News Kannada
Tuesday, December 06 2022

ಕರ್ನಾಟಕ

ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಯ ಆರೋಗ್ಯದಲ್ಲಿ ಚೇತರಿಕೆ

Photo Credit :

ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಯ ಆರೋಗ್ಯದಲ್ಲಿ ಚೇತರಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಅನಾರೋಗ್ಯ ಪೀಡಿತರಾಗಿ, ಚಿಕಿತ್ಸೆ ಪಡೆಯುತ್ತಿದ್ದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆ ಪೂರ್ವದಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಸುಕ್ರಜ್ಜಿ ಅವರಿಗೆ ಚಾದರ್, ಕಂಬಳಿ ಹಾಗೂ ಕೆಲವು ಅಗತ್ಯ ಸಾಮಗ್ರಿಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯ ಅಜಯ ಸಾವುಕಾರ್, ಜಿಲ್ಲಾ ಕಾರ್ಯದರ್ಶಿ ಜಗದೀಶ ಬಿರ್ಕೋಡಿಕರ್, ರೆಡ್‌ಕ್ರಾಸ್ ಯುಥ್ ವಿಭಾಗದ ಜಿಲ್ಲಾಧ್ಯಕ್ಷ ಸಚಿನ್ ನಾಯ್ಕ, ಶಾನಭಾಗ ಹಾಗೂ ಇನ್ನಿತರರು ಇದ್ದರು.

ಅಂಕೋಲಾದ ಬಡಗೇರಿಯಲ್ಲಿ ಇರುವ ಅವರ ಮನೆಯಲ್ಲಿ ಮಾಧನ ನಾಯಕ, ಅಜಯ ಸಾವುಕಾರ್, ಸಚಿನ್ ನಾಯ್ಕ ವಾಹನದಲ್ಲಿ ತೆರಳಿ ಸುಕ್ರಜ್ಜಿಗೆ ಮನೆಗೆ ತಲುಪಿಸಿದ್ದಾರೆ. ಡಾ. ಅಮಿತ್ ಕಾಮತ್, ಶಿವಾನಂದ ಕುಡತರಕರ್ ಆರೋಗ್ಯ ಚೇತರಿಕೆಯಾಗಿದೆ ಎಂದು ತಿಳಿಸಿದ್ದು ಪ್ರತಿ ತಿಂಗಳು ಆರೋಗ್ಯ ತಪಾಸಣೆಗೆ ಬರುವಂತೆ ತಿಳಿಸಿದ್ದಾರೆ. ಜನಶಕ್ತಿ ವೇದಿಕೆಯ ಮಾಧವ ನಾಯಕ ಅವರು ಸ್ವತಃ ಅವರ ವಾಹನದಲ್ಲಿ ಅಂಕೋಲಾದ ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

See also  ಬಸ್ ಅಪಘಾತ: ಚಾಲಕ ಸಾವು, 23ಕ್ಕೂ ಅಧಿಕ ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು