News Kannada
Saturday, October 01 2022

ಕರ್ನಾಟಕ

ಗುಡ್ಡ ಕುಸಿದ ತೋರ ಗ್ರಾಮಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ - 1 min read

Photo Credit :

ಗುಡ್ಡ ಕುಸಿದ ತೋರ ಗ್ರಾಮಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ

ಮಡಿಕೇರಿ: ಮಹಾಮಳೆಯ ಗುಡ್ಡ ಕುಸಿತದಿಂದ ಜೀವಹಾನಿಯಾದ ತೋರ ಗ್ರಾಮದ ಘಟನಾ ಸ್ಥಳಕ್ಕೆ ಸಂಸದ ಪ್ರತಾಪ ಸಿಂಹ ಅವರು ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಭೂ ಕುಸಿತದಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಪ್ರಭು ಕುಮಾರ್ ಭಟ್ ಮತ್ತು ಹರೀಶ್ ಅವರನ್ನು ಭೇಟಿಯಾಗಿ, ಸಾಂತ್ವನ ನುಡಿದ ಸಂಸದರು, ಇದೇ ಸಂದರ್ಭ ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ವೀಕ್ಷಿಸಿ, ತಂಡದ ಮುಖ್ಯಸ್ಥರೊಂದಿಗೆ ಕಾರ್ಯಾಚರಣೆಯ ಮಾಹಿತಿ ಪಡೆದರು.

ಸೂರು ಒದಗಿಸುವ ಭರವಸೆ- ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ ಸಂಸದರು, ರಾಜ್ಯ ಸರ್ಕಾರ ಸಂತ್ರಸ್ತರಿಗೆ ನೀಡಿದ ಪರಿಹಾರದೊಂದಿಗೆ ಕೇಂದ್ರ ಸರ್ಕಾgದಿಂದಲೂ ಪರಿಹಾರ ಧನವನ್ನು ನೀಡಲಾಗುತ್ತದೆಂದು ಸ್ಪಷ್ಟಪಡಿಸಿದರು.

ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರಿ ಜಮೀನು ಅಥವ ಖಾಸಗಿ ಜಮೀನನ್ನು ಸರ್ಕಾರದ ಮೂಲಕ ಖರೀದಿಸಿ ಸೂರು ಒದಗಿಸುವ ಭರವಸೆಯನ್ನು ನೀಡಿ, ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಫಸಲು ಹೊಂದಿದ ಭೂಮಿಯನ್ನು ಹಲವರು ಕಳೆದುಕೊಂಡಿದ್ದಾರೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ತಾಲ್ಲೂಕು ತಹಶೀಲ್ದಾರ್ ಪುರಂದರ ಅವರಿಂದ ಪರಿಹಾರ ಕಾರ್ಯಗಳ ಬಗ್ಗೆ ಸಂಸದರು ಮಾಹಿತಿ ಪಡೆದುಕೊಂಡರು.

ಸಂಸದರ ತೋರ ಭೇಟಿ ಸಂದರ್ಭ ಕಂದಾಯ ಅಧಿಕಾರಿ ಪಳಂಗಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಜಿಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಪಂ ಸದಸ್ಯರಾದ ಬಿ.ಎಂ. ಗಣೇಶ್, ಪಿಡಿಒ ಪ್ರಮೋದ್ ಕುಮಾರ್ ಮೊದಲಾದವರಿದ್ದರು.

See also  ಮಾದಾಪುರ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು