News Kannada
Thursday, December 08 2022

ಕರ್ನಾಟಕ

ಸುರಿದ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆಗೆ ಬಿದ್ದ ಮಣ್ಣು ತೆರವು

Photo Credit :

ಸುರಿದ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆಗೆ ಬಿದ್ದ ಮಣ್ಣು ತೆರವು

ಬೆಳ್ತಂಗಡಿ: ಬುಧವಾರ ಸಂಜೆಯ ವೇಳೆ ಚಾರ್ಮಾಡಿ ಘಾಟಿಯಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಚರಂಡಿಗಳು ಹೂಳಿನಿಂದ ತುಂಬಿ ಹೋಗಿದ್ದು ಕೆಲವಡೆ ಹಿಂದೆ ಕುಸಿದಿದ್ದ ಮಣ್ಣು ಇದೀಗ ರಸ್ತೆಗೆ ಬಂದಿದ್ದು ಅದನ್ನು ತೆರವುಗೊಳಿಸಲಾಗಿದೆ.

ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲವಾಗಿದ್ದು ಘಾಟಿಯ ಎರಡು ಭಾಗಗಳಲ್ಲಿ ಎರಡು ಜೆಸಿಬಿಗಳನ್ನು ಹಾಗೂ ಟಿಪ್ಪರ್ ಗಳನ್ನು ಇರಿಸಲಾಗಿದ್ದು ಮುಂಜಾಗ್ರತೆ ವಹಿಸಲಾಗಿದೆ.

ಘಾಟಿಯಲ್ಲಿ ಹಲವಾರು ಕಡೆಗಳಲ್ಲಿ ಹಿಂದೆ ಭೂ ಕುಸಿತವಾಗಿದ್ದು ಕುಸಿದ ಮಣ್ಣು ಹಾಗೂ ಕಲ್ಲುಗಳು ಅಲ್ಲಿಯೇ ಉಳಿದುಕೊಂಡಿದ್ದು ಮಳೆಗೆ ಅದು ಕೆಳಗೆ ಹರಿದು ಬರುತ್ತಿದೆ. ರಸ್ತೆಬದಿಯಲ್ಲಿ ಸರಿಯಾದ ಚರಂಡಿಯೂ ಇಲ್ಲದ ಕಾರಣದಿಂದಾಗಿ ಮಳೆ ನೀರು ಹಾಗೂ ಮಣ್ಣು ರಸ್ತೆಗೆ ಹರಿದು ಬರುತ್ತಿದ್ದೆ. ಅದನ್ನು ತೆರವು ಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಘಾಟಿಯಲ್ಲಿ ಕೆಲವೆಡೆ ರಸ್ತೆ ಅತ್ಯಂತ ಕಿರಿದಾಗಿದ್ದು ಒಂದು ವಾಹನದ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಇದೀಗ ಹಗಲು ಹೊತ್ತಿನಲ್ಲಿ ಮಾತ್ರ ವಾಹನಗಳಿಗೆ ಅವಕಾಶವಿದ್ದು ಅತಿ ಅಗತ್ಯವಾಗಿ ಓಡಾಡುವ ವಾಹನಗಳು ಮಾತ್ರವ ಸಂಚರಿಸುತ್ತಿದೆ.

ರಸ್ತೆಯಲ್ಲಿ ತಾತ್ಕಾಲಿಕ ಕಾಮಗಾರಿಗಳನ್ನು ಮಾತ್ರ ಮಾಡಲಾಗಿದ್ದು ರಸ್ತೆಯ ಮರು ನಿರ್ಮಾಣಕ್ಕೆ ಇನ್ನು ಕ್ರಮ ಕೈಗೊಳ್ಳಬೇಕಾಗಿದೆ. ಈಗಿನ ಸ್ಥಿತಿಯಲ್ಲಿ ಮಳೆ ಬಿಟ್ಟರೂ ಘಾಟಿಯಲ್ಲಿ ಬಸ್ ಹಾಗೂ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಒದಗಿಸುವುದು ಅಸಾಧ್ಯವಾಗಿದ್ದು ರಸ್ತೆಯ ಮರು  ನಿರ್ಮಾಣದ ಕಾರ್ಯ ನಡೆದರೆ ಮಾತ್ರ ದೊಡ್ಡ ವಾಹನಗಳಿಗೆ ಅವಕಾಶ ಸಿಗಲಿದೆ.

ಚಾರ್ಮಾಡಿ ಘಾಟಿಯಲ್ಲಿ ಇದೀಗ ಅಗತ್ಯ ಕಾಮಗಾರಿಗಲಾಗಿದ್ದು ಸಣ್ಣ ವಾಹನಗಳ ಸಂಚಾರಕ್ಕೆ ಸಮಸ್ಯೆಯಿಲ್ಲವಾಗಿದೆ. ಅತ್ಯಂತ ಪ್ರಮುಖವಾಗಿರುವ ಈ ರಸ್ತೆಯನ್ನು ಸಮಗ್ರವಾಗಿ ದುರಸ್ತಿ ಮಾಡಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.

ಚಾರ್ಮಾಡಿ ಹಸನಬ್ಬ.  ಸ್ಥಳೀಯರು.

 

 

 

See also  ಬೇಡಿಕೆ ಈಡೇರದಿದ್ದಲ್ಲಿ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ: ಅಂಗನವಾಡಿ ನೌಕರರ ಎಚ್ಚರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು