News Kannada
Tuesday, November 29 2022

ಕರ್ನಾಟಕ

ಮಹಾಲಯ ಅಮಾವಾಸ್ಯೆ: ಮಹದೇಶ್ವರ ಬೆಟ್ಟದಲ್ಲಿ ಭಕ್ತ ಸಾಗರ - 1 min read

Photo Credit :

ಮಹಾಲಯ ಅಮಾವಾಸ್ಯೆ: ಮಹದೇಶ್ವರ ಬೆಟ್ಟದಲ್ಲಿ ಭಕ್ತ ಸಾಗರ

ಚಾಮರಾಜನಗರ: ಮಹಾಲಯ ಅಮಾವಾಸ್ಯೆ ಅಂಗವಾಗಿ ಪವಾಡ ಪುರುಷ ನೆಲೆಸಿರುವ ಗಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ಎಣ್ಣೆಮಜ್ಜನ ಹಾಗೂ ಅಮವಾಸ್ಯೆ ವಿಶೇಷ ಸೇವೆ ನಡೆದಿದ್ದು, ಭಕ್ತಸಾಗರವೇ ಹರಿದು ಬಂದಿತ್ತು.

ಮಲೆ ಮಹದೇಶ್ವರನಿಗೆ  ಬೇಡಗಂಪಣ ಅರ್ಚಕ ಸಾಂಪ್ರದಾಯಿಕವಾಗಿ ಬೆಳಗ್ಗಿನ ಜಾವ 3 ಗಂಟೆಯಿಂದ 6 ಗಂಟೆವರೆಗೆ ವಿಶೇಷ ಅಮಾವಾಸ್ಯೆ ಪೂಜಾಕಾರ್ಯಗಳು ಜರುಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುವು ಮಾಡಿಕೊಡಲಾಗಿತ್ತು.

ವಿಶೇಷವಾಗಿ ಮಹದೇಶ್ವರ ಸ್ವಾಮಿಯ ಬಂಗಾರದ ತೇರು ಸಂಜೆ 7 ಗಂಟೆಗೆ ಜರುಗಿತು ಮುದ್ದು ಮಾದಪ್ಪನ 214 ಕುಂಟುಂಬದ ಭಕ್ತರು ನೆರವೇರಿಸಿದ್ದರು. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ಹುಲಿ ವಾಹನ, ಬಸವ ವಾಹನ ಮತ್ತು ರುದ್ರಾಕ್ಷಿ ಮಂಟಪದ ಉತ್ಸವವನ್ನು ಮಾದಪ್ಪ ಭಕ್ತರು ನೆರವೇರಿಸಿದರು. ಹುಲಿವಾಹನ ಉತ್ಸವ  3356 ಮಾದಪ್ಪನ ಭಕ್ತರು ಮಾಡಿಸಿದ್ದಾರೆ.  ಬಸವ ವಾಹನ 244  ಮಾದಪ್ಪನ ಭಕ್ತರು ಹಾಗೂ ರುದ್ರಾಕ್ಷಿ ಮಂಟಪ ಉತ್ಸವವನ್ನು 146 ಭಕ್ತರು ಮಾಡಿಸಿದರು.

ಸಂಜೆಯ ಎಣ್ಣೆ ಮಜ್ಜನ ವಿಶೇಷ ಪೂಜೆಯು ನಡೆದು ನಂತರ ಮಹಾ ಮಂಗಳಾರುತಿ ಸೇವೆಯು ನಡೆಯುವಾಗ ಬೇಡಗಂಪಣ ಅರ್ಚಕರಿಂದ ಸಾಂಪ್ರದಾಯಿಕವಾಗಿ ದಿವಟಿಗೆ (ಪಂಚಿನ) ಸೇವೆಯು ಜರುಗಿತು.

ಮಹದೇಶ್ವರ ಭಕ್ತರು ಉಘೇ ಉಘೇ ಉಘೇ ಮಾದಪ್ಪ ಎನ್ನುವ ಜೈಕಾರದೊಡನೆ ಮುದ್ದು ಮಾದಪ್ಪನ ದರ್ಶನ ಪಡೆದು ಸರದಿ ಸಾಲಿನಲ್ಲಿ ಬಂದು ತೀರ್ಥ ಪ್ರಸಾದ ಹಾಗೂ ಎಣ್ಣೆ ಮಜ್ಜನ ಪ್ರಸಾದವನ್ನು ಸ್ವೀಕರಿಸಿದರು.

ಇದೇ ವೇಳೆ ಧೂಪ ದೀಪ ಹಾಗೂ ಪಂಜಿನ ಸೇವೆಯನ್ನು ಮಾದಪ್ಪ ಭಕ್ತ ಸಾಗರ ಆನಂದದಿಂದ ಮಾಡಿ ಪುನೀತರಾದರು. ನಂತರ ಶ್ರೀ ಸ್ವಾಮಿಯ ಪಲ್ಲಕಿಯ ಉತ್ಸವವು ಶ್ರೀ ಸ್ವಾಮಿಯ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.

See also  ಧಾರವಾಡದಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಉಲ್ಲಂಘಿಸಿದರೆ ದಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು