೆ ಕೋಟ್ಯಾಂತರ ರೂ. ನಷ್ಟ: ಆನಂದ ಅಸ್ನೋಟಿಕರ್

ಕಾರವಾರ: ಮುಂಜಾಗೃತಾ ಕ್ರಮಕೈಗೊಳ್ಳದೆ ಕದ್ರಾ ಜಲಾಶಯದ ೧೦ ಗೇಟ್ ತೆರೆದು ನೀರು ಹೊರ ಬಿಟ್ಟಿದ್ದರಿಂದ ಕಾಳಿ ನದಿಗೆ ನೆರೆ ಬಂದು ಎಡ ಹಾಗೂ ಬಲ ದಂಡೆಯ ಗ್ರಾಮಗಳು ಮುಳಗಡೆಯಾಗಿ ಕೋಟ್ಯಾಂತರ ರೂ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ.

ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದ ಸುಪಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಜಲಾಶಯದಿಂದ ನೀರು ಹೊರಗಡೆ ಹರಿಸಲಾಗಿದೆ. ಇದರಿಂದ ಬೊಮ್ಮನಳ್ಳಿಯಂತೆ ಕದ್ರ ಜಲಾಶಯದಲ್ಲಿ ನೀರಿನ ಮಟ್ಟಹೆಚ್ಚಾಗಿದೆ.

ಈ ಕಾರಣದಿಂದ ಕದ್ರದಾ ೧೦ ಗೆಟ್ ಗಳನ್ನು ತೆರೆದು ಒಮ್ಮೆಲೆ ನೀರು ಬಿಟ್ಟಿದ್ದರಿಂದ ಕಾಳಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೆರೆ ಬಂದು ನದಿಯ ಎಡ, ಬಲ ದಂಡೆಯಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಅತಂತ್ರವಾಗಿದೆ. ಅಲ್ಲದೆ, ಅಲ್ಲಿ ವಾಸಿಸುತ್ತಿದ್ದ ಜನರ ಮನೆ ಪೂರ್ತಿಮುಳಗಡೆಯಾಗಿದೆ. ಇದರಿಂದ ಬಡ ರೈತರು ತಮ್ಮ ಹೊಲಗಳಲ್ಲಿ ಬೆಳೆಸಿದ ಪೂರ್ತಿ ಬೆಳೆಗಳು ಹಾಳಾಗಿದೆ.
ಜಾನುವಾರು ಸಹ ನೀರಿನಲ್ಲಿ ಹರಿದುಹೋಗಿ ನಾಪತ್ತೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸಿದ್ದಾರೆ. ಅದಕ್ಕೆಲ್ಲ ಕೆಪಿಸಿ ನಿಮದವರು ಮುಂಜಾಗೃತಾ ಕ್ರಮಕೈಗೊಳ್ಳದೆ ಇರುವುದು ಇದಕ್ಕೆ ಕಾರಣವಾಗಿದೆ. ಕೆಪಿಸಿ ಪ್ರತಿ ಸೆಕೆಂಡಿಗೆ ಅಂದಾಜು ೨.೫೦ ಲಕ್ಷ ಕ್ಯೂಸೆಕ್ ನೀರನ್ನು ಹರಿಸಿದ್ದರಿಂದ ಕಾಳಿ ನದಿ ಪಾತ್ರಗಳು ಸಂಪೂರ್ಣ ನಾಶಗೊಂಡಿದೆ. ಕದ್ರಾ ಜಲಾಶಯದಲ್ಲಿ ಒಟ್ಟೂ. ೩೪.೫ ಮೀಟರ್ ನೀರು ಶೇಖರಣೆಗೆ ಅವಕಾಶವಿದ್ದು ಮಳೆ ಪ್ರಾರಂಭದಲ್ಲಿಯೇ ಜಲಾಶಯದಲ್ಲಿ ೨೫.೦೦ ಮೀಟರ್ನಷ್ಟು ನೀರು ಶೇಖರಣೆ ಇದ್ದಾಗ ಜಲಾಶಯದ ೨ ಗೇಟ್ ತೆರೆದಿಟ್ಟುನೀರು ಬಿಡುತ್ತಾ ಹೋದಲ್ಲಿ ಇಂಥ ದೊಡ್ಡ ಪ್ರಮಾಣದಲ್ಲಿ ನೆರೆ ಬರುವ ಸಂಭವ ಕಡಿಮೆಯಾಗಿತ್ತು ಎಂದು ಆನಂದ ಅಸ್ನೋಟಿಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನದಲ್ಲಿ ಮಳೆಗಾಲದ ಅವಧಿಯಲ್ಲಿ ಜಲಾಶಯದ ಎರಡು ಗೇಟ್ ತೆರೆದು ನಿರಂತರವಾಗಿ ನೀರು ಹೊರ ಹರಿಸಲು ಕೆಪಿಸಿ ನಿಗಮದವರಿಗೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದ ಪಕ್ಷದಲ್ಲಿ ಈ ರೀತಿಯ ಬೇಜವಾಬ್ದಾರಿ ಪರಿರ್ತನೆ ಮಾಡಿದರೆ ಕಾಳಿ ನದಿಯ ಎಡಹಾಗೂ ಬಲ ದಂಡೆಯ ಮುಗ್ದ ಜನರಿಗೆ, ರೈತರಿಗೆ ನೆರೆಯಿಂದ ಇನ್ನಷ್ಟು ಹಾನಿ ತಪ್ಪಿದ್ದಲ್ಲ. ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಹಾಗೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಪಿಸಿ ನಿಗಮದ ಅಧಿಕಾರಿ ಹಾಗೂ ಎಂಜಿನಿಯರ್ ಮೇಲೆ ಸೂಕ್ತ ವಿಚಾರನೆ ನಡೆಸಿ ತಪ್ಪಿತಸ್ತರಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಒತ್ತಾಯಿಸಿದ್ದಾರೆ.

 

See also  ಆ.26ರಿಂದ ಕೊಡಗಿನಲ್ಲಿ ಶಟಲ್ ಬ್ಯಾಡ್ಮಿಂಟನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು