News Kannada
Friday, December 02 2022

ಕರ್ನಾಟಕ

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಎಲ್ ಡಿಎಫ್ ಅಭ್ಯರ್ಥಿಯಾಗಿ ಶಂಕರ್ ರೈ ಕಣಕ್ಕೆ

Photo Credit :

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಎಲ್ ಡಿಎಫ್ ಅಭ್ಯರ್ಥಿಯಾಗಿ ಶಂಕರ್ ರೈ ಕಣಕ್ಕೆ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್ ಡಿಎಫ್ ಅಭ್ಯರ್ಥಿಯಾಗಿ ಶಂಕರ ರೈ ಮಾಸ್ಟರ್ ಕಣಕ್ಕಿಳಿಸಲಾಗಿದೆ. ಅಂತಿಮ ಕ್ಷಣದ ತನಕ ಮಾಜಿ ಶಾಸಕ ಸಿ. ಎಚ್ ಕುಞ೦ಬು ಅವರ ಹೆಸರು ಪಟ್ಟಿಯಲ್ಲಿದ್ದರೂ ಅನಿರೀಕ್ಷಿತವಾಗಿ ಶಂಕರ ರೈ ಅವರನ್ನು ಕಣಕ್ಕಿಳಿಸಲು ಪಕ್ಷವು ತೀರ್ಮಾನ ತೆಗೆದುಕೊಂಡಿತು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಇಂದು ಬೆಳಗ್ಗೆ ಅಭ್ಯರ್ಥಿ ಘೋಷಣೆ ಮಾಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಶಂಕರ ರೈ, ಪ್ರಸ್ತುತ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾಗಿದ್ದಾರೆ. .

ಕೇರಳ ತುಳು ಅಕಾಡಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಶಂಕರ ರೈ ಅವರು ಯಕ್ಷಗಾನ ಕಲಾವಿದರು. ಪುತ್ತಿಗೆ ಅಂಗಡಿಮೊಗರು ನಿವಾಸಿಯಾಗಿರುವ ಶಂಕರ ರೈ ಮಾಸ್ಟರ್, ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯ ಮುಖಂಡರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರದ ಹಿನ್ನೆಲೆಯಲ್ಲಿ ಶಂಕರ ರೈ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಅಂತಿಮ ಪಟ್ಟಿಯಲ್ಲಿ ಸಿ. ಎಚ್. ಕುಞ೦ಬು, ಸಿಪಿಎ ಜಿಲ್ಲಾ ಸಮಿತಿ ಸದಸ್ಯರಾದ ಕೆ. ಆರ್ ಜಯಾನಂದ ಹಾಗೂ ಶಂಕರ ರೈ ಅವರ ಹೆಸರಿತ್ತು. ಸಿ. ಎಚ್. ಕುಞ೦ಬು ಅವರನ್ನು ಕಣಕ್ಕಿಸುವ ನಿಟ್ಟಿನಲ್ಲಿ ಸಿಪಿಎಂ ಜಿಲ್ಲಾ ಸಮಿತಿ ನಿನ್ನೆ ತೀರ್ಮಾನಕ್ಕೆ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಅನಿರೀಕ್ಷಿತ ಬದಲಾವಣೆಯಿಂದ ಶಂಕರ ರೈ ಅವರಿಗೆ ಟಿಕೆಟ್ ನೀಡಲಾಗಿದೆ.

See also  ಕಾರಾವಾರ ಜಿಲ್ಲೆಯಲ್ಲಿ 51 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು