News Kannada
Tuesday, November 29 2022

ಕರ್ನಾಟಕ

ಕೆಆರ್ ಎಸ್ ಹಿನ್ನೀರಲ್ಲಿ ಹೆಲಿ ರೇಡ್- ಬೋಟಿಂಗ್ ಆರಂಭ   - 1 min read

Photo Credit :

ಕೆಆರ್ ಎಸ್ ಹಿನ್ನೀರಲ್ಲಿ ಹೆಲಿ ರೇಡ್- ಬೋಟಿಂಗ್ ಆರಂಭ   

ಪಾಂಡವಪುರ: ದಸರ ಹಬ್ಬದ ಅಂಗವಾಗಿ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ ಆಯೋಜಿಸಿರುವ ಹೆಲಿ ರೇಡ್ ಹಾಗೂ ಬೋಟಿಂಗ್ ವ್ಯವಸ್ಥೆಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. 

ನಂತರ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ ದಸರ ಹಬ್ಬದ ಅಂಗವಾಗಿ ಜಿಲ್ಲಾಡಳಿತ ಮತ್ತು  ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ ಪ್ರವಾಸಿಗರಿಗಾಗಿಯೇ  ಹೆಲಿರೇಡ್ ಹಾಗೂ ಬೋಟಿಂಗ್ ವ್ಯವಸ್ಥೆಯನ್ನು  ಪ್ರಾಯೋಗಿಕವಾಗಿ  ಕಲ್ಪಿಸಿಕೊಡಲಾಗಿದೆ. ಪ್ರವಾಸಿಗರು ಹೆಲಿರೇಡ್, ಬೋಟಿಂಗ್ ವ್ಯವಸ್ಥೆಯಲ್ಲಿ ಭಾಗವಹಿಸಬಹುದಾಗಿದೆ. ಇದು ಅ.8ರವರೆಗೆ ಇರಲಿದೆ. ನಂತರ ಪ್ರವಾಸಿಗರಿಂದ ಯಾವ ರೀತಿ  ರೆಸ್ಪಾನ್ಸ್ ಬರುತ್ತದೆಯೋ ಅದರ ಮೇಲೆ ಮುಂದುವರೆಸೋದು ಬೇಡವ ಎನ್ನುವುದನ್ನು ತೀರ್ಮಾನಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರವಾಸಿಗರು ಇದರ ಸದ್ಭ್ಬಳಕೆ ಮಾಡಿಕೊಳ್ಳಬೇಕು ಎಂದರು.

 ಪ್ರತಿಷ್ಠಿತ ಚಿಪ್ಸಾನ್ ಏರ್‍ಲೈನ್ ಸಂಸ್ಥೆಯು ಹೆಲಿರೇಡ್ ಜವಬ್ದಾರಿಯನ್ನು ಹೊತ್ತಿದ್ದಾರೆ. ಹೆಲಿರೇಡ್(ಹೆಲಿಕ್ಯಾಪ್ಟರ್ ರೇಡ್)ಗೆ 2600 ರೂ.  ಬೆಲೆ ನಿಗಧಿ  ಮಾಡಿದ್ದಾರೆ. ಹೆಲಿಕ್ಯಾಪ್ಟರ್‍ನಲ್ಲಿ 6 ಮಂದಿ ಮಾತ್ರ ಒಮ್ಮೆ ಹೋಗಲು ಅವಕಾಶವಿದ್ದು ಪ್ರತಿ ರೇಡ್ 8 ನಿಮಿಷಗಳ ಕಾಲ ಗಾಳಿಯಲ್ಲಿ ಸಂಪೂರ್ಣ ಕೆಆರ್‍ಎಸ್ ಅಣೆಕಟ್ಟೆಯನ್ನು ಸುತ್ತಾಡಿಸುತ್ತಾರೆ. ಕೆಆರ್‍ಎಸ್ ಅಣೆಕಟ್ಟೆಯನ್ನು ಮೇಲಿಂದ ವೀಕ್ಷಣೆ ಮಾಡುವುದಂತು ನಿಜಕ್ಕೂ ಮರೆಯಲಾರದ ಅನುಭವಾಗುತ್ತದೆ. ಕೆಆರ್‍ಎಸ್ ಅಣೆಕಟ್ಟೆಯ ಸಂಪೂರ್ಣ ವಿಸ್ತೀರ್ಣವನ್ನು ನೋಡಬಹುದಾಗಿದೆ.

 

ದೇವಸ್ಥಾನದ ಹಿಂಭಾಗದ  ಪ್ರದೇಶದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಪೀಡ್‍ಬೋಟ್, ಝಡ್‍ಸ್ಕ್ರೀ, ಕಾಯಿಡ್ ಹಾಗೂ ತೆಪ್ಪದ ಮೂಲಕ ನೀರಿನಲ್ಲಿ ಜಾಲಿರೇಡ್ ಮಾಡಬಹುದಾಗಿದೆ. ಸ್ಪೀಡ್‍ಬೋಟ್ ರೇಡ್‍ಗೆ-150 ರೂ. ಝಡ್‍ಸ್ಕ್ರೀ- 400 ರೂ. ಕಾಯಿಡ್- 100 ಹಾಗೂ ತೆಪ್ಪಕ್ಕೆ ತಲಾ 50 ರೂ. ಬೆಲೆ ನಿಗಧಿ ಮಾಡಿದ್ದಾರೆ. ಬೋಟಿಂಗ್‍ನಲ್ಲಿ ಜಾಲಿಯಾಗಿ ಒಂದು ರೇಡ್ ಹೊರಟರೆ ಸಮುದ್ರದಲ್ಲಿ ಹೋಗುವ ಅನುಭವನ್ನು ನೀಡುತ್ತಿದೆ. ಇಷ್ಟು ದಿನ ಕೇವಲ ನೀರನ್ನು ನೋಡಿ ಸಂಭ್ರಮಿಸುತ್ತಿದ್ದ ಪ್ರವಾಸಿಗರಿಗೆ ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ ಬೋಟಿಂಗ್ ಮಾಡುವ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿಕೊಟ್ಟಿದೆ.

 ಬೋಟಿಂಗ್ ಹಾಗೂ ಹೆಲಿರೇಡ್ ಅ.8ರವರೆಗೆ ನಡೆಯಲಿದ್ದು  ಪ್ರತಿ ದಿನ ಬೆ.9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಪ್ರವಾಸಿಗರು ಹೆಲಿರೇಡ್-ಬೋಟಿಂಗ್‍ನಲ್ಲಿ ಸುತ್ತಾಡಿ ಸಂಭ್ರವಿಸಬಹುದಾಗಿದೆ.

See also  ಜಿಲ್ಲೆಯ ಪ್ರವಾಸೋದ್ಯಮ, ಸರ್ವತೋಮುಖ ಅಭಿವೃದ್ಧಿಗೆ ನಾಂದಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು