News Kannada
Sunday, November 27 2022

ಕರ್ನಾಟಕ

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಯುಡಿಎಫ್ ಅಭ್ಯರ್ಥಿ ಪ್ರಕಟ - 1 min read

Photo Credit :

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಯುಡಿಎಫ್ ಅಭ್ಯರ್ಥಿ ಪ್ರಕಟ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿಯಾಗಿ ಎಂ. ಸಿ. ಖಮರುದ್ದೀನ್ ರನ್ನು ಕಣಕ್ಕಿಳಿಸಲಾಗಿದೆ.

ಖಮರುದ್ದೀನ್ ಅವರನ್ನು ಅಭ್ಯರ್ಥಿಯನ್ನಾಗಿ ಇಂದು ಮಲಪ್ಪುರಂ ಪಾಣಕ್ಕಾಡ್ ನಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಲೀಗ್ ತೀರ್ಮಾನ ತೆಗೆದುಕೊಂಡಿದೆ. ಸಭೆ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ರಾಜ್ಯಾಧ್ಯಕ್ಷ ಸಯ್ಯಿದ್ ಹೈದರಾಲಿ ಶಿಹಾಬ್ ತಂಗಳ್ ಅಭ್ಯರ್ಥಿ ಘೋಷಣೆ ಮಾಡಿದರು.

ಎಂ. ಸಿ. ಖಮರುದ್ದೀನ್ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ. ಎಂ. ಅಶ್ರಫ್ ಅವರ ಹೆಸರು ಅಂತಿಮ ಪಟ್ಟಿಯಲ್ಲಿತ್ತು. ಎ. ಕೆ. ಎಂ. ಅಶ್ರಫ್ ಅವರಿಗೆ ಟಿಕೆಟ್ ನೀಡುವಂತೆ ಯೂತ್ ಲೀಗ್ ಹಾಗೂ ಮುಸ್ಲಿಂ ಲೀಗ್ ನ ಒಂದು ಬಣ ಒತ್ತಡ ಹೇರಿತ್ತು. ಹೊರಗಿನವರಾದ ಎಂ.ಸಿ. ಖಮರುದ್ದೀನ್ ಬದಲು ಸ್ಥಳೀಯರಾದ ಅಶ್ರಫ್ ಅವರನ್ನು ಕಣಕ್ಕಿಳಿಸುವಂತೆ ಯೂತ್ ಲೀಗ್ ಪ್ರತಿಭಟನೆ ಕೂಡಾ ನಡೆಸಿತ್ತು. ಆದರೆ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾಗಿರುವ ಎಂ. ಸಿ. ಖಮರುದ್ದೀನ್ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನ ತೆಗೆದುಕೊಂಡಿದೆ.

2011 ಮತ್ತು 2012ರಲ್ಲಿ ಮಂಜೇಶ್ವರದಿಂದ ಎಂ .ಸಿ ಖಮರುದ್ದೀನ್ ಅವರ ಹೆಸರು ಕೇಳಿಬಂದಿತ್ತು. ಆದರೆ ಅಂತಿಮ ಕ್ಷಣದಲ್ಲಿ ಪಿ. ಬಿ. ಅಬ್ದುಲ್ ರಜಾಕ್ ಟಿಕೆಟ್ ಪಡೆದಿದ್ದರು.

ಈ ಬಾರೀ ಸ್ಥಳೀಯ ಒಂದು ಬಣದ ವಿರೋಧದ ನಡುವೆ ಎಂ .ಸಿ ಖಮರುದ್ದೀನ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

2016ರಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್ ನ ಪಿ. ಬಿ. ಅಬ್ದುಲ್ ರಜಾಕ್ ಕೇವಲ 89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು . ಇದರಿಂದ ಉಪಚುನಾವಣೆ ಯುಡಿಎಫ್ ಗೆ ಸವಾಲಾಗಿದೆ

See also  ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು