News Kannada
Saturday, December 03 2022

ಕರ್ನಾಟಕ

ಹುದಿಕೇರಿಗೆ ಸಿದ್ದರಾಮಯ್ಯ ಭೇಟಿ: ದಿ.ಎ.ಕೆ.ಸುಬ್ಬಯ್ಯಗೆ  ನಮನ  ಸಲ್ಲಿಸಿದ ಮಾಜಿ ಸಿಎಂ

Photo Credit :

ಹುದಿಕೇರಿಗೆ ಸಿದ್ದರಾಮಯ್ಯ ಭೇಟಿ: ದಿ.ಎ.ಕೆ.ಸುಬ್ಬಯ್ಯಗೆ  ನಮನ  ಸಲ್ಲಿಸಿದ ಮಾಜಿ ಸಿಎಂ

ಮಡಿಕೇರಿ: ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರ ಹೋರಾಟ ಒಂದು ಜಾತಿ ಅಥವಾ ಪಕ್ಷಕ್ಕೆ ಸೀಮಿತವಾಗಿರಲಿಲ್ಲ, ಬದಲಿಗೆ ಇಡೀ ಸಮಾಜಕ್ಕೆ ತಮ್ಮ ಹೋರಾಟದ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘಿಸಿದ್ದಾರೆ.

 ದಕ್ಷಿಣ ಕೊಡಗಿನ ಹುದಿಕೇರಿ ಸಮೀಪದ ಬೆಳ್ಳೂರಿನಲ್ಲಿರುವ ದಿ.ಸುಬ್ಬಯ್ಯ ಅವರ ನಿವಾಸದಲ್ಲಿ ಬುಧವಾರ ನಡೆದ ಪುಣ್ಯತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, ಸುಬ್ಬಯ್ಯ ಅವರ ಹೋರಾಟದ ದಿಕ್ಕುಗಳನ್ನು ಸ್ಮರಿಸಿಕೊಂಡರು. ತಮಗೂ ಸೇರಿದಂತೆ ರಾಜ್ಯದ ಅನೇಕ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದ ಸುಬ್ಬಯ್ಯ ಅವರ ಹೆಸರು ಹಚ್ಚಹಸಿರಾಗಿ ಉಳಿಯಲಿದೆ ತಿಳಿಸಿದರು.

 ಸುಬ್ಬಯ್ಯ ಅವರ ನಿಧನ ಸಂದರ್ಭ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದ ಕಾರಣ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಪುಣ್ಯತಿಥಿ ಕಾರ್ಯದಲ್ಲಿ ಪಾಲ್ಗೊಂಡು ಗೌರವ ಸೂಚಿಸಿರುವುದಾಗಿ  ಸಿದ್ದರಾಮಯ್ಯ ಹೇಳಿದರು.

ಸುಬ್ಬಯ್ಯ ಅವರು ವಿರೋಧ ಪಕ್ಷಕ್ಕೆ ಹೇಳಿ ಮಾಡಿಸಿದಂತಹ ನಾಯಕರಾಗಿದ್ದರು. ಬಿಜೆಪಿ ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಸುಬ್ಬಯ್ಯ ಅವರ ಕೊಡುಗೆಯೂ ಅಪಾರವಾಗಿದೆ. ಆದರೆ ಅಲ್ಲಿನ ಕೆಲವು ಸಿದ್ಧಾಂತಗಳನ್ನು ವಿರೋಧಿಸಿ ಹೊರಬಂದು ಸಂಪೂರ್ಣವಾಗಿ ಜಾತ್ಯಾತೀತೆಯ ನಿಷ್ಠೆಗೆ ಹೊಂದಿಕೊಂಡು ಕೊನೆಯವರೆಗೂ ತಮ್ಮ ಬದ್ಧತೆಯನ್ನು ಮೆರೆದರು ಮೆಚ್ಚುಗೆ ವ್ಯಕ್ತಪಡಿಸಿದರು.

 ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಕೊಡಗಿನ ದಿಡ್ಡಳ್ಳಿ ಹೊರಾಟದಲ್ಲಿ ಸುಬ್ಬಯ್ಯ ಅವರ ಪಾತ್ರ ಪ್ರಧಾನವಾಗಿತ್ತು. ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನ ಕಲ್ಪಿಸುವಲ್ಲಿ ಸುಬ್ಬಯ್ಯ ಅವರ ನೇತೃತ್ವದ ಹೋರಾಟ ಹೆಚ್ಚು ಫಲ ನೀಡಿದ್ದನ್ನು ತಾನು ಮರೆಯಲಾರೆ. ಯಾವುದೇ ಜಾತಿ ಮತ್ತು ಪಕ್ಷದ ಬೆಂಬಲವಿಲ್ಲದೆ ಸುಬ್ಬಯ್ಯ ಅವರು ರಾಜ್ಯದಲ್ಲಿ ಮೂಡಿಸಿದ ಛಾಪು ನಿರೀಕ್ಷೆಗೂ ಮೀರಿದೆ. ಸಮಾಜಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸುಬ್ಬಯ್ಯ ಅವರ ಬದುಕು ಎಲ್ಲರಿಗೂ ಮಾದರಿ ಎಂದರು.

ಈ ಸಂದರ್ಭ ಸಿದ್ದರಾಮಯ್ಯ ಅವರೊಂದಿಗಿದ್ದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಮಾತನಾಡಿ ಕರ್ನಾಟಕದ ರಾಜಕಾರಣದಲ್ಲಿ ವಿಶೇಷ ಹೆಜ್ಜೆ ಗುರುತು ಮೂಡಿಸಿದ ಸುಬ್ಬಯ್ಯ ಅವರ ವಿಚಾರಧಾರೆಗೆ ಎಂದಿಗೂ ಸಾವಿಲ್ಲ ಎಂದರು. ಇಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ ಎಂದರೆ ಅದರ ಹಿಂದಿನ ಎಲ್ಲಾ ಯಶಸ್ಸು ಬಿಜೆಪಿಯನ್ನು ತಳಮಟ್ಟದಿಂದಲೇ ಸಂಘಟಿಸಿದ ಸುಬ್ಬಯ್ಯ ಅವರಿಗೆ ಸಲ್ಲಬೇಕು ಎಂದರು.

 ಸುಬ್ಬಯ್ಯ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಿದ್ದರಾಮಯ್ಯ ಅವರು ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

 ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಮುಖಂಡರುಗಳಾದ ವಿನೋದ್ ಶಿವಪ್ಪ, ಪಿ.ಸಿ.ಹಸೈನಾರ್ ಹಾಜಿ, ವಿ.ಪಿ.ಶಶಿಧರ್, ಮುಕ್ಕಾಟಿರ ಶಿವುಮಾದಪ್ಪ, ಪಲ್ವಿನ್ ಪೂಣಚ್ಚ, ಜಿಲ್ಲಾ ಕಾಂಗ್ರೆಸ್ ವಕ್ತಾರ ಅಪಟ್ಟಿರ ಟಾಟು ಮೊಣ್ಣಪ್ಪ, ಅಬ್ದುಲ್ ರಹ್ಮಾನ್ ಬಾಪು, ಮಹಿಳಾ ಕಾಂಗ್ರೆಸ್ ಪ್ರಮುಖರಾದ ಕುಸುಮ ಜೋಯಪ್ಪ, ಕೊಡಗು ಜಿಲ್ಲಾ ಸಣ್ಣ ಕಾಫಿ ಬೆಳೆಗಾರರ ಸಂಘದ ಪ್ರಮುಖರಾದ ನಂದಾ ಸುಬ್ಬಯ್ಯ, ಸುಂಟಿಕೊಪ್ಪದ ಉಸ್ಮಾನ್, ಪ್ರಮುಖರಾದ ಆಲಿರ ರಶೀದ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

See also  ಇ-ಫಾರ್ಮಸಿ ವಿರೋಧಿಸಿ ಕೊಡಗಿನಲ್ಲೂ ಔಷಧಿ ಅಂಗಡಿಗಳು ಬಂದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು