News Kannada
Thursday, December 01 2022

ಕರ್ನಾಟಕ

ಕಣಿವೆ ತೂಗು ಸೇತುವೆ ದುರಸ್ತಿ ಶೀಘ್ರ ಆರಂಭ : ಶಾಸಕ ಅಪ್ಪಚ್ಚು ರಂಜನ್ ಭರವಸೆ

Photo Credit :

ಕಣಿವೆ ತೂಗು ಸೇತುವೆ ದುರಸ್ತಿ ಶೀಘ್ರ ಆರಂಭ : ಶಾಸಕ ಅಪ್ಪಚ್ಚು ರಂಜನ್ ಭರವಸೆ

ಮಡಿಕೇರಿ: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಈ ಬಾರಿ   ಕಾವೇರಿ ನದಿಯ ಪ್ರವಾಹದಿಂದಾಗಿ ಕೊಚ್ಚಿಹೋಗಿದ್ದು, ಇದನ್ನು ಆದಷ್ಟು ಶೀಘ್ರ ಸರಿಪಡಿಸಲಾಗುವುದು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭರವಸೆ ನೀಡಿದರು.

ಕುಶಾಲನಗರ- ಕೂಡಿಗೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶಾಸಕರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ,    ಈಗಾಗಲೇ  ಈ ತೂಗು ಸೇತುವೆಯ  ದುರಸ್ತಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗಕ್ಕೆ  ಸೂಚನೆ ನೀಡಲಾಗಿದೆ.  ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಮತ್ತೆ  ಕಾವೇರಿ ನದಿಯ  ನೀರಿನ ಮಟ್ಟ ಹೆಚ್ಚಾಗಿದೆ. ಈ ಸೇತುವೆ ಕೊಡಗು ಹಾಗೂ ಪಿರಿಯಾಪಟ್ಟಣ ತಾಲೂಕಿನ ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ  ಅತಿ ಪ್ರಮುಖ ಸಂರ್ಪಕ  ಸೇತುವೆ ಯಾಗಿದ್ದು ಮುಂದಿನ 10 ದಿನಗಳ ಒಳಗೆ ಸರಿಪಡಿಸಲಾಗುವುದು ಎಂದು ನುಡಿದರು.

ನೂರಾರು ಕಾರ್ಮಿಕರು,  ಶಾಲಾ ಕಾಲೇಜು ವಿಧ್ಯಾರ್ಥಿಗಳು ಈ  ಸೇತುವೆಯನ್ನು  ಅವಲಂಬಿಸಿದ್ದು, ಅವರಿಗೆ ತೊಂದರೆಯಾಗದ ರೀತಿಯಲ್ಲಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭ ತಾಲೂಕು ಪಂಚಾಯತ್  ಉಪಾಧ್ಯಕ್ಷ ಅಭಿಮನ್ಯು ಕುಮಾರ್  ಜಿಲ್ಲಾ ಪಂಚಾಯತ್  ಸದಸ್ಯೆ  ಕೆ.ಅರ್.ಮಂಜುಳಾ,  ತಾಲೂಕು ಪಂಚಾಯತ್ ಸದಸ್ಯ ಗಣೇಶ್,ಇಂಜಿನಿಯರ್ ವೀರೇಂದ್ರ ಕುಮಾರ್, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

See also  ನಾಲ್ವರು ಪುರುಷರಿಂದ ವಂಚನೆ: ಮಾನಸಿಕ ಅಸ್ವಸ್ಥೆಯಿಂದ ಅರೆಬೆತ್ತಲೆ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು