News Kannada
Friday, December 02 2022

ಕರ್ನಾಟಕ

ಗಣಪತಿ ವಿಸರ್ಜನೆ ವೇಳೆ ಜನರೇಟರ್ ಫ್ಯಾನ್‍ಗೆ ಸಿಲುಕಿ ಕೈಕಟ್  

Photo Credit :

ಗಣಪತಿ ವಿಸರ್ಜನೆ ವೇಳೆ ಜನರೇಟರ್ ಫ್ಯಾನ್‍ಗೆ ಸಿಲುಕಿ ಕೈಕಟ್   

ರಾಮನಗರ: ಗಣಪತಿ ವಿಸರ್ಜನೆ ವೇಳೆ ವಿದ್ಯುತ್ ಜನರೇಟರ್ ಫ್ಯಾನ್‍ಗೆ ಸಿಲುಕಿ ಯುವಕನೊಬ್ಬನ ಕೈ ತುಂಡಾಗಿರುವ ಘಟನೆ ನಗರದಲ್ಲಿ ನಡೆದಿದೆ. 

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ವಿಸರ್ಜನೆಗೆಂದು ನಗರದ ರಂಗರಾಯರದೊಡ್ಡಿ ಕೆರೆಯ ಬಳಿ ಇರುವ ಸಿರಿ-ಗೌರಿ ಕಲ್ಯಾಣಿಯ ಬಳಿ ಮೆರವಣಿಗೆ ಮೂಲಕ ತರಲಾಗಿತ್ತು. ಕತ್ತಲಾದ್ದರಿಂದ ಗಣಪತಿ ಮೂರ್ತಿಯ ಜೊತೆಗೆ ವಿದ್ಯುತ್ ಜನರೇಟರ್ ಕೂಡ ಟ್ಯಾಕ್ಟರ್‍ನಲ್ಲಿ ಇರಿಸಲಾಗಿತ್ತು. ಯುವಕರೊಂದಿಗೆ ಮೆರವಣಿಗೆಯಲ್ಲಿ ಇದೇ ಬಡಾವಣೆಯ ಯುವಕ ನರೇಂದ್ರ (24) ಕೂಡ ಭಾಗವಹಿಸಿದ್ದರು.

 ಟ್ರಾಕ್ಟರ್‍ನಲ್ಲಿ ಸಾಗುತ್ತಿದ್ದಾಗ ತನ್ನ ಕೈಗೆ ಸುತ್ತಿಕೊಂಡಿದ್ದ ಟವಲ್ ದುರಾದೃಷ್ಟವಶಾತ್ ಜನರೇಟರ್ ನ ಫ್ಯಾನ್ ಗೆ  ಸಿಕ್ಕಿಕೊಂಡಿದ್ದು, ರಭಸದಲ್ಲಿ ತಿರುಗುತ್ತಿದ್ದ ಫ್ಯಾನ್ ಟವಲ್ ಸಹಿತ ಯುವಕನ ಕೈಯನ್ನು ಸೆಳೆದುಕೊಂಡಿದೆ. ಇದರ ಪರಿಣಾಮವಾಗಿ ಬಲಗೈ ತುಂಡಾಗಿದೆ ಎಂದು ಹೇಳಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿದ್ದ ನರೇಂದ್ರ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ

See also  ಕೇಂದ್ರದ ಬಹುಪಾಲು ಪರಿಹಾರ ಕೊಡಗಿಗೆ ನೀಡಿ: ಹೋರಾಟ ಸಮಿತಿ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು