News Kannada
Friday, December 02 2022

ಕರ್ನಾಟಕ

ಸಮರ್ಥ, ಸ್ವಾಭಿಮಾನದ ಅಖಂಡ ಭಾರತ ರಚನೆಯಾಗಿದೆ :ಕೋಟ ಶ್ರೀನಿವಾಸ ಪೂಜಾರಿ

Photo Credit :

ಸಮರ್ಥ, ಸ್ವಾಭಿಮಾನದ ಅಖಂಡ ಭಾರತ ರಚನೆಯಾಗಿದೆ :ಕೋಟ ಶ್ರೀನಿವಾಸ ಪೂಜಾರಿ

ಕಾರವಾರ: ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಯಲ್ಲೇ ಸಮರ್ಥ, ಸ್ವಾಭಿಮಾನದ ಭಾರತ ರಚನೆ ಮಾಡಿದ್ದಾರೆ ಎಂದು ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಗರ ದರ್ಶನ ಸಭಾಭವನದಲ್ಲಿ ನಡೆದ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದೇ ದೇಶ ಒಂದೆ ಸಂವಿಧಾನ ಎಂಬುದು ಪ್ರಧಾನಿ ನರೇಂದ್ರ ಮೋದಿ ಆಡಳಿತದ ದೊಡ್ಡ ಕೊಡುಗೆಯಾಗಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಯನ್ನು ಬಿಜೆಪಿ ಈಡೇರಿಸಿದೆ ಎಂದರು. ಕಾಶ್ಮಿರದಲ್ಲಿನ ಅನಾಹುತ, ದೌರ್ಜನ್ಯ, ಸೈನ್ಯದ ಮೇಲೆ ನಡೆದ ದಬ್ಬಾಳಿಕೆ ನಿಲ್ಲಿಸಿದ ಹೆಮ್ಮೆ ನಮಗಿದೆ. ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದ ಉಗ್ರಗಾಮಿಗಳ ಹೆಡೆಮುರಿ ಕಟ್ಟಲಾಗಿದೆ. ಬಿಜೆಪಿಗೆ ನೀಡಿದ ಮತ ಸಮರ್ಥ ಭಾರತಕ್ಕೆ ದಕ್ಕಿದೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾದ ಎರಡನೇ ಅವಧಿಯ ಅಧಿಕಾರಕ್ಕೆ ಬಂದ ತಕ್ಷಣ ೭೨ ವರ್ಷದ ಬಳಿಕ ಒಂದೇ ದೇಶ ಒಂದೇ ಸಂವಿಧಾನ ಜಾರಿಗೆ ತಂದು , ಕಾಶ್ಮೀರಕ್ಕೆ ನೀಡಿದ್ದ ೩೭೦ ವಿಧಿ ರದ್ದು ಪಡಿಸಿ ಮುಖ್ಯವಾದ ನಿರ್ಣಯವನ್ನು ಕೈಗೊಂಡಿದ್ದು ಇಂದು ಸಾಮಾನ್ಯ ಕಾರ್ಯಕರ್ತನಿಗೂ ರೋಮಾಂಚನ ಮಾಡಿದೆ. ಉಗ್ರರು ಕಾಶ್ಮಿರದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದ ದೃಶ್ಯವನ್ನು ಕಂಡು ನಾವೆಲ್ಲ ಸಂಕಟ ಪಡುತ್ತಿದ್ದೇವು. ಆದರೆ ಇಂದು ಆ ಸ್ಥಿತಿ ಇಲ್ಲ. ನಮ್ಮ ಜೀನವ ಇಂದು ಸಾರ್ಥಕವಾಗಿದೆ ಎಂದರು.

ಜಿಲ್ಲೆಯ ಸ್ಥಳೀಯ ಮೀನುಗಾರರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಕರೆತರುವ ಜವಾಬ್ದಾರಿ ತನ್ನದು. ರಾಜ್ಯದ ೧೫ ಜನ ಅಧಿಕಾರಿ ಗುಜರಾತ್, ಕೇರಳ ಇನ್ನಿತರ ರಾಜ್ಯಕ್ಕೆ ಪ್ರವಾಸಕ್ಕೆ ಕಳುಹಿಸಿ ಅಧ್ಯಯನ ಮಾಡಿ ಶೀಘ್ರವೇ ವರದಿ ತರಿಸಿಕೊಳ್ಳಲಾಗುವುದು. ಅಲ್ಲಿನ ಯಶಸ್ವಿ ಯೋಜನೆಗಳನ್ನು ಇಲ್ಲಿ ಜಾರಿ ಮಾಡಲಾಗುತ್ತದೆ. ಇದಲ್ಲದೇ ನಾಡದೋಣಿ ಸೀಮೆಎಣ್ಣೆ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ಬಂದರು ಇಲಾಖೆಗೆ ಸಂಬಂಧಿಸಿದಂತೆ ಇಲಾಖೆ ಪಾರದರ್ಶಕವಾಗಿರಬೇಕು. ಮೀನುಗಾರರಿಗೆ ತೊಂದರೆ ಆದರೆ ಯಾವ ಅಧಿಕಾರಿಗಳನ್ನು ಕ್ಷಮಿಸುವುದಿಲ್ಲ ಎಂದರು.

ಬಂದರು ಅಭಿವೃದ್ಧಿ ಸಾಧಕ-ಬಾಧಕ ಚರ್ಚೆ ನಡೆಸಿ ಮೀನುಗಾರರಿಗೆ ಅನುಕೂಲಕರ ನಿಲುವು ತೆಗೆದುಕೊಳ್ಳಲಾಗುವುದು. ಅದರಂತೆ ಜಿಲ್ಲೆಯ ಸಣ್ಣ ಪುಟ್ಟ ದೇವಸ್ಥಾನ ಅಭಿವೃದ್ಧಿಗೆ, ಬಡವರಿಗೆ ಸಾಮೂಹಿಕ ವಿವಾಹ ಕಾರ್ಯ ನಡೆಸುವ ವಿಚಾರವನ್ನು ಮುಂದಿಟ್ಟು, ಅಭಿವೃದ್ಧಿಗಾಗಿ ಅನುದಾನ ನೀಡಲಾಗುವುದು. ನೆರೆಯಿಂದ ತೊಂದರೆ ಆದವರಿಗೆ ಆತಂಕ ಬೇಡ. ಸರ್ಕಾರ ತಮ್ಮೊಂದಿಗೆ ಇದೆ ಎಂದು ಧೈರ್ಯ ತುಂಬಿದರು.

ತಿಂಗಳ ಕೊನೆಯೊಳಗೆ ಜಿಲ್ಲೆಗೆ ಮತ್ತೇ ಬಂದು ಸ್ಥಳೀಯ ಮೀನುಗಾರರ, ಬಂದರು ಇಲಾಖೆ ಸೇರಿದಂತೆ ಇತರ ಇಲಾಖೆಯ ಸ್ಥಿತಿಗತಿಗಳನ್ನು ಅರಿತು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಮುಖಂಡ ಮಾ. ನಾಗರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಪ್ರಮುಖರಾದ ಈಶ್ವರ ನಾಯ್ಕ, ಎನ್. ಎಸ್. ಹೆಗಡೆ, ವೆಂಕಟೇಶ ನಾಯ್ಕ, ಮನೋಜ ಭಟ್ಟ ಇದ್ದರು.

See also  ಬಿಜೆಪಿ ದೇಶವನ್ನು ಒಡೆಯಲು ಯತ್ನಿಸುತ್ತಿದೆ: ಜಿ.ಪರಮೇಶ್ವರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು