News Kannada
Friday, December 09 2022

ಕರ್ನಾಟಕ

ಯಳಂದೂರಲ್ಲಿ ಬೀದಿ ನಾಟಕದೊಂದಿಗೆ ಸ್ವಚ್ಛತಾ ಅರಿವು

Photo Credit :

ಯಳಂದೂರಲ್ಲಿ ಬೀದಿ ನಾಟಕದೊಂದಿಗೆ ಸ್ವಚ್ಛತಾ ಅರಿವು

ಯಳಂದೂರು: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆಯಡಿ ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ನಗರ ಸಭೆಗಳ ಮೂಲಕ ಹಸಿಕಸ-ಒಣಕಸ ವಿಂಗಡಣೆ ಶೌಚಾಲಯ ನಿರ್ಮಾಣ ಅವುಗಳ ಸದ್ಭಳಕೆ ನೀರಿನ ಮಿತಬಳಕೆ ಸೇರಿದಂತೆ ಸ್ವಚ್ಛತೆಯ ಬಗ್ಗೆ ಬೀದಿ ನಾಟಕಗಳ ಮೂಲಕ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಈಗಾಗಲೇ ಹಲವು ನಗರಸಭೆ, ಪಟ್ಟಣಸಭೆ ವ್ಯಾಪ್ತಿಯಲ್ಲಿ ಹಸಿಕಸ-ಒಣಕಸದ ಅರಿವು ಮೂಡಿಸುವ ಕಾರ್ಯವಾಗುತ್ತಿದ್ದು ಅದರಂತೆ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿಯೂ  ಕಳೆದ ಒಂದು ವಾರದಿಂದ ಪ್ರತಿ ವಾರ್ಡ್‍ವಾರು ರಂಗದೇಗುಲ ಕಲಾ ತಂಡದೊಡನೆ ತೆರಳಿ ಸ್ವಚ್ಛತೆಯ ಬಗ್ಗೆ ಘೊಷಣೆಗಳನ್ನು ಕೂಗುವುದರ ಜೊತೆಗೆ ಬೀದಿ ನಾಟಕಗಳನ್ನು ಮಾಡಿ ಅವರಿಗೆ ಬಹಳ ಪರಿಣಾಮಕಾರಿಯಾಗಿ ಮನಮುಟ್ಟುವಂತೆ ಬಿಂಬಿಸುತ್ತಿದೆ. ಜೊತೆಗೆ ಹಸಿಕಸ-ಒಣಕಸವನ್ನು ವಿಂಗಡಿಸಿ, ಪಟ್ಟಣ ಪಂಚಾಯ್ತಿಗೆ ನೀಡುತ್ತೇವೆ. ಬಯಲ ಶೌಚಾಲಯವನ್ನು ತ್ಯಜಸಿ, ಶೌಚಾಲಯವನ್ನು ಕಡ್ಡಾಯವಾಗಿ ಬಳಸುತ್ತೇವೆ. ಜೊತೆಗೆ ನೀರನ್ನು ಮಿತವಾಗಿ ಬಳಸುತ್ತೇವೆ ಎಂಬ ಪ್ರತಿಜ್ಞಾ ವಿಧಿ ಭೋದಿಸಿ, ಪ್ರಮಾಣ ಮಾಡಿಸಲಾಗುತ್ತಿದೆ. ಹೀಗೆ ಮಾಡುತ್ತಿರುವುದು ಸಾರ್ವಜನಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. 

ಈ ಕುರಿತಂತೆ ಮಾತನಾಡಿರುವ ಯಳಂದೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗರತ್ನ ಯಳಂದೂರು ಪಟ್ಟಣ ಪಂಚಾಯ್ತಿಯು ಆರೋಗ್ಯ ಇಲಾಖೆಯ ಜೊತೆಗೂಡಿ, ಪ್ರತಿನಿತ್ಯ ಪ್ರತಿವಾರ್ಡ್ ವಾರು ತೆರಳಿ ಹಸಿಕಸ-ಒಣಕಸ ವಿಂಗಡಣೆ, ಶೌಚಾಲಯ ಸದ್ಭಳಕೆ ಹಾಗೂ ಮಿತನೀರಿನ ಬಳಕೆಯ ಬಗ್ಗೆ ಜನರಿಗೆ ಮನಮುಟ್ಟುವ ರೀತಿಯಲ್ಲಿ ಬೀದಿ ನಾಟಕಗಳ ಮೂಲಕ ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣದ ಸಾರ್ವಜನಿಕರು ಪಟ್ಟಣ ಪಂಚಾಯ್ತಿಯ ಜೊತೆ ಕೈಜೋಡಿಸಿ, ಮಾದರಿ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. 

ಆರೋಗ್ಯಾಧಿಕಾರಿ ಮಹೇಶ್‍ಕುಮಾರ್ ಮಾತನಾಡಿ ಬೀದಿ ನಾಟಕವು ಬಹಳ ಪರಿಣಾಮಕಾರಿಯಾದ ಮಾಧ್ಯಮವಾದ್ದರಿಂದ ಜನರಿಗೆ ಶೌಚಾಲಯ, ನೀರಿನ ಮಿತಬಳಕೆ, ಹಸಿಕಸ ಒಣಕಸ ವಿಂಗಡಣೆ, ಸ್ವಚ್ಚತೆ ಸೇರಿದಂತೆ ಪ್ರಮುಖ ನಾಲ್ಕು ವಿಷಯಗಳ ಬಗ್ಗೆ ಸರ್ಕಾರದ ಆದೇಶದಂತೆ ಅರಿವು ಮೂಡಿಸುತ್ತಿದ್ದೇವೆ ಅಲ್ಲದೆ ನೀತಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ದಂಡ ವಿಧಿಸುವುದರ ಜೊತೆಗೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

See also  ಮೂಡಿಗೆರೆಗೆ ಖಾಯಂ, ದಕ್ಷ, ಪ್ರಾಮಾಣಿಕ ತಹಸಿಲ್ದಾರನ್ನು ನೇಮಿಸಲು ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು