News Kannada
Sunday, November 27 2022

ಕರ್ನಾಟಕ

ಮಂಜೇಶ್ವರ ವಿಧಾನಸಭೆಗೆ ಅ.21ರಂದು ಉಪಚುನಾವಣೆ - 1 min read

Photo Credit :

ಮಂಜೇಶ್ವರ ವಿಧಾನಸಭೆಗೆ ಅ.21ರಂದು ಉಪಚುನಾವಣೆ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಕ್ಟೊಬರ್ 21ರಂದು ನಡೆಯಲಿದೆ. ಅ. 24ರಂದು ಮತ ಎಣಿಕೆ ನಡೆಯಲಿದೆ. ಶಾಸಕರಾಗಿದ್ದ ಮುಸ್ಲಿಂ ಲೀಗ್ ನ ಪಿ . ಬಿ ಅಬ್ದುಲ್ ರಜಾಕ್ ಅವರ ನಿಧನದಿಂದ ಕ್ಷೇತ್ರ ತೆರವಾಗಿತ್ತು.

ಅ. 23ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಸೆ. 30 ಕೊನೆ ದಿನವಾಗಿದೆ. ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದೆ. ಅ. ಒಂದರಂದು ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆಯಲು ಅ. 3 ಕೊನೆ ದಿನವಾಗಿದೆ.

ಮಂಜೇಶ್ವರ ಶಾಸಕರಾಗಿದ್ದ ಮುಸ್ಲಿಂ ಲೀಗ್ ನ ಪಿ. ಬಿ. ಅಬ್ದುಲ್ ರಜಾಕ್ 2018ರ ಅಕ್ಟೊಬರ್ ನಲ್ಲಿ ನಿಧನರಾದ ಕಾರಣದಿಂದಾಗಿ ಕ್ಷೇತ್ರ ತೆರವಾಗಿತ್ತು.

2016ರಲ್ಲಿ ರಜಾಕ್ ಕೇವಲ 89 ಮತಗಳ ಅಂತರದಿಂದ ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಗೆಲುವು ಸಾಧಿಸಿದ್ದರು. ನಕಲಿ ಮತದಿಂದ ಗೆಲುವು ಸಾಧಿಸಿದ್ದಾಗಿ ಆರೋಪಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಹೈಕೋರ್ಟ್ ಮೆಟ್ಟಲೇರಿದ್ದರಿಂದ ಕಾನೂನು ಹೋರಾಟ ಹಿನ್ನೆಲೆಯಲ್ಲಿ ಉಪಚುನಾವಣೆ ವಿಳಂಬಗೊಂಡಿತ್ತು.

ಯು ಡಿ ಎಫ್, ಎಲ್ ಡಿ ಎಫ್ ಹಾಗೂ ಬಿಜೆಪಿಗೆ ಸಮಾನ ಗೆಲುವು ಸಾಧ್ಯತೆ ಇರುವ ಈ ಕ್ಷೇತ್ರದ ಉಪ ಚುನಾವಣೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣಾ ಘೋಷಣೆಯಾಗುತ್ತಲೇ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಯು ಡಿ ಎಫ್ ನಿಂದ ಎಂ. ಸಿ. ಖಮರುದ್ದೀನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ. ಎಂ. ಅಶ್ರಫ್ ಹಾಗೂ ಎ. ಅಬ್ದುಲ್ ರಹಮಾನ್ ಹೆಸರೂ ಕೇಳಿಬರುತ್ತಿದೆ. ಆದರೆ ಕೊನೆ ಕ್ಷಣದಲ್ಲಿ ಅನಿರೀಕ್ಷಿತವಾಗಿ ಹೊಸ ಮುಖ ಕಣಕ್ಕಿಳಿಸುವ ಸಾಧ್ಯತೆ ಇದೆ. ಬಿಜೆಪಿಯಿಂದ ಕೆ. ಸುರೇಂದ್ರನ್, ಕುಂಟಾರು ರವೀಶ ತಂತ್ರಿ, ಕೆ. ಶ್ರೀಕಾಂತ್ ಹೆಸರೂ ಕೇಳಿಬರುತ್ತಿದ್ದು, ಕೆ . ಸುರೇಂದ್ರನ್ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಎಲ್ ಡಿ ಎಫ್ ನಿಂದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ. ಆರ್ ಜಯಾನಂದ , ಶಂಕರ ರೈ ಮಾಸ್ಟರ್ ಹಾಗೂ ಮಾಜಿ ಶಾಸಕ ಸಿ. ಎಚ್ ಕುಞ0ಬು ರವರ ಹೆಸರೂ ಅಗ್ರಸ್ಥಾನದಲ್ಲಿದೆ.

ಕನ್ನಡಿಗರ ಮತ ಹೆಚ್ಚಿರುವುದರಿಂದ ಎಲ್ಲಾ ಪಕ್ಷಗಳು ಕನ್ನಡಿಗ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಸ್ಥಳೀಯ ನಾಯಕರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷಗಳು ಚರ್ಚೆ ನಡೆಸಿವೆ ಎನ್ನಲಾಗಿದೆ.

See also  ಅಮ್ಮ ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ ;ಬಾಲಕಿಯ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು