News Kannada
Thursday, December 01 2022

ಕರ್ನಾಟಕ

ಅಪ್ರಾಪ್ತ ಹೆಣ್ಣುಮಕ್ಕಳ ವಿವಾಹ ಕಾಸರಗೋಡಿನಲ್ಲಿ ಜೀವಂತ: ಡಾ.ಶಾಹಿದಾ ಕಮಾಲ್

Photo Credit :

ಅಪ್ರಾಪ್ತ ಹೆಣ್ಣುಮಕ್ಕಳ ವಿವಾಹ ಕಾಸರಗೋಡಿನಲ್ಲಿ ಜೀವಂತ: ಡಾ.ಶಾಹಿದಾ ಕಮಾಲ್

ಕಾಸರಗೋಡು: ಅಪ್ರಾಪ್ತ ಹೆಣ್ಮಕ್ಕಳ ವಿವಾಹ ಈಗಲೂ ಕಾಸರಗೋಡು ಜಿಲ್ಲೆಯಲ್ಲಿ ಜೀವಂತವಾಗಿದೆ. ಇದು ಸಾಮಾಜಿಕ, ಶೈಕ್ಷಣಿಕ ವಲಯಕ್ಕೆ ಅಪಾಯಕಾರಿ ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಡಾ.ಶಾಹಿದಾ ಕಮಾಲ್ ಅಭಿಪ್ರಾಯಪಟ್ಟರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಯೋಗದ ಅದಾಲತ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಹೆಣ್ಣುಮಕ್ಕಳು ಬೆಳೆಯುತ್ತಿರುವಂತೆಯೇ ಅವರು ಹೆತ್ತವರಿಗೆ ಭಾರವಾಗುತ್ತಾರೆ ಎಂಬ ಭ್ರಮೆ ಇದಕ್ಕೆ ಪ್ರಧಾನ ಕಾರಣ. ಕಾಸರಗೋಡು ಜಿಲ್ಲೆಯಲ್ಲಿ ಕೆಲವು ಹೆತ್ತವರಲ್ಲಿ ಇಂದಿಗೂ ಈ ಮನೋಧರ್ಮ ಮನೆಮಾಡಿದೆ. ಇದರಿಂದ
ಹೆಣ್ಣುಮಕ್ಕಳು ಶಿಕ್ಷಣ ಸಹಿತ ಪ್ರಮುಖ ವಾಹಿನಿಯ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸುವ ಬಗ್ಗೆ ಆಯೋಗ ವ್ಯಾಪಕ ಯತ್ನ ನಡೆಸಿಕೊಂಡು ಬರುತ್ತಿದೆ. ಇದರ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಪಂಚಾಯತ್ ಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಮಗಳು ನಡೆದುಬರುತ್ತಿವೆ ಎಂದು ಅವರು ಹೇಳಿದರು.

ಈ ಬಾರಿಯ ಮಹಿಳಾ ಆಯೋಗ ರಚನೆಗೊಂಡ ನಂತರ ಈ ಸಂಬಂಧ ಹೆತ್ತವರಲ್ಲಿ ಜಾಗೃತಿ ಮೂಡಿಸಿ ಹೆಣ್ಣುಮಕ್ಕಳನ್ನು ಇಂಥಾ ಪಿಡುಗಿನಿಂದ ಬಿಡುಗಡೆಗೊಳಿಸಿ, ಶಿಕ್ಷಣ ವಲಯದತ್ತ ಮರಳುವಂತೆ ಮಾಡಲು ಸಾಧ್ಯವಾಗಿದೆ ಎಂದವರು ಹೇಳಿದರು.

ಇದೇ ವೇಳೆ ವಿವಾಹವಾಗಿ ಮಗುವೂ ಜನಿಸಿದ ನಂತರ ಪತಿ ನಾಪತ್ತೆಯಾಗುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಕ್ರಮ ಬಿಗಿಗೊಳಿಸುವುದಾಗಿ ಎಂದು ಅವರು ಹೇಳಿದರು. ಆಯೋಗದ ಅದಾಲತ್ ನ ನಂತರವೂ ಈ ಸಂಬಂಧ ಕ್ರಮಗಳನ್ನು ಮುಂದುವರಿಸುವಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾಡಳಿತೆ ನೀಡುತ್ತಿರುವ ಬೆಂಬಲ ಶ್ಲಾಘನೀಯ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಸಿ.ಎಂ.ರಾಧಾ, ಎ.ಪಿ.ಉಷಾ, ಬೀನಾ ಕೆ.ಜಿ. ಮೊದಲಾದವರು ಉಪಸ್ಥಿತರಿದ್ದರು.

See also  ಲಂಡನ್ ನಲ್ಲಿ ಭಾರತೀಯನ ಇರಿದು ಕೊಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು